ಮಡಿಕೇರಿ, ಆ. ೨೨: ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಜಿಲ್ಲೆಯ ಯುವಕ ಮೃತಪಟ್ಟ ಘಟನೆ ತಾ.೨೧ರ ರಾತ್ರಿ ನಡೆದಿದೆ. ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ದಿ.ನರಸಿಂಹ ಹಾಗೂ ಮಂಜುಳಾ ದಂಪತಿಯ ಪುತ್ರ ವಿಜಯ್ ಹೆಚ್.ಎನ್. (೩೦), ಮೃತಪಟ್ಟ ಯುವಕ. ಮಡಿಕೇರಿ ಕೋದಂಡರಾಮ ದೇವಾಲಯ ದಸರಾ ಸಮಿತಿ ಸದಸ್ಯರಾಗಿದ್ದ ವಿಜಯ್, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ತಾ.೧೯ ರಂದು ಬೆಂಗಳೂರಿನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತದಲ್ಲಿ ವಿಜಯ್ ಅವರಿಗೆ ತೀವ್ರ ಗಾಯವಾಗಿದ್ದು, ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣ ತಾ. ೨೧ ರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆದುಳು ನಿಷ್ಕಿçಯೆಯಾಗಿದ್ದ ಕಾರಣ ಮೃತರ ಕುಟುಂಬಸ್ಥರು ಆಸ್ಪತ್ರೆಗೆ ಮೃತರ ಅಂಗಾAಗ ದಾನ ಮಾಡಿದ್ದಾರೆ. ಅಂತ್ಯಕ್ರಿಯೆ ಮಡಿಕೇರಿ ಡೈರಿ ಫಾರ್ಮ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ತಾ. ೨೩ ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ.