ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಯುವಕನ ಕೊಲೆ:ಇಬ್ಬರ ಬಂಧನ

ಬೆAಗಳೂರು, ಆ. ೨೨: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಬೈಕ್‌ನಲ್ಲಿದ್ದ ಯುವಕನನ್ನು ಕಾರಿನಲ್ಲಿ ಅಟ್ಟಾಡಿಸಿ ಗುದ್ದಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ದಿನೇದಿನೇ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದಲ್ಲಾ ಒಂದು ವಿಚಾರಕ್ಕೆ ವಾಹನ ಸವಾರರು ಜಗಳ ಮಾಡಿಕೊಳ್ಳುತ್ತಿರುವ ವರದಿಗಳು ಆಗಾಗ್ಗೆ ಕೇಳಿಬರುತ್ತಿವೆ. ಇದೀಗ ಇಲ್ಲೊಂದು ಪ್ರಕರಣದಲ್ಲಿ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೇ ಆಕ್ರೋಶ ಗೊಂಡ ಗುಂಪೊAದು ಬೈಕ್ ಸವಾರನನ್ನು ಹಿಮ್ಮೆಟ್ಟಿ ಕಾರಿನಲ್ಲಿ ಗುದ್ದಿ ಕೊಲೆ ಮಾಡಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಡೆಲಿವರಿ ಬಾಯ್ ಮಹೇಶ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹೇಶ್ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್ ಮಾಡಿದರೂ ಇವರು ಸೈಡ್ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್ ಸ್ವಲ್ಪ ಟಚ್ ಆಗಿತ್ತಂತೆ. ಇದೇ ಸಿಟ್ಟಲ್ಲಿ ಕಾರು ಚಾಲಕ ಅರವಿಂದ್, ಬೈಕ್ ಚಾಲಕನನ್ನು ಚೇಸ್ ಮಾಡಿಕೊಂಡು ಹೋಗಿದ್ದಾನೆ. ಮುಖ್ಯರಸ್ತೆಯಿಂದ ತಿರುಗಿಸುವಾಗ ಬೈಕ್‌ನಲ್ಲಿ ಹಿಂಬದಿ ಕೂತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆದರೆ, ಜಿಕೆವಿಕೆ ಲೇಔಟ್‌ಗೆ ನುಗ್ಗಿದ ಮಹೇಶ್ ಬೈಕ್‌ಗೆ ಕಾರು ಚಾಲಕ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತಿರುವಿನಲ್ಲಿದ್ದ ಮನೆಯ ಕಾಂಪೌAಡ್‌ಗೆ ಮಹೇಶ್ ತಲೆಬಡಿದಿದೆ. ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿದ್ದು, ಆತ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅಪಘಾತದ ನಂತರ ಗಾಯಗೊಂಡಿದ್ದ ಮಹೇಶ್‌ನನ್ನ ಹೊತ್ತೊಯ್ಯಲು ಕಾರು ಚಾಲಕ ಮುಂದಾಗಿದ್ದಾನೆ. ಅಷ್ಟರ ಹೊತ್ತಿಗೆ ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವ ತಕ್ಷಣ ಮಹೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇವಿ ಬ್ಯಾಟರಿ, ಚಾರ್ಜರ್ ಪರೀಕ್ಷಾ ಸೌಲಭ್ಯ

ಬೆಂಗಳೂರು, ಆ. ೨೨: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರಿಂದು ನಗರದ ಜಕ್ಕೂರಿನಲ್ಲಿರುವ ಎನ್.ಟಿ.ಹೆಚ್ - ಆರ್‌ಆರ್‌ಎಸ್‌ಎಲ್ ಕ್ಯಾಂಪಸ್‌ನಲ್ಲಿ ಬಹುನಿರೀಕ್ಷಿತ ಇವಿ ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಸೌಲಭ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ, ಜಂಟಿ ಕಾರ್ಯದರ್ಶಿ, ಎನ್.ಟಿ.ಹೆಚ್.ನ ಮಹಾನಿರ್ದೇಶಕರು ಮತ್ತು ದೇಶಾದ್ಯಂತ ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ಉದ್ಯಮದ ಕಂಪೆನಿಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಪ್ರಲ್ಹಾದ್ ಜೋಶಿ, ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಚಾಲಿತ ಉದ್ಯಮಕ್ಕೆ ಈ ಸೌಲಭ್ಯದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯದ ಪ್ರಮುಖ ಕಂಪನಿಗಳಿಗೆ ಸಮೀಪದಲ್ಲಿ ಈ ಪರೀಕ್ಷಾ ಸೌಲಭ್ಯದ ಸ್ಥಾಪನೆಯು ಉದ್ಯಮಕ್ಕೆ ಗೇಮ್ ಚೇಂಜರ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನ ಜೊತೆಗೆ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಶೀಘ್ರದಲ್ಲೇ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲು ಎನ್‌ಟಿಹೆಚ್ ಸಜ್ಜಾಗಿದೆ ಎಂದು ಅವರು ಹೇಳಿದರು. ಹೊಸ ಸೌಲಭ್ಯವು ಈ ತಯಾರಕರಿಗೆ ಸಮಗ್ರ ಪರೀಕ್ಷೆ ಮತ್ತು ಪ್ರಮಾಣೀಕರಣ ಸೇವೆಗಳನ್ನು ಒದಗಿಸುವ ಮೂಲಕ ಅತ್ಯುನ್ನತ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಅಮೂಲ್ಯವಾದ ನೆರವು ನೀಡುತ್ತದೆ. ಇಂತಹ ಉತ್ತಮ ಗುಣಮಟ್ಟದ ಪರೀಕ್ಷಾ ಸೌಲಭ್ಯದ ಲಭ್ಯತೆಯು ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಗಮನಾರ್ಹ ಸ್ಪರ್ಧಾತ್ಮಕತೆಯನ್ನು ಒದಗಿಸುತ್ತದೆ, ಅವರ ಉತ್ಪನ್ನಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಮತ್ತು ರಫ್ತಿಗೆ ಉತ್ತಮ ಸ್ಥಿತಿಯಲ್ಲಿರುತ್ತವೆ ಎಂದು ಜೋಶಿ ಹೇಳಿದರು.

ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು, ತ್ವರಿತ ನ್ಯಾಯಕ್ಕೆ ಆಗ್ರಹ

ಕೋಲ್ಕತ್ತಾ, ಆ. ೨೨: ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ. ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಇತರರಿಗೆ ಪಾಠವಾಗುವಂತಹ ಶಿಕ್ಷೆ ನೀಡಲು ಕಠಿಣ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲು ಈ ಪ್ರಕರಣಗಳನ್ನು ಫಾಸ್ಟ್ಟ್ರಾಕ್ ಕೋರ್ಟ್ ಮೂಲಕ ೧೫ ದಿನದಲ್ಲಿ ವಿಚಾರಣೆ ಮುಗಿಸಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರ ಅಲಪನ್ ಬಂಡೋಪಾಧ್ಯಾಯ ಅವರು ಪ್ರಧಾನಿಗೆ ಬರೆದ ಪತ್ರವನ್ನು ಓದಿದರು. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಲಭ್ಯವಿರುವ ಅಂಕಿಅAಶಗಳ ಪ್ರಕಾರ, ದೇಶದಲ್ಲಿ ಪ್ರತಿದಿನ ಸುಮಾರು ೯೦ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಹೈಲೈಟ್ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಮನವಿಗೆ ಸ್ಪಂದಿಸಿ ವೈದ್ಯರ ಮುಷ್ಕರ ವಾಪಸ್!

ನವದೆಹಲಿ, ಆ. ೨೨: ಕೋಲ್ಕತ್ತದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ರಾಷ್ಟçವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರಿಗೆ ಕೆಲಸಕ್ಕೆ ಮರಳುವಂತೆ ಸುಪ್ರೀಂಕೋರ್ಟ್ ಮನವಿ ಮಾಡಿದ ನಂತರ ನವದೆಹಲಿಯ ಏಮ್ಸ್ನ ಸ್ಥಾನಿಕ ಡಾಕ್ಟರ್ ಅಸೋಸಿಯೇಷನ್ ನಡೆಸುತ್ತಿದ್ದ ೧೧ ದಿನಗಳ ಮುಷ್ಕರವನ್ನು ಹಿಂತೆಗೆದುಕೊAಡಿದೆ. ಸುಪ್ರೀಂಕೋರ್ಟ್ನ ಮನವಿ ಮತ್ತು ನಿರ್ದೇಶನಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವೈದ್ಯರ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟçದ ಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆ ಹಿನ್ನೆಲೆ ಎಐಐಎಂಎಸ್‌ನ ವೈದ್ಯರ ಸಂಘ ೧೧ ದಿನಗಳ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ. ಅಲ್ಲದೆ ಆರ್‌ಎಂಎಲ್, ಐಜಿಹೆಚ್ ವೈದ್ಯರು ಸಹ ತಮ್ಮ ಮುಷ್ಕರ ಹಿಂಪಡೆದಿದ್ದಾರೆ. ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಘಟನೆ ಕುರಿತು ಸ್ವಯಂ ಪ್ರೇರಿತ ವಿಚಾರಣೆ ಮತ್ತು ದೇಶಾದ್ಯಂತ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಮತ್ತು ಭದ್ರತೆಯ ಸಮಸ್ಯೆಯನ್ನು ಪರಿಹರಿ ಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ಗೆ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಅಸೋಸಿಯೇಷನ್ ತಿಳಿಸಿದೆ. ಪ್ರತಿಭಟನಾನಿರತ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ವೈದ್ಯರ ಮಂಡಳಿ ಶ್ಲಾಘಿಸಿದೆ.

ತರಬೇತಿ ವಿಮಾನ ನಾಪತ್ತೆ, ಪೈಲೆಟ್ ಮೃತದೇಹ ಪತ್ತೆ

ರಾಂಚಿ, ಆ. ೨೨: ಜಾರ್ಖಂಡ್‌ನ ಜಮ್‌ಶೆಡ್‌ಪುರದಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದ್ದ ಎರಡು ಆಸನಗಳ ತರಬೇತಿ ವಿಮಾನದಲ್ಲಿದ್ದ ಪೈಲೆಟ್‌ನ ಮೃತದೇಹ ಗುರುವಾರ ಚಾಂಡಿಲ್ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಒಡೆತನದ ಸೆಸ್ನಾ ೧೫೨ ಎಂಬ ತರಬೇತುದಾರ ವಿಮಾನ ಮಂಗಳವಾರ ಬೆಳಿಗ್ಗೆ ಸೋನಾರಿ ಏರೋಡ್ರೋಮ್‌ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದೆ. ಬಳಿಕ ಜಲಾಶಯ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ವಿಮಾನ ಪತನಗೊಂಡಿರುವ ಶಂಕೆಯಿರುವ ಜಲಾಶಯದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಇಂದು ಬೆಳಿಗ್ಗೆ ಮೃತದೇಹ ತೇಲುತ್ತಿರುವುದು ಪತ್ತೆಯಾಯಿತು. ಇದು ಸೆರೈಕೆಲಾ-ಖಾರ್ಸಾವನ್ ಜಿಲ್ಲೆಯ ಆದಿತ್ಯಪುರ ನಿವಾಸಿ ಟ್ರೆöÊನಿ ಪೈಲೆಟ್ ಸುಭ್ರೋದೀಪ್ ದತ್ತಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಈ ಮಧ್ಯೆ ಭಾರತೀಯ ನೌಕಾಪಡೆಯ ತಂಡ ನಾಪತ್ತೆಯಾಗಿರುವ ವಿಮಾನದ ಪತ್ತೆಯೂ ಸೇರಿಕೊಂಡಿದೆ. ನೌಕಾಪಡೆಯ ೧೯ ಸದಸ್ಯರ ತಂಡವನ್ನು ವಿಶಾಖಪಟ್ಟಣದಿಂದ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.