ವರದಿ: ರಫೀಕ್ ತೂಚಮಕೇರಿ
ವೀರನಹೊಸಹಳ್ಳಿ, ಆ. ೨೧: ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಬುಧವಾರದಂದು ಸಂಭ್ರಮದಿAದ ಚಾಲನೆ ನೀಡಲಾಯಿತು. ನಾಡಹಬ್ಬವಾದ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಈ ಬಾರಿ ಪಾಲ್ಗೊಳ್ಳಲಿರುವ ಒಟ್ಟು ೧೪ ಆನೆಗಳ ಪೈಕಿ ಕೊಡಗಿನ ೬ ಆನೆಗಳು ಸೇರಿದಂತೆ ಮೊದಲ ಹಂತದ ಒಟ್ಟು ೯ ಆನೆಗಳು ಲಾರಿಗಳನ್ನು ಏರಿ ಸಾಂಸ್ಕೃತಿಕ ನಗರಿಯತ್ತ ಪ್ರಯಾಣ ಬೆಳೆಸಿದವು. ಇದರಿಂದಾಗಿ ಮೈಸೂರು ದಸರಾ ಮಹೋತ್ಸವದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ದೊರೆತಂತಾಗಿದೆ.
ಕೊಡಗು-ಮೈಸೂರು ಗಡಿಯಂಚಿನ ನಾಗರಹೊಳೆ ರಾಷ್ಟಿçÃಯ ಉದ್ಯಾನ ವ್ಯಾಪ್ತಿಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಬುಧವಾರದಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ೯ ಆನೆಗಳಿಗೆ ಪುರೋಹಿತರಾದ ಮೈಸೂರಿನ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ದಸರಾ ಗಜಪಯಣ ಕಾರ್ಯಕ್ರಮ ಆರಂಭಿಸಿದರು. ಇದಕ್ಕೂ ಮೊದಲು ವಿಶೇಷವಾಗಿ ಅಲಂಕೃತಗೊAಡಿದ್ದ ಆನೆಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಬಳಿಕ ಆನೆಗಳ ಪಾದ ತೊಳೆದು, ಆನೆಗಳ ಮೇಲಿನ ದೃಷ್ಟಿ ತೆಗೆಯಲಾಯಿತು. ನಂತರ ಆನೆಗಳ ಪಾದದ ಬಳಿ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಬಳಿಕ ಮೈಸೂರಿನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಆನೆಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಶು ಸಂಗೋಪನೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೆ.ಆರ್. ನಗರ ಶಾಸಕ ರವಿಶಂಕರ್ ಮೊದಲಾದವರು ಆನೆಗಳಿಗೆ ದೀಪ ಬೆಳಗಿ ಪುಷ್ಪಾರ್ಚನೆ ನೆರವೇರಿಸಿ ಮಾವುತರು ಮತ್ತು ಕಾವಾಡಿಗರನ್ನು ಸತ್ಕರಿಸುವುದರ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ನಂತರ ಜಿಲ್ಲಾಡಳಿತದಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೆ ವೇಳೆ ಆನೆಗಳಿಗೆ ಕಬ್ಬು, ಬೆಲ್ಲವನ್ನು ನೀಡಲಾಯಿತು. ಹೀಗೆ ೫೮ ವರ್ಷದ ಅಭಿಮನ್ಯು ನೇತೃತ್ವದಲ್ಲಿ ವರಲಕ್ಷಿö್ಮ, ಧನಂಜಯ, ಗೋಪಿ, ಭೀಮ, ದೊಡ್ಡಹರವೆ ಲಕ್ಷಿö್ಮ, ಕಂಜನ್, ರೋಹಿತ್ ಮತ್ತು ಏಕಲವ್ಯ ಹೀಗೆ ಒಟ್ಟು ೯ ಆನೆಗಳನ್ನು ನಾಡಿನತ್ತ ಬೀಳ್ಕೊಡಲಾಯಿತು.
ಪೂಜೆ ಬಳಿಕ ಗಜಪಡೆ ವೀರನಹೊಸಹಳ್ಳಿಯ ವಲಯ ಕಚೇರಿ ಬಳಿಯಿಂದ ವೀರನಹೊಸಹಳ್ಳಿ ಆಶ್ರಮ ಶಾಲೆವರೆಗೆ ಒಂದು ಕಿ.ಮೀ.ದೂರ ಕಾಲ್ನಡಿಗೆ ಮೂಲಕ ಬಂದವು. ಈ ವೇಳೆ ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು. ಜೊತೆಗೆ ಚಂಡೆ, ನಗಾರಿ, ವೀರಗಾಸೆ, ಕಂಸಾಳೆ, ಕೋಲಾಟ, ಪೂಜಾಕುಣಿತ, ಚಂಡೆ ಮೇಳ, ಗಾರುಡಿ ಗೊಂಬೆ, ಡೊಳ್ಳು ಕುಣಿತ ಸೇರಿದಂತೆ ನಾನಾ ಕಲಾವಿದರ ತಂಡಗಳು ಗಜಪಡೆಯ ಮೆರವಣಿಗೆಗೆ ಮೆರುಗು ನೀಡಿದವು.
ಗಜಪಯಣದ ಅಂಗವಾಗಿ ಕೊಡಗಿನ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಭೀಮ, ಏಕಲವ್ಯ ಮತ್ತು ದುಬಾರೆ ಶಿಬಿರದಿಂದ ಕಂಜನ್ ಧನಂಜಯ ಮತ್ತು ಗೋಪಿ ಸೇರಿದಂತೆ ವಿವಿಧ ಆನೆ ಶಿಬಿರಗಳಿಂದ ಬಂದ ಆನೆಗಳು ವೀರನಹೊಸಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದವು. ಕಾರ್ಯಕ್ರಮದ ಅಂಗವಾಗಿ ಇಡೀ ವೀರನಹೊಸಹಳ್ಳಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಇದರಿಂದ ಗಜಪಯಣ ಆರಂಭಗೊಳ್ಳುವ ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತು.
೨೦೨೪ರ ದಸರಾ ಮಹೋತ್ಸವದ ದಸರಾ ಗಜಪಡೆಗೆ ಅರಣ್ಯ ಇಲಾಖೆಯು ೧೪ ಆನೆಗಳು ಆಯ್ಕೆ ಮಾಡಿದೆ. ಅಲ್ಲದೆ ಈ ಬಾರಿ ದಸರೆಗಾಗಿ ೪ ಆನೆಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ. ಈ ವರ್ಷವೂ ಜಂಬೂಸವಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಹೆಗಲಿಗೆ ನೀಡಲಾಗಿದೆ. ಮೊದಲ ತಂಡದಲ್ಲಿ ೯ ಆನೆಗಳು ಹೊರಟರೆ, ಎರಡನೇ ತಂಡದಲ್ಲಿ ೫ ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನೇರವಾಗಿ ಮೈಸೂರಿಗೆ ತೆರಳಲಿವೆ. ೨ನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷಿö್ಮ ಮತ್ತು ಹಿರಣ್ಯ ಆನೆಗಳು ತೆರಳಲಿವೆ. ಹರ್ಷ, ಅಯ್ಯಪ್ಪ, ಪಾರ್ಥಸಾರಥಿ ಮತ್ತು ಮಾಲಾದೇವಿ ಮೀಸಲು ಆನೆಗಳಾಗಿ ಆಯ್ಕೆ ಮಾಡಲಾಗಿದೆ.