ಮಡಿಕೇರಿ, ಆ. ೨೧: ಸರಕಾರ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಕರಾಳ ಕಾನೂನು ಮತ್ತು ಕೊಡಗಿಗೆ ಮಾರಕವಾಗಿರುವ ಬಂಡವಾಳಶಾಹಿಗಳಿಗೆ ಪೂರಕ ಕಾನೂನನ್ನು ಜಾರಿಗೆ ತರುವ ಮೂಲಕ ಕೊಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಕುಟ್ಟದಲ್ಲಿ ನಡೆದ ಜನಜಾಗೃತಿ-ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕೊಡವ ಲ್ಯಾಂಡ್ ಗೆ ಮಾರಕವಾಗಿರುವ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾಗಳಂತಹ ಬಂಡವಾಳಶಾಹಿಗಳಿಗೆ ನೆರವಾಗಬಲ್ಲ ಕಾನೂನುಗಳನ್ನು ರೂಪಿಸಿ ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು.

ರಾಷ್ಟಿçÃಯ ಹೆದ್ದಾರಿಯ ಕುಟ್ಟ ಸಮೀಪದ ಪೂಚೆಕಲ್ಲು ಗ್ರಾಮದಲ್ಲಿ ಜಲಗರ್ಭ ಮತ್ತು ಭೂಗರ್ಭ ಸ್ಫೋಟಕ್ಕೆ ಇಲ್ಲಿರುವ ಕೆಲ ತೋಟಗಳು ಕಾರಣವಾಗಿವೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷö್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು. ಪ್ರಸ್ತುತ ಪೂಚೆಕಲ್ಲು ಭಾಗದಲ್ಲಿ ವಾಹನಗಳ ಸಂಚಾರವಿಲ್ಲದೆ ಜನರಿಗೆ ತೊಂದರೆಯಾಗಿದೆ.

ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತಾ.೨೯ ರಂದು ಮೂರ್ನಾಡು, ಸೆ.೯ ರಂದು ನಾಪೋಕ್ಲು ಹಾಗೂ ಸೆ.೧೦ ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ತೀತಿರ ಮನು, ಅಜ್ಜಿಕುಟ್ಟಿರ ಲೋಕೇಶ್, ಬಾಚರಣಿಯಂಡ ಚಿಪ್ಪಣ್ಣ, ಮಚ್ಚಮಾಡ ಪ್ರಕಾಶ್, ಪೆಮ್ಮಣಮಾಡ ಪ್ರಭು, ಕೈಬಿಲಿರ ದೀಪು, ತೀತಿರ ರಘು, ತಡಿಯಂಗಡ ಜಯರಾಜ್, ಮುಕ್ಕಾಟಿರ ನವೀನ್, ಕೊಂಗAಡ ಸುರೇಶ್, ಅಜ್ಜಿಕುಟ್ಟಿರ ಮುದ್ದಪ್ಪ, ಜಮ್ಮಡ ಮೋಹನ್, ಕಿರಿಯಮಾಡ ಶೆರಿನ್, ಕಾಂಡೆರ ಸುರೇಶ, ಪಾರ್ವಂಗಡ ನವೀನ್, ಅಬ್ಬೇಂಗಡ ಮಾಲೆ, ತೀತಿರ ಕುಶಾಲಪ್ಪ, ಅಜ್ಜಿಕುಟ್ಟಿರ ಬೋಪಣ್ಣ, ಚೆಪ್ಪುಡಿರ ಪಾರ್ಥ, ತಾತಿರ ವಾಸು, ಹೊಟ್ಟೆಂಗಡ ತಿಮ್ಮಯ್ಯ, ಕಳ್ಳಿಚಂಡ ಅಪ್ಪಣ್ಣ, ಮಲ್ಲಪನೇರ ಕಿಶೋರ್, ಚೋಡುಮಾಡ ರಾಜಾ, ಮಚ್ಚಮಾಡ ಪೊನ್ನಣ್ಣ, ಗುಡಿಯಂಗಡ ಚೆಂಗುಮಣಿ, ಗುಡಿಯಂಗಡ ರಾಜಾ, ಕಾಳಮಾಡ ಬೋಸು, ತೀತಿರ ಪ್ರಜ್ವಲ್, ಕೋಟ್ರಂಗಡ ಪ್ರಭು, ಕಳ್ಳಂಗಡ ರಾಯ್, ಕೊಕ್ಕಂಡ ಜಾಲಿ, ಕೋಟ್ರಂಗಡ ಅರವಿ ಕುಶಾಲಪ್ಪ, ಅಲ್ಲಾರಂಡ ರಂಜು, ಮಾಣಿಪಂಡ ಉಮೇಶ್, ಮತ್ರಂಡ ನರೇಂದ್ರ, ಮುಕ್ಕಾಟಿರ ರಿತೇಶ್, ಮಾಚಿಮಾಡ ಕಾಶಿ, ಅಯ್ಯಮಾಡ ಬೋಸು, ಸುಳ್ಳಿಮಾಡ ಭರತ್, ಚೊಟ್ಟೆಯಂಡಮಾಡ ದೇವಯ್ಯ, ಚೇರಂಡ ಅಯ್ಯಪ್ಪ, ಚಿಮ್ಮಣಮಾಡ ದಿನೇಶ್, ಕೈಬಿಲಿರ ಬೋಪಣ್ಣ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.