ಕಣಿವೆ, ಆ. ೨೧: ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯಕ್ಕೆ ಸಂಪರ್ಕಿಸುವ ಕುಶಾಲನಗರ ಹಾರಂಗಿ ಮಾರ್ಗದ ಹೆದ್ದಾರಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು ಹೆದ್ದಾರಿಯುದ್ದಕ್ಕೂ ಕಸ ತ್ಯಾಜ್ಯಗಳ ರಾಶಿ ತುಂಬಿದೆ.
ಇದರಿAದಾಗಿ ಈ ರಸ್ತೆಯಲ್ಲಿ ವಾಯು ವಿಹಾರ ಮಾಡುವ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಮೂಗು ಮುಚ್ಚಿಕೊಂಡು ಸಂಚರಿಸುವAತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದೇ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೂಕಾಂಬಿಕ ಶಿಕ್ಷಣ ಸಂಸ್ಥೆಗಳೂ ಇದ್ದು ಇಲ್ಲಿಗೆ ಧಾವಿಸುವ ವಿದ್ಯಾರ್ಥಿಗಳಂತೂ ಕಸ ತ್ಯಾಜ್ಯದ ದುರ್ವಾಸನೆಯಿಂದ ಬೇಸತ್ತಿದ್ದಾರೆ.
ಕುಶಾಲನಗರ ಪುರಸಭೆ ಅಧಿಕಾರಿಗಳು ಇತ್ತ ಧಾವಿಸಿ ಪರಿಶೀಲನೆ ನಡೆಸಿ ಮನಬಂದAತೆ ಕಸ ಬಿಸಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.