ಗೋಣಿಕೊಪ್ಪಲು. ಆ. ೨೧: ಹುಲಿ ದಾಳಿ ನಡೆಸಿ ಹಸುವನ್ನು ಬಲಿ ತೆಗೆದುಕೊಂಡ ಘಟನೆ ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿ ನಡೆದಿದೆ. ಅಲ್ಲಿನ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ದಾಳಿ ಮಾಡಿದ ಹುಲಿ ಕಾಫಿ ತೋಟಕ್ಕೆ ಎಳೆದೊಯ್ದು ಕೊಂದಿದೆ.

ಪೊನ್ನAಪೇಟೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಸ್ಥಳಕ್ಕೆ ತೆರಳಿ ಹಸುವಿನ ಮಾಲೀಕರೊಂದಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದು ಆರ್.ಎಫ್.ಓ ಶಂಕರ್ ಹಾಗೂ ಸಿಬ್ಬಂದಿಗಳನ್ನು ಬರಮಾಡಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಹುಲಿಯ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಿದರು. ಈ ಭಾಗದಲ್ಲಿ ಹುಲಿಯ ಸಂಚಾರವಿರುವುದು ಖಚಿತವಾಗಿದೆ. ತಕ್ಷಣ ಹುಲಿ ಸೆರೆಗೆ ಕ್ರಮ ಕೈಗೊಳ್ಳಲು ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ಸೂರಜ್, ಹೋರಾಟಗಾರ್ತಿ ಮೀದೇರಿರ ಕವಿತ ರಾಮು, ಹಿರಿಯರಾದ ಇಟ್ಟಿರ ಲಾಲಪ್ಪ, ಬಲ್ಯಮೀದೇರಿರ ಪ್ರಕಾಶ್ ಹಾಗೂ ಪ್ರಮುಖರು ಒತ್ತಾಯಿಸಿದರು. ಆರ್.ಎಫ್.ಒ ಶಂಕರ್ ಅವರಿಗೆ ತಕ್ಷಣ ಹುಲಿ ಸೆರೆಗೆ ಬೋನ್ ಅಳವಡಿಸಲು ಹಾಗೂ ಕೂಂಬಿAಗ್ ಕಾರ್ಯಾಚರಣೆ ನಡೆಸಲು ಮುಂದಾಗುವAತೆ ಸಂಕೇತ್ ಪೂವಯ್ಯ ಸೂಚನೆ ನೀಡಿದರು.

ಹುಲಿಯ ಸೆರೆಗೆ ಬೇಕಾದ ಅನುಮತಿ ಸಂಬAಧ ಶಾಸಕ ಪೊನ್ನಣ್ಣ ಅವರ ಗಮನಕ್ಕೆ ಇಲ್ಲಿಯ ವಿಷಯವನ್ನು ತರಲಾಗಿದೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪತ್ರ ಆದಷ್ಟು ಬೇಗ ಲಭಿಸಲಿದೆ. ಅಲ್ಲಿಯ ತನಕ ಹುಲಿಯ ಕಾರ್ಯಾಚರಣೆ ನಡೆಯಬೇಕು ತಕ್ಷಣ ಹಸುವಿನ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.

ಹುಲಿಯ ಕಾರ್ಯಾಚರಣೆ ತಂಡ ಆಗಮಿಸಿ, ಹುಲಿಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಿತು.

ಹಸುವನ್ನು ಕಳೆದುಕೊಂಡ ಮಾಲೀಕರಾದ ಇಟ್ಟಿರ ಪೊನ್ನಣ್ಣ ಮಾತನಾಡಿ, ತೋಟದ ಅನತಿ ದೂರದ ಕಾಡಿನಲ್ಲಿ ಹುಲಿಯು ಇರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹಸು ಕಾಣೆಯಾಗಿದೆ. ಇದನ್ನು ಹುಲಿ ಹಿಡಿದು ತಿಂದಿರಬಹುದು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕಾಫಿ ತೋಟದ ಸಮೀಪದಲ್ಲಿ ದಟ್ಟವಾದ ಅರಣ್ಯ ಪ್ರದೇಶವಿದ್ದು ಈ ಭಾಗದಲ್ಲಿ ಹುಲಿಯು ನೆಲೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಬೆದರು ಗುಂಡು ಹಾರಿಸುವ ಮೂಲಕ ಕಾರ್ಯಾಚರಣೆ ಆರಂಭಿಸಿದರು.

ಹುದಿಕೇರಿಯ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಸ್ಥಳೀಯ ಪ್ರಮುಖರಾದ ನೂರೆರ ಬನ್ಸಿ, ಇಟ್ಟಿರ ವಸಂತ್, ಚಂದ್ರಪ್ರಕಾಶ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. -ಹೆಚ್.ಕೆ. ಜಗದೀಶ್