ಚೆಟ್ಟಳ್ಳಿ, ಆ. ೨೧: ಚೆಟ್ಟಳ್ಳಿಯಲ್ಲಿ ತೋಟದೊಳಗಿರುವ ಬಟರ್ ಫ್ರೂಟ್ ಹಣ್ಣಿನ ಗಿಡಗಳಿಂದ ಬೀಜಗಳನ್ನು ಕಳವು ಮಾಡುತ್ತಿರುವ ಬಗ್ಗೆ ಚೆಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಹಲವೆಡೆ ಬಲು ಬೇಡಿಕೆಯ ಬಟರ್ ಫ್ರೂಟ್ ಗಿಡಗಳ ನರ್ಸರಿ ಮಾಡುತ್ತಿದ್ದು, ಕೆಲವೆಡೆಯಿಂದ ಹಣ್ಣಿನ ಬೀಜಗಳನ್ನು ಖರೀದಿಸಿ ನರ್ಸರಿ ಮಾಡಲಾಗುತ್ತಿದೆ. ಈ ನಡುವೆ ಕೆಲವು ಖದೀಮರು ಸ್ಥಳೀಯ ತೋಟದೊಳಗೆ ನುಗ್ಗಿ ಹಣ್ಣನ್ನು ಕುಯ್ದಿ ಒಡೆದು ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಸಿಕಟ್ಟಲು ಬಟರ್ ಫ್ರೂಟ್ ಹಣ್ಣಿನ ಗಿಡಗಳ ಚಿಗುರಿಗೂ ಬಲು ಬೇಡಿಕೆ ಇದ್ದು ಹಣ್ಣಿನಗಿಡಗಳ ರೆಂಬೆಯನ್ನೇ ಕತ್ತರಿಸಿ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿಯೂ ತೋಟಗಳಲ್ಲಿ ಹಣ್ಣಿನ ಬೀಜ, ಚಿಗುರನ್ನು ಕದ್ದವರನ್ನು ಹಾಗು ಖರೀದಿಸಿದವರನ್ನು ಪತ್ತೆ ಹಚ್ಚಿದ್ದ ಪೊಲೀಸರು ನಷ್ಟ ವಸೂಲಿ ಮಾಡಿದ್ದರಾದರೂ ಈ ಬಾರಿಯೂ ಹಲವೆಡೆ ಬಟರ್ ಫ್ರೂಟ್ ಹಣ್ಣಿನ ಬೀಜಗಳನ್ನು ಕಳವು ವi

Áಡಲಾಗುತ್ತಿದ್ದು, ಕಳವು ಮಾಡುತ್ತಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಪೊಲೀಸ್ ದೂರು ನೀಡಿದ್ದಾರೆ. ಪೋಲಿಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

-ಕಾಳಯ್ಯ