ಶ್ರೀಮಂಗಲ, ಆ. ೨೦: ಕೊಡವ ಕುಟುಂಬಗಳ ನಡುವೆ ವಾಲಿಬಾಲ್ ಪಂದ್ಯಾಟವನ್ನು ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಕುಟುಂಬದಿAದ ಪ್ರಥಮ ಬಾರಿಗೆ ಆಯೋಜಿಸಲಾಗಿದೆ.
ಪೊನ್ನಂಪೇಟೆ ತಾಲೂಕು ಬೆಕ್ಕೆಸೊಡ್ಲೂರು ಗ್ರಾಮದ ಕುಟುಂಬದ ಐನ್ ಮನೆಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಅವರು ಕ್ರೀಡಾಕೂಟವನ್ನು ಅಕ್ಟೋಬರ್ ೧೨ ಹಾಗೂ ೧೩ ರಂದು ಬೆಕ್ಕೆಸೊಡ್ಲೂರು ಗ್ರಾಮದ ಶಾರದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸ ಲಾಗುವುದು ಎಂದು ತಿಳಿಸಿದ್ದಾರೆ.
ಅಂತರರಾಷ್ಟಿçÃಯ ಹಾಕಿಗೆ ನಿವ್ಯಾ ಪೊನ್ನಮ್ಮ ಮತ್ತು ಅಂತರರಾಷ್ಟಿçÃಯ ಜೂನಿಯರ್ ಹಾಕಿ ತಂಡಕ್ಕೆ ವಿಲ್ಮಾ ಲೀಲಾವತಿ ಯವರನ್ನು ನೀಡಿರುವ ಕುಟುಂಬ ಇದೀಗ ಕೊಡವ ಕುಟುಂಬದಲ್ಲಿ ಸಹಕಾರ ಮನೋಭಾವ, ಸ್ನೇಹ, ಭಾಂದವ್ಯ, ಕ್ರೀಡೆ ಮೂಲಕ ಸಂಪರ್ಕ ಬೆಸೆಯಲು ಪುರುಷರ ವಾಲಿಬಾಲ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಈಗಾಗಲೇ ಕೊಡವ ಕುಟುಂಬದಿAದ ಹಾಕಿ ಪಂದ್ಯಾವಳಿ, ಕ್ರಿಕೆಟ್ ಪಂದ್ಯಾವಳಿ ಹಾಗೂ ಇತ್ತೀಚೆಗೆ ಹಗ್ಗಜಗ್ಗಾಟ ಪಂದ್ಯಾವಳಿ ಸಹ ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ವಾಲಿಬಾಲ್ ಪಂದ್ಯಾವಳಿಯನ್ನು ಆಟಗಾರರಿಗೂ, ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೌಟುಂಬಿಕ ಕ್ರೀಡಾಕೂಟವಾಗಿ ಜನಪ್ರಿಯಗೊಳಿಸಲು ನಮ್ಮ ಕುಟುಂಬದಿAದ ಈ ಪಂದ್ಯಾವಳಿ ಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.೪೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೩೦ ಸಾವಿರ ಹಾಗೂ ಟ್ರೋಫಿ , ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೨೦ ಸಾವಿರ ನಗದು ಹಾಗೂ ಟ್ರೋಫಿ, ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ರೂ.೧೦ ಸಾವಿರ ಹಾಗೂ ಟ್ರೋಫಿಯನ್ನು ನೀಡಲಾಗುವುದು. ಇದರೊಂದಿಗೆ ಪರಾಭವಗೊಳ್ಳುವ ಪ್ರತಿ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭ ಮಲ್ಲಮಾಡ ಕುಟುಂಬದ ಕಾರ್ಯದರ್ಶಿ ಈಶ್ವರ, ಕುಟುಂಬ ಸದಸ್ಯರಾದ ಅರಸು ಮೊಣ್ಣಪ್ಪ, ನರಚಂದ್ರ, ಶಾರದಾ ಬೋಪಯ್ಯ, ಬೋಪಯ್ಯ, ನರೇಂದ್ರ, ಕಾವೇರಮ್ಮ, ನಟೇಶ್ ದೇವಯ್ಯ, ಗಿರೀಶ್ ಗಣಪತಿ, ವಿಷ್ಣು, ಗಣಪತಿ, ಪ್ರಕಾಶ್, ವರ್ಷಾ ಕಿರಣ್, ಮೋಹಿತ್ ಸುಬ್ಬಯ್ಯ ಹಾಜರಿದ್ದರು.