ಕಣಿವೆ, ಆ. ೨೦ : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಸಂಪ್ರದಾಯದAತೆ ಈ ಬಾರಿಯೂ ಮೊದಲ ಹಂತದ ಗಜಪಡೆ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದಿಂದ ಮಂಗಳವಾರ ತೆರಳಿತು. ದುಬಾರೆ ಸಾಕಾನೆ ಶಿಬಿರದಲ್ಲಿನ ಕಂಜನ್, ಧನಂಜಯ ಹಾಗೂ ಗೋಪಿ ಎಂಬ ಗಂಡಾನೆಗಳನ್ನು ಪ್ರತ್ಯೇಕವಾಗಿ ಲಾರಿಗಳ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ಕಳುಹಿಸಿಕೊಟ್ಟರು.
ಈ ಸಂದರ್ಭ ಕಂಜನ್ ಆನೆಯ ಮಾವುತ - ವಿಜಯ, ಕಾವಾಡಿ - ಅನಿಲ್, ಧನಂಜಯ ಆನೆಯ ಮಾವುತ ಭಾಸ್ಕರ, ಕಾವಾಡಿ ರಾಜಣ್ಣ, ಗೋಪಿ ಆನೆಯ ಮಾವುತ ನವೀನ, ಕಾವಾಡಿ ಶಿವು ಆನೆಗಳೊಂದಿಗೆ ತೆರಳಿದರು.
ಕಂಜನ್ ಆನೆ ದಸರಾ ಜಂಭೂ ಸವಾರಿಯಲ್ಲಿ ಎರಡನೇ ಬಾರಿ ಪಾಲ್ಗೊಂಡರೆ, ಧನಂಜಯ ಐದನೇ ಬಾರಿ ಪಾಲ್ಗೊಳ್ಳುತ್ತಿದೆ. ಗೋಪಿ ಎಂಟನೇ ಬಾರಿ ಭಾಗಿಯಾಗುತ್ತಿದೆ. ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ ಸಾಕಾನೆಗಳನ್ನು ದುಬಾರೆ ಶಿಬಿರದಲ್ಲಿ ಅಲಂಕರಿಸಿ ಪೂಜಿಸಿ ಕಳುಹಿಸಲಾಯಿತು.
ಶಿಬಿರದ ಉಸ್ತುವಾರಿ ಉಪವಲಯ ಅರಣ್ಯಾಧಿಕಾರಿ ರಂಜನ್, ಉಮಾಶಂಕರ್ ಹಾಗೂ ಸಿಬ್ಬಂದಿಗಳಿದ್ದರು. ದುಬಾರೆ ಸಾಕಾನೆ ಶಿಬಿರದಲ್ಲಿ ಒಟ್ಟು ೨೬ ಸಾಕಾನೆಗಳಿದ್ದು ಈ ಪೈಕಿ
(ಮೊದಲ ಪುಟದಿಂದ) ತುಂಬು ಗರ್ಭಿಣಿ ಕಾವೇರಿ ಹಾಗೂ ಆರು ವರ್ಷ ಪ್ರಾಯದ ಪಾರ್ಥ ಇರುವುದು ಶಿಬಿರದ ವಿಶೇಷ.
ಶಿಬಿರದಲ್ಲಿನ ೨೬ ಸಾಕಾನೆಗಳ ಪೈಕಿ ಕಾವೇರಿ ಹಾಗೂ ವಿದ್ಯಾಶ್ರೀ ಎಂಬ ಎರಡು ಹೆಣ್ಣಾನೆಗಳಿದ್ದು, ೨೪ ಗಂಡಾನೆಗಳಿವೆ. ಶೀಘ್ರದಲ್ಲಿಯೇ ಶಿಬಿರಕ್ಕೆ ಮತ್ತೊಂದು ಹಸುಳೆಯ ಪ್ರವೇಶವಾಗುತ್ತಿದ್ದು, ಹೆಣ್ಣೋ ಗಂಡೋ ನಂತರ ತಿಳಿಯಲಿದೆ.
*ಗೋಣಿಕೊಪ್ಪ: ಕಾಡಿನಿಂದ ನಾಡಿನೆÀಡೆಗೆ ದಸರಾ ಅತಿಥಿಗಳಾಗಿ ತಿತಿಮತಿ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ ಮತ್ತು ಮಹೀಂದ್ರ ಆನೆಗಳನ್ನು ಮೈಸೂರು ದಸರಾ ಆಕರ್ಷಣೆಯ ಜಂಬೂಸವಾರಿಗೆ ಕಳುಹಿಸಿಕೊಡಲಾಯಿತು.
ತಿತಿಮತಿ ಆನೆ ಶಿಬಿರದಲ್ಲಿ ಮಂಗಳವಾರ ಗಜ ಪಯಣಕ್ಕೆ ಅರಣ್ಯ ಅಧಿಕಾರಿಗಳು ಪೂಜೆ ಸಲ್ಲಿಸಿ ಆನೆಗಳಿಗೆ ಹೂವಿನ ಹಾರಹಾಕಿ ಅದ್ದೂರಿಯಾಗಿ ಬೀಳ್ಕೊಟ್ಟರು.
ಮತ್ತಿಗೋಡು ಶಿಬಿರದಿಂದ ಮೂರು ಆನೆಗಳ ಪ್ರಯಾಣ ಮಂಗಳವಾರ ನಾಗರಹೊಳೆಯ ವೀರನ ಹೊಸಳ್ಳಿಗೆ ತೆರಳಿ ನಂತರ ಬುಧವಾರದಂದು ಮೈಸೂರು ಕಡೆ ಪಯಣ ಬೆಳೆಸಲಿವೆ.
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಒಟ್ಟು ೧೪ ಆನೆಗಳು ಭಾಗಿಯಾಗುತ್ತಿದ್ದು. ಈ ವರ್ಷವೂ ಮತ್ತಿಗೋಡು ಖಾಯಂ ನಿವಾಸಿಯಾಗಿರುವ ಅಭಿಮನ್ಯು ಮುಂಚೂಣಿಯ ನಾಯಕತ್ವ ವಹಿಸಿಕೊಳ್ಳಲಿದೆ.
ಅಭಿಮನ್ಯುವಿನ ಜೊತೆ ಮಾವುತನಾಗಿ ವಸಂತ ಕಾವಡಿಯಾಗಿ ರಾಜು ಮತ್ತು ಭೀಮನೊಂದಿಗೆ ಮಾವುತನಾಗಿ ಗುಂಡ, ಕಾವಾಡಿಯಾಗಿ ನಂಜುAಡಸ್ವಾಮಿ ಮತ್ತು ಮಹೇಂದ್ರ ನೊಂದಿಗೆ ಮಾವುತನಾಗಿ ರಾಜಣ್ಣ ಕಾವಡಿಯಾಗಿ ಮಲ್ಲಿಕಾರ್ಜುನ ತೆರಳಲಿದ್ದಾರೆ.
ಮೊದಲ ಅವಧಿಗೆ ಅಭಿಮನ್ಯು ಮತ್ತು ಭೀಮ ಪಯಣ ಬೆಳೆÀಸಲಿದ್ದು, ಎರಡನೇ ಅವಧಿಗೆ ಮಹೇಂದ್ರ ಮೈಸೂರು ದಸರಾದಲ್ಲಿ ಭಾಗಿಯಾಗಲು ಸಜ್ಜುಗೊಳ್ಳಲಿದ್ದಾನೆ ಎಂದು ಮತ್ತಿಗೋಡು ವನ್ಯಜೀವಿ ವಲಯ ಅರಣ್ಯಾಧಿಕಾರಿ ದೇವರಾಜ್ ಮಾಹಿತಿ ನೀಡಿದ್ದಾರೆ. -ಕೆ.ಎಸ್. ಮೂರ್ತಿ, ಎನ್.ಎನ್. ದಿನೇಶ್