ಗೋಣಿಕೊಪ್ಪ ವರದಿ, ಆ. ೧೯ : ಮೈಸೂರು ಹಿರಿಯರ ವಿಶ್ರಾಂತಿ ವಸತಿ ಗೃಹಕ್ಕೆ ತೆರಳಿದ ಕ್‌ಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಸದಸ್ಯ ೯೧ರ ಇಳೀ ವಯಸ್ಸಿನ ಬೊವ್ವೇರಿ ಯಂಡ ಎಂ. ಮೊಣ್ಣಪ್ಪ ಅವರನ್ನು ವೇದಿಕೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ವೇದಿಕೆ ಹಿರಿಯ ಸದಸ್ಯರು, ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ, ಶುಭ ಕೋರಲಾಯಿತು.

ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ಮಾತನಾಡಿ, ಮೊಣ್ಣಪ್ಪ ಅವರು ಹಿರಿಯರಾಗಿ ಚಟುವಟಿಕೆಯಲ್ಲಿ ನಿರತರಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ನಿವೃತ್ತ ಅಧಿಕಾರಿಯಾಗಿ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮೊಣ್ಣಪ್ಪ ಅವರ ಕಾಳಜಿಯಿಂದ ವಿದ್ಯಾನಿಧಿಗೆ ಆರ್ಥಿಕ ಕ್ರೋಡೀಕರಣಕ್ಕೂ ನೆರವಾಗಿದೆ. ಇವರು ಎಲ್ಲರಿಗೂ ಮಾದರಿ ಎಂದರು.

ಬೀಳ್ಕೊಡುಗೆ ನಂತರ ಬೊವ್ವೇರಿಯಂಡ ಎಂ. ಮೊಣ್ಣಪ್ಪ ಮಾತನಾಡಿ, ಎಲ್ಲರೂ ಸಮಾಜ ಸೇವೆಗೆ ಒತ್ತು ನೀಡಬೇಕಿದೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆರವಾಗುವಂತೆ ಔಷಧಗಳಿಗೆ ರಿಯಾಯಿತಿ ನೀಡಲು ಹಿರಿಯ ಸ್ವಾಮೀಜಿಗಳ ಗಮನ ಸೆಳೆದಿದ್ದೆ. ಸ್ವಾಮೀಜಿ ರಿಯಾಯಿತಿ ದರದಲ್ಲಿ ಔಷಧ ನೀಡಲು ಮುಂದಾಗಿದ್ದಾರೆ. ಇದರಿಂದ ಕಷ್ಟದಲ್ಲಿರುವ ರೋಗಿಗಳಿಗೆ ಹೆಚ್ಚು ಪ್ರಯೋಜನ ಸಿಗಲಿದೆ ಎಂದರು.

ಈ ಸಂದರ್ಭ ವೇದಿಕೆ ಕಾರ್ಯದರ್ಶಿ ಚೇಂದಿರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಪ್ರಮುಖರಾದ ಮಾಚಿಮಾಡ ಲೌಲಿ ಸೋಮಯ್ಯ, ಎಚ್. ಬಿ. ಬೋಜಮ್ಮ, ಕೇಚೆಟೀರ ಕಾಮುಣಿ ಪೂಣಚ್ಚ, ಕಳ್ಳಿಚಂಡ ಶಂಭು, ಮದ್ರೀರ ಕರುಂಬಯ್ಯ, ಡಿಕ್ಕಿ ಅಣ್ಣಯ್ಯ, ಮಾಣಿಪಂಡ ಪಾರ್ವತಿ ಜೋಯಪ್ಪ, ಮಲ್ಲಂಡ ರಾಜಾ ಸುಬ್ಬಯ್ಯ, ಮಾಚಿಮಾಡ ಕೆ. ಪೊನ್ನಪ್ಪ, ಕೆ. ಎನ್. ಕಾರ್ಯಪ್ಪ, ನೆರೆಯಂಡಮ್ಮನ ಸುಬ್ರಮಣಿ, ಕುಪ್ಪುಡೀರ ದೇವಯ್ಯ, ಮುದ್ದಿಯರ ಮುತ್ತಪ್ಪ, ಚಿಣ್ಣಮಾಡ ನೆಹರು ಇದ್ದರು.