ಮಡಿಕೇರಿ, ಆ. ೧೯ : ೨೦೨೪ರ ಶೈಕ್ಷಣಿಕ ವರ್ಷದ ವಲಯ ಮಟ್ಟದ ಸಿ.ಐ.ಎಸ್.ಸಿ.ಇ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ. ಬೆಂಗಳೂರಿನ ಇಂಡಿಯನ್ ಪಬ್ಲಿಕ್ ಸ್ಕೂಲ್ ವತಿ ಯಿಂದ ಜಯಪ್ರಕಾಶ್ ನಾರಾಯಣ್ ಯೂತ್ ಸೆಂಟರ್ನಲ್ಲಿ ಆಯೋಜಿಸ ಲಾಗಿದ್ದ ಈ ಕ್ರೀಡಾಕೂಟದಲ್ಲಿ ಕ್ಯಾಲ್ಸ್ ವಿದ್ಯಾರ್ಥಿಗಳು ಒಟ್ಟು ೧೭ ಚಿನ್ನ, ೧೬ ಬೆಳ್ಳಿ ಹಾಗೂ ೮ ಕಂಚಿನ ಪದಕಗಳನ್ನು ಹಾಗೂ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿ ದ್ದಾರೆ. ವಯೋಮಿತಿ ೧೭ ರ ವಿಭಾಗದಲ್ಲಿ ದವಲ್ ದೇವಯ್ಯ ಹಾಗೂ ಸ್ವಯಂ ಬೋಪಯ್ಯ ವೈಯಕ್ತಿಕ ಚಾಂಪಿಯನ್ ಶಿಪ್ ಅನ್ನು ಪಡೆದುಕೊಂಡರು. ವಯೋಮಿತಿ ೧೭ ರ ಬಾಲಕರ ವಿಭಾಗದಲ್ಲಿ ಹಾಗೂ ವಯೋಮಿತಿ ೧೯ ರ ಬಾಲಕಿಯರ ವಿಭಾಗದಲ್ಲಿ ವಿನ್ನರ್ಸ್ ಟ್ರೋಫಿ ಹಾಗೂ ವಯೋಮಿತಿ ೧೭ ರ ಬಾಲಕಿಯರ ವಿಭಾಗ, ವಯೋಮಿತಿ ೧೯ ಬಾಲಕರ ವಿಭಾಗದಲ್ಲಿ ರನ್ನರ್ಸ್ ಟ್ರೋಫಿಯನ್ಮು ಕ್ಯಾಲ್ಸ್ ಶಾಲೆ ಪಡೆದುಕೊಂಡಿತು.
ಶಾಲೆಯ ಸ್ವಯಂ ಬೋಪಯ್ಯ, ದವಲ್ ದೇವಯ್ಯ ಎಮ್.ಎಮ್, ಸಮಯ್ ಮಿತ್ರ, ಚರಣ್ ದೀಪ್ ಎಮ್.ಎಚ್, ಎಸ್ ಕಿಶನ್, ನಿಶ್ಚಲ್ ಗೌಡ, ಕೆ.ಎಸ್ ರಿತ್ವಿಕ್ ಶೆಟ್ಟಿ, ಸಚಿನ್ ಪಿ ಗೌಡ, ವಿರೇನ್ ತಿಮ್ಮಯ್ಯ ಎನ್.ವಿ, ದರ್ಶೀಲ್ ಸಾಯ್ ರೆಡ್ಡಿ, ಐಸಾಕ್ ಎಮ್ ಜೋಜಿ, ಸಂಸ್ಕೃತಿ ಲೂನಿಯ, ಆರ ಮಿತಾಯ್ ವಾಲ, ಜನ್ಯ ಬೊಳ್ಳಮ್ಮ, ಎ.ಎಸ್ ಗಗನ, ತನಿಶ ಬೋಪಯ್ಯ, ಶಿಕ ಕಿರಣ್, ಚಾರ್ವಿ ಬಿ.ಎನ್, ನಾಗಶ್ರೀ, ಎಮ್.ಕೆ ನೀಲಮ್ಮ, ಇಂದುಶ ಆದರ್ಶ್ ಹಾಗೂ ಟಿಸ್ಯ ಎಮ್.ಎ ಅವರುಗಳು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.