ಕುಶಾಲನಗರ, ಆ. ೧೯: ಪ್ರತಿ ಯೊಂದು ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಕರೆ ನೀಡಿದರು.
ಅವರು ಕುಶಾಲನಗರ ಭೂಮಿಕ ಮಹಿಳಾ ಹಿತರಕ್ಷಣಾ ವೇದಿಕೆಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು. ನೊಂದ ಮಹಿಳೆಯರಿಗೆ ಸಂಘಟನೆ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳ ಬೇಕು ಎಂದು ಹೇಳಿದ ಚಂದ್ರಕಲಾ ಅವರು ಎಲ್ಲಾ ರೀತಿಯ ಸಲಹೆ ಸಹ ಕಾರಗಳನ್ನು ತಮ್ಮ ಮೂಲಕ ನೀಡುವು ದಾಗಿ ತಿಳಿಸಿದರು. ಇದೇ ಸಂದರ್ಭ ಸಮಾಜ ಸೇವಕಿ ಕಮಲಾ ಕರಿಯಪ್ಪ, ಖ್ಯಾತ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವೇದಿಕೆ ಅಧ್ಯಕ್ಷೆ ಫಿಲೋಮಿನಾ ಅವರುಗಳನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯೆ ರೂಪ ಉಮಾ ಶಂಕರ್ ಮಾತನಾಡಿದರು. ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಜೆ. ಫಿಲೋಮಿನಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರಾದ ಕಮಲ ಗಣಪತಿ, ಪಾರ್ವತಿ, ವನಿತಾ ಚಂದ್ರಮೋಹನ್, ನಿರ್ಮಲಾ ಶಿವದಾಸ್, ಪದ್ಮಾವತಿ ಪರಮೇಶ್, ಧರಣಿ ಸೋಮಯ್ಯ ಜಯಪ್ರಕಾಶ್ ಉಷಾ, ಲಲಿತಾ ಮೊಣ್ಣಪ್ಪ ಜರೀನಾ ನವಮಣಿ, ಜಯಶ್ರೀ ಸುನಂದ ಮತ್ತಿತರರು ಇದ್ದರು.