ಮಡಿಕೇರಿ, ಆ. ೧೯: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವಛಾಯಾಗ್ರಹಣ ದಿನಾಚರಣೆ ಅಂಗವಾಗಿ ವನ್ಯಜೀವಿ ಛಾಯಾ ಪ್ರದರ್ಶನ ಆಯೋಜಿಸಲಾಗಿದೆ,

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ತಾ.೨೦ ರಂದು (ಇಂದು) ಸಂಜೆ ೬.೪೫ ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಹನಗೋಡು ಗ್ರಾಮದ ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್ ಅವರು ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ಕ್ಲಬ್ ಸರ್ವೀಸ್ ನಿರ್ದೇಶಕಿ ಗಾನಾ ಪ್ರಶಾಂತ್, ಸಹಾಯಕ ಗವರ್ನರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಅನಿಲ್ ಎಚ್.ಟಿ ತಿಳಿಸಿದ್ದಾರೆ, ಸಾರ್ವಜನಿಕರು ಪಾಲ್ಗೊಂಡು ವನ್ಯಜೀವಿಯ ಅಪೂರ್ವ ಛಾಯಾಚಿತ್ರಗಳನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.