ಮಡಿಕೇರಿ, ಆ. ೧೯: ಮುಂದಿನ ತಿಂಗಳು ಸೆ.೭ರಂದು ನಡೆಯಲಿರುವ ಗೌರಿ ಗಣೇಶೋತ್ಸವವನ್ನು ನಿಯಮಗಳ ಪಾಲನೆ ಮಾಡುವುದರೊಂದಿಗೆ ವ್ಯವಸ್ಥಿತವಾಗಿ ಆಚರಿಸುವಂತಾಗ ಬೇಕೆಂದು ಮಡಿಕೇರಿ ಡಿವೈಎಸ್‌ಪಿ ಮಹೇಶ್‌ಕುಮಾರ್ ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದರು.

ನಗರದ ಕಾವೇರಿ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಡಿಕೇರಿ ನಗರ, ಗ್ರಾಮಾಂತರ, ಸಿದ್ದಾಪುರ, ನಾಪೋಕ್ಲು, ಭಾಗಮಂಡಲ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಆಚರಣಾ ಸಮಿತಿಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶೋತ್ಸವ ಸಂಬAಧ ಸಂಘಟಕರು ಪೊಲೀಸ್ ಇಲಾಖೆಯಿಂದ ಅನುಮಗಳನ್ನು ನಡೆಸುವುದಾದರೆ ಗುಣಮಟ್ಟದ ವೇದಿಕೆ ನಿರ್ಮಿಸಿ ಆ ಬಗ್ಗೆ ಸಂಬAಧಿಸಿದವರಿAದ ದೃಢೀಕರಣ ಪಡೆದುಕೊಳ್ಳಬೇಕು. ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಎಚ್ಚರ ವಹಿಸಬೇಕು.

ಪೊಲೀಸ್ ಇಲಾಖೆಯಿಂದ ಮಾತ್ರವಲ್ಲದೆ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳಿAದ ಅನುಮತಿ ತೆಗೆದುಕೊಳ್ಳ ಬೇಕು. ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಯ ರಕ್ಷಣೆಯ ಜವಬ್ದಾರಿಯನ್ನು ಸಂಘಟಕರು ಸ್ವಯಂ ಸೇವಕರನ್ನು ನಿಯೋಜಿಸಿ ಅವರಿಗೆ ವಹಿಸಬೇಕು. ಮೂರ್ತಿಗಳ ರಕ್ಷಣಾ ಜವಾಬ್ದಾರಿ ಯನ್ನು ಯಾರಿಗೆ ವಹಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕೆಂದು ಮಹೇಶ್ ಕುಮಾರ್ ಹೇಳಿದರು.

ಯಾವುದೇ ದುಷ್ಕೃತ್ಯ, ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅನಾಹುತಗಳು ಸಂಭವಿಸಿದರೆ ಅದು ಹೇಗೆ ಸಂಭವಿಸಿತು ಎಂಬ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಸಂಘಟಕರು ಅಳವಡಿಸಬೇಕು. ತಿ ಪಡೆಯಬೇಕು. ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಜಾಗದ ಮಾಲೀಕ ರಿಂದಲೂ ನಿರಪೇಕ್ಷಣಾ ಪತ್ರ ಪಡೆದು ಕೊಳ್ಳಬೇಕು. ವಿದ್ಯುತ್ ಬಳಕೆ ಮಾಡುವುದಾದರೆ ವಿದ್ಯುತ್ ಇಲಾಖೆ ಯಿಂದ ಅನುಮತಿ ಪಡೆಯಬೇಕು. ಪ್ರತಿಷ್ಠಾಪನಾ ಸ್ಥಳದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸದAತೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿರುವ ಬಗ್ಗೆ ಅಗ್ನಿಶಾಮಕದಳದಿಂದಲೂ ನಿರಪೇಕ್ಷಣ ಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಅಶ್ಲೀಲತೆಗೆ ಅವಕಾಶ ನೀಡಬಾರದು. ಗಣಪತಿ ವಿಸರ್ಜನೆ ಮೆರವಣಿಗೆ, ಮೆರವಣಿಗೆ ಸಾಗುವ ದಾರಿ, ವಿಸರ್ಜನೆಯ ಸಮಯ ಇವುಗಳ ಮಾಹಿತಿಯನ್ನು ಒಳಗೊಂಡು ಗಣಪತಿ ವಿಸರ್ಜನೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು. ಒಮ್ಮೆ ಅನುಮತಿ ಪಡೆದ ಮಾರ್ಗವನ್ನು ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಗಣೇಶೋತ್ಸವ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಅದನ್ನು ಶ್ರದ್ಧಾಭಕ್ತಿಯಿಂದ, ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ನಿಯಮಗಳನ್ನು ವಿಧಿಸಲಾಗಿದೆ ಹೊರತು ಯಾರನ್ನೂ ಕಟ್ಟಿಹಾಕುವ ಉದ್ದೇಶ ನಮಗಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಂಡು ಉತ್ಸವ ಸಮಿತಿಗಳು ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕೆಂದು ಡಿವೈಎಸ್‌ಪಿ ಮಹೇಶ್‌ಕುಮಾರ್ ಮನವಿ ಮಾಡಿದರು.

ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ವಿಸರ್ಜನಾ ಮಂಟಪ ಗಳನ್ನು ಒಂದು ಟ್ರಾö್ಯಕ್ಟರ್‌ಗೆ ಸೀಮಿತಗೊಳಿಸುವುದು ಒಳಿತು ಎಂದು ಸಲಹೆಯಿತ್ತರಲ್ಲದೆ ನಿಗದಿತ ಸಮಯದೊಳಗೆ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕೆಂದರು.

ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಮಾತನಾಡಿ, ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸುವಂತಾಗಬೇಕು. ಸಮಿತಿಗಳು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಗ್ರಾಮಾಂತರ ಠಾಣೆ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಮಾತನಾಡಿ, ಬ್ಯಾನರ್ ಬಂಟಿAಗ್ಸ್ಗಳನ್ನು ಕಟ್ಟುವಾಗ ಎಚ್ಚರವಹಿಸಬೇಕು. ಸಂಬAಧಿಸಿದ ವರಿಂದ ಅನುಮತಿ ಪಡೆಯಬೇಕು. ಸಂಚಾರ ವ್ಯವಸ್ಥೆಗೆ ತೊಂದರೆ ಯಾಗದಂತೆ ಫ್ಲೆಕ್ಸ್ಗಳನ್ನು ಅಳವಡಿಸಬೇಕು ಎಂದರು. ಸಮಿತಿಗಳ ಪರವಾಗಿ ಮಾತನಾಡಿದ ಅರುಣ್ ಶೆಟ್ಟಿ ಹೆಚ್ಚು ನಿಬಂಧನೆಗಳನ್ನು ವಿಧಿಸದೆ ಉತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಪುತ್ತಂ ಪ್ರದೀಪ್ ಮಾತನಾಡಿ, ವಿಸರ್ಜನಾ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಲ್ಪ ತಡವಾದರೆ ಪೊಲೀಸ್ ಇಲಾಖೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಮಡಿಕೇರಿ ನಗರ ಠಾಣಾಧಿಕಾರಿ ಲೋಕೇಶ್, ಅಪರಾಧ ವಿಭಾಗದ ಎಸ್‌ಐ ರಾಧಾ, ಸಂಚಾರಿ ಠಾಣಾಧಿಕಾರಿ ಶ್ರೀಧರ್, ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.