ಶನಿವಾರಸAತೆ, ಆ. ೧೮: ಅಕ್ರಮವಾಗಿ ಜೂಜಾಡುತ್ತಿದ್ದ ೭ ಮಂದಿಯನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಕೊಳತ್ತೂರು ಗ್ರಾಮದ ಸಿ.ಎಂ. ಶರೀಫ್ (೪೪), ಗುಂಡೂರಾವ್ ಬಡಾವಣೆಯ ರೆಹಮಾನ್ (೪೦), ತ್ಯಾಗರಾಜ ಕಾಲೋನಿಯ ಶಫೀಕ್ ಉಲ್ (೨೬), ಹಾಸನ ಜಿಲ್ಲೆಯ ಕಲಲೆ ಗ್ರಾಮದ ಮುಮ್ತಾಜ್ (೪೬), ಅಸ್ಸಾಂ ಮೂಲದ ಶನಿವಾರಸಂತೆಯಲ್ಲಿ ನೆಲೆಸಿದ್ದ ಶಾಹಿದ್ ಇಸ್ಲಾಂ (೩೫), ಇರ್ಷಾದ್ (೩೫), ಶಹಜಹಾನ್ (೪೬) ಬಂಧಿತ ಆರೋಪಿಗಳು.

ತಾ. ೧೮ ರಂದು ಶನಿವಾರಸಂತೆ ಠಾಣೆ ವ್ಯಾಪ್ತಿಯ ತ್ಯಾಗರಾಜ ಕಾಲೋನಿಯ ಮನೆಯೊಂದರ ಮುಂಭಾಗ ಅಕ್ರಮವಾಗಿ ಜೂಜಾಡುತ್ತಿದ್ದ ಸಂದರ್ಭ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ರೂ. ೧೭ ಸಾವಿರ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ನಿರ್ದೇಶನ, ಶನಿವಾರಸಂತೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಪ್ರೀತಂ ಡಿ. ಶ್ರೇಯಕರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಎಚ್.ವೈ.ಚಂದ್ರ, ಅಪರಾಧ ವಿಭಾಗದ ಪಿಎಸ್‌ಐ ಗೋವಿಂದ್‌ರಾಜ್, ಎ.ಎಸ್.ಐ. ಶಶಿಧರ್, ಮುಖ್ಯಪೇದೆಗಳಾದ ಮಹೇಶ್, ಪ್ರದೀಪ್ ಕುಮಾರ್, ಪೇದೆಗಳಾದ ಹರ್ಷ, ಅಬ್ದುಲ್ ರಹಿಂ ವಾಲಿಕಾರ್, ಶಿವಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.