ಮಡಿಕೇರಿ, ಆ. ೧೮: ನಗರ ಟ್ರಾಫಿಕ್ ಪೊಲೀಸ್ ಠಾಣೆ ವತಿಯಿಂದ ಎಡಿಜಿಪಿರವರ ಆದೇಶದ ಮೇರೆಗೆ ಸ್ಪೀಡೋಮೀಟರ್ ಮೂಲಕ ವಾಹನಗಳನ್ನು ತಪಾಸಣೆ ನಡೆಸಿ ಅತಿಯಾದ ವೇಗ ಚಾಲನೆ ಹಾಗೂ ‘ಡಿಫೆಕ್ಟಿವ್ ನಂಬರ್ ಪ್ಲೇಟ್’ ಹೊಂದಿರುವ ವಾಹನಗಳಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಮಡಿಕೇರಿ ಸಂಚಾರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಮುಂದಾಳತ್ವದಲ್ಲಿ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಲಾಯಿತು.