*ಗೋಣಿಕೊಪ್ಪ, ಆ. ೧೩: ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ಕಾರ್ಯಕ್ರಮ ವಿಜಯಲಕ್ಷಿö್ಮ ಪ್ರೌಢ ಶಾಲೆಯಲ್ಲಿ ನಡೆಯಿತು. ಮುಖ್ಯೋ ಪಾಧ್ಯಾಯ ಚಂದ್ರಶೇಖರ್ ವಿದ್ಯಾರ್ಥಿ ಗಳಿಗೆ ಲೇಖನಿಯ ಮಹತ್ವದ ಬಗ್ಗೆ ತಿಳಿಸಿದರು. ವಿಶ್ವ ಶಾಂತಿಗೆ ಲೇಖನಿ ಹಿಡಿಯಿರಿ, ವಿಶ್ವ ಮಾನವರಾಗಿ ಎಂಬ ಸಮಾಜದ ತತ್ವ ಸಿದ್ದಾಂತವನ್ನು ಬೆಂಬಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಪಿ. ರಾಘವೇಂದ್ರ, ಸುಬ್ಬಯ್ಯ ಡಿ.ಎನ್., ಬೆನಡಿಕ್ಟ್ ಫರ್ನಾಂಡಿಸ್, ತಿಮ್ಮರಾಜ್, ಜಯಣ್ಣ ಎ.ಎಂ., ಪ್ರಭು ಕುಮಾರ್, ಚಂದ್ರಾವತಿ ಹಾಜರಿದ್ದರು. ಕಾರ್ಯ ಕ್ರಮದ ಸಂಚಾಲಕಿ ಕೆ.ಟಿ. ವಾತ್ಸಲ್ಯ ತಾವೇ ತಯಾರಿಸಿದ ಲೇಖನಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.