ವೀರಾಜಪೇಟೆ, ಆ. ೧೩: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ಐದು ವರ್ಷಕ್ಕೆ ಪದರ್ಪಣೆ ಮಾಡುತ್ತಿದ್ದು ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರಕುತ್ತಿರುವುದರಿಂದ ಆರ್ಥಿಕ ವ್ಯವಹಾರಗಳು ಪ್ರಗತಿಯಲ್ಲಿ ಸಾಗುತ್ತಿವೆ ಎಂದು ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಸ್ಥೆಯು ೧೩೧೦ ಸದಸ್ಯರುಗಳನ್ನು ಹೊಂದಿದೆ. ಪಾಲು ಬಂಡವಾಳ ೮೦.೧೦ ಲಕ್ಷಗಳಾಗಿದ್ದು ವಿವಿಧ ಠೇವಣಿಗಳಿಂದ ೬೦೭.೩೧ ಲಕ್ಷ ಸಂಗ್ರಹಣೆ ಆಗಿದೆ. ೪೬೪.೬೬ ಲಕ್ಷ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು ಶೇ ೯೯.೨೫ ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ ೨೪೦ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೩-೨೪ನೇ ಸಾಲಿನಲ್ಲಿ ೧೭,೮೩,೭೬೪ ಲಕ್ಷ ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿಗಳ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು. ೨೦೨೩-೨೪ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ ೧೦ ರಷ್ಟು ಡಿವಿಡೆಂಟ್ ಹಂಚಲು ಕ್ರಮ ವಹಿಸಲಾಗಿದ್ದು ಮುಂದಿನ ಸಾಲಿನಲ್ಲಿ ಇನ್ನು ಹೆಚ್ಚಿನ ಲಾಭ ಗಳಿಸುವ ವಿಶ್ವಾಸ ಇದೆ ಎಂದರು.

ಈ ಸಾಲಿನಿಂದ ಎಲ್ಲಾ ರೀತಿಯ ಸಾಲಗಳಿಗೆ ವಿಮಾ ಕಂಪೆನಿಯಿAದ ಭದ್ರತೆಯನ್ನು ಒದಗಿಸಲಾಗುವುದು. ನಾವು ಈಗಾಗಲೇ ಒಂದು ಶಾಖೆಯನ್ನು ಅಮ್ಮತ್ತಿಯಲ್ಲಿ ಪ್ರಾರಂಭಿಸಿದ್ದು, ಇನ್ನು ಮುಂದಕ್ಕೂ ಈ ಸಹಕಾರಿ ಕಾರ್ಯವ್ಯಾಪ್ತಿಯ ಒಳಗಡೆ ಸಹಕಾರಿಯ ಸದಸ್ಯರುಗಳಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ನೂತನ ಶಾಖೆಗಳನ್ನು ಆರಂಭಿಸುವ ಯೋಜನೆಯನ್ನು ಕೈಗೊಳ್ಳಲಾಗುವುದು.

ತಾ. ೨೪ ರಂದು ಪಟ್ಟಣ ಸಹಕಾರ ಬ್ಯಾಂಕ್‌ನ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ನಡೆಸಲಾಗುವುದು. ಮಹಾಸಭೆಯ ಪುಸ್ತಕವನ್ನು ಸಂಘದ ಕಚೇರಿಯಿಂದ ಪಡೆದುಕೊಳ್ಳಬಹುದು. ಈ ಸಾಲಿನಿಂದ ಸದಸ್ಯರುಗಳ ಮಕ್ಕಳು ಹಾಗು ಸಂಸ್ಥೆಯ ಪಿಗ್ಮಿ ಏಜೆಂಟರುಗಳ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯು ಸಂಪೂರ್ಣ ಗಣಕೀಕೃತ ವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸೆಟ್ ಲಾಕರ್, ಕ್ಯಾಶ್‌ಲೆಸ್ ಸೇವೆಗಳಾದ ಆರ್.ಟಿ.ಜಿ.ಎಸ್, ಮೊಬೈಲ್ ಬ್ಯಾಂಕಿAಗ್ ಮತ್ತು ಇ ಸ್ಟಾಂಪಿAಗ್ ಮತ್ತಿತರ ಸೌಲಭ್ಯವನ್ನು ನೀಡಲಾಗುತ್ತಿದೆ. ಸಹಕಾರಿಯಲ್ಲಿ ಪಿಗ್ಮಿ ಸಾಲ ಸೇರಿದಂತೆ ಎಲ್ಲಾ ವಿವಿಧ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿ ಗಳೊಂದಿಗೆ ಸದಸ್ಯರಿಗೆ ವಿತರಿಸ ಲಾಗುತ್ತಿದೆ.

ಈಗಾಗಲೇ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಬೈಲಾ ತಿದ್ದುಪಡಿ ಮಾಡಲಾಗಿದೆ. ಬೈಲಾ ನಿಯಮದಡಿ ಕನಿಷ್ಟ ಪಾಲು ಹಣ ಪೂರ್ಣ ಗೊಳಿಸದಿದ್ದಲ್ಲಿ, ನಿರಂತರ ವರ್ಷಗಳಲ್ಲಿ ಸಹಕಾರಿಯ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳಲು ತಪ್ಪಿದಲ್ಲಿ, ಐದು ಮಹಾಸಭೆಗಳ ಪೈಕಿ ಕನಿಷ್ಠ ೨ ಮಹಾಸಭೆಗಳಿಗೆ ಹಾಜರಾಗದಿದ್ದಲ್ಲಿ ಅಂತಹ ಸದಸ್ಯರು ಮುಂದಿನ ೧ ವರ್ಷದವರೆಗೆ ಮಹಾಸಭೆಯಲ್ಲಿ ಭಾಗವಹಿಸಲು ಮತ್ತು ಮಂಡಳಿಯ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಕಾಂಡAಡ ಎಂ. ಚರ್ಮಣ, ನೆಲ್ಲಚಂಡ ಎಂ. ಭೀಮಯ್ಯ, ವಾಂಚಿರ ಟಿ. ನಾಣಯ್ಯ, ವಾಟೇರಿರ ಎಸ್. ಪೂವಯ್ಯ, ಚೇಂದ್ರಿಮಡ ಕೆ. ನಂಜಪ್ಪ, ಕೇಳಪಂಡ ಎನ್. ವಿಶ್ವನಾಥ್, ಕೊಂಗAಡ ಎ. ನಾಣಯ್ಯ, ಕಾಳೇಂಗಡ ಬಿ. ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ವಿ. ದಿವ್ಯ, ನೆಲ್ಲಮಕ್ಕಡ ಸಿ. ಬೆಳ್ಯಪ್ಪ, ಬೊಳ್ಳೆಪಂಡ ಎಂ ಸುರೇಶ್, ಐನಂಡ ಪಿ. ಗಣಪತಿ, ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಟ್ಟಡ ಸಿ. ಟೀನಾ ಉಪಸ್ಥಿತರಿದ್ದರು.