ಐಗೂರು, ಆ. ೧೩: ಗ್ರಾಹಕರು ತಮ್ಮ ಬ್ಯಾಂಕಿನ ಖಾತೆಗಳಲ್ಲಿ ಹೆಚ್ಚು ಹೆಚ್ಚು ಹಣದ ಠೇವಣಿಗಳನ್ನು ಇಟ್ಟು ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಾ ಬ್ಯಾಂಕಿನ ಶಾಖೆಗಳನ್ನು ಹೆಚ್ಚಿಸಬೇಕೆಂದು ಐಗೂರು ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ಆನಂದ ಬಾಬು ಅವರು ಬ್ಯಾಂಕಿನ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದರು. ಅವರು ಬ್ಯಾಂಕ್ ಆಫ್ ಬರೋಡ ಐಗೂರು ಶಾಖೆಯಲ್ಲಿ ಏರ್ಪಡಿಸಿದ್ದ ೧೧೭ನೇಯ ವಾರ್ಷಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ಯಾಂಕ್ ಸಿಬ್ಬಂದಿ ವಿರಾಟ್ ಸ್ವಾಗತಿಸಿದರು. ಎಸ್.ಎಂ. ಚಂಗಪ್ಪನವರು ಮಾತನಾಡಿ ಗ್ರಾಹಕರು ತಾವು ಪಡೆದ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸಿದರೆ ಮತ್ತೆ ಮತ್ತೆ ಬ್ಯಾಂಕಿನಿAದ ಸಾಲಗಳನ್ನು ಪಡೆಯಬಹುದು ಎಂದರು. ಬ್ಯಾಂಕಿನ ಕೇಂದ್ರ ಕಚೇರಿಯಿಂದ ಒಂದು ಲಕ್ಷದ ಹದಿನೇಳು ಸಾವಿರ ಗಿಡಗಳನ್ನು ಗ್ರಾಹಕರಿಗೆ ಉಚಿತವಾಗಿ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಒಂದೊAದು ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಂಘದ ಕಾರ್ಯ ನಿರ್ವಹಣಾಧಿಕಾರಿ ಡಿಕ್ಕಿ ರಾಜು, ಬ್ಯಾಂಕಿನ ವ್ಯವಸ್ಥಾಪಕರಾದ ಆನಂದ ಬಾಬು, ಸಿಬ್ಬಂದಿಗಳಾದ ಪ್ರವೀಣ ,ವಿರಾಟ್, ಪೂಜಾ, ಬ್ಯಾಂಕ್ ಆಫ್ ಬರೋಡಾದ ಸೇವಾ ಕೇಂದ್ರದ ಸಿಬ್ಬಂದಿಗಳಾದ ಹರಿದಾಸ್, ಸಂತೋಷ್, ತೇಜಸ್ವಿ ಮತ್ತು ಜೈನುದ್ದೀನ್ ಭಾಗವಹಿಸಿದ್ದರು.