ಐಗೂರು, ಆ. ೯: ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಪೇಟೆಯ ಉದ್ಯಮಿ ಕುಮಾರ್ ಅವರು ಉಚಿತವಾಗಿ ಟೀ ಶರ್ಟ್ಗಳನ್ನು ನೀಡಿದರು.

ಶಾಲೆಯ ಒಟ್ಟು ೬೫ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ವಿತರಿಸಿದರು. ಈ ಸಂದರ್ಭ ಪತ್ರಕರ್ತ ಸುಕುಮಾರ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಆಶಾ, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಇಂದಿರಾ, ಭಾರತಿ ಮತ್ತು ಮಾನಸ ಭಾಗವಹಿಸಿದ್ದರು.