ಮಡಿಕೇರಿ, ಆ. ೯: ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ತರಗತಿ ಪ್ರತಿನಿಧಿಗಳ ಹಾಗೂ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲಾಯಿತು.

ಪ್ರತಿ ತರಗತಿಯಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ನಂತರ ನಡೆದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಹರ್ಷ ಎಸ್. ದ್ವಿತೀಯ ವಾಣಿಜ್ಯ ವಿಭಾಗ, ಜಂಟಿ ಕಾರ್ಯದರ್ಶಿಗಳಾಗಿ ಕೃತಿಕ್ ರೋಷನ್ ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ದೀಷ್ಮಾ ವಿ.ಎಸ್. ದ್ವಿತೀಯ ಕಲಾ ವಿಭಾಗ, ಕ್ರೀಡಾ ಕಾರ್ಯದರ್ಶಿಯಾಗಿ ನಾಣಯ್ಯ ಕೆ.ಎಸ್. ದ್ವಿತೀಯ ಕಲಾ ವಿಭಾಗ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನನ್ಯ ಸಿ.ವಿ. ದ್ವಿತೀಯ ವಾಣಿಜ್ಯ ವಿಭಾಗದಿಂದ ಆಯ್ಕೆಗೊಂಡಿದ್ದಾರೆ.