ಚೆಯ್ಯಂಡಾಣೆ, ಆ. ೯: ಆಟಿಕಳಂಜ (ಕಕ್ಕಡತಜ್ಜಿ) ಎಂಬ ಸಾಂಪ್ರದಾಯಿಕ ಆಚರಣೆ ಚೆಯ್ಯಂಡಾಣೆ ಸಮೀಪದ ನರಿ ಯಂದಡ ಗ್ರಾಮದಲ್ಲಿ ರೂಢಿಯಲ್ಲಿದೆ.
ಕೊಡಗಿನಲ್ಲಿ ಆಟಿ ಕಳಂಜ (ಕಕ್ಕಡತಜ್ಜಿ) ಅನಾದಿ ಕಾಲದಿಂದಲೂ ಇದೆ. ಆದರೆ ಇಂದು ಇದು ಮರೆಯಾಗುವ ಅಂಚಿನಲ್ಲಿದ್ದು, ತನ್ನ ಎಲ್ಲಾ ಆಚರಣೆಯನ್ನೇ ಕಳೆದ Äಕೊಳ್ಳುತ್ತಿದೆ. ಆಟಿ ತಿಂಗಳಲ್ಲಿ ಕೊಡಗಿನ ದೇವಾಲಯದಲ್ಲಿ ಪೂಜೆ ಪುನಸ್ಕಾರ ಇರುವುದಿಲ್ಲ. ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾದ ಅರಮನೆ ಪಾಲೆ ಜನಾಂಗದವರು ಆಟಿ ಕಳಂಜ ಕಕ್ಕಡತಜ್ಜಿ ಆಚರಣೆಯನ್ನು ಪ್ರಾಚೀನ ಕಾಲದಿಂದಲೂ ನಡೆಸುತ್ತಾ ಬರುತ್ತಿದ್ದಾರೆ.
ಕೊಡಗಿನ ನರಿಯಂದಡ ಗ್ರಾಮದ ತೆರ್ಮೆಕಾಡು ಪೈಸಾರಿಯಲ್ಲಿ ವಾಸವಾಗಿರುವ ಅರಮನೆ ಪಾಲೆ ಜನಾಂಗದವರು ಈ ಆಚರಣೆಯನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಯಲ್ಲಿ ಮೂರು ವೇಷಧಾರಿಗಳು ಇರುತ್ತಾರೆ. ಆಟಿ ಅಜ್ಜಿ, ದೊಡ್ಡ ಕಳಂಜ, ಸಣ್ಣ ಕಳಂಜ ಎಂಬ ೩ ವೇಷಧಾರಿಗಳು ಇರುವರು,ಆಟಿ ಅಜ್ಜಿ ವೇಶಧಾರಿ ಮುಖಕ್ಕೆ ಬಣ್ಣ ಬಳೆದು ಹಣೆಗೆ ತಳಪಳಿ ಕಟ್ಟಿ, ಕೆಂಪು ವಸ್ತç ಧರಿಸಿ ಕೈಯಲ್ಲಿ ನೆಕ್ಕಿ ಸೊಪ್ಪುನ್ನು ಹಿಡಿದಿರುತ್ತಾರೆ. ದೊಡ್ಡ ಕಳಂಜ ಮೈಯಲ್ಲಾ ಕಪ್ಪು ಬಣ್ಣ ಬಳಿದುಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ಮರದ ಮುಖವಾಡವನ್ನು ಧರಿಸಿರುತ್ತಾರೆ. ಸಣ್ಣ ಕಳಂಜ ಮೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಮೀಸೆ ಧರಿಸಿರುತ್ತಾನೆ.
ಮೊದಲನೆಯ ದಿನ ಆಟಿ ಕಳಂಜ ವೇಷÀಧರಿಸಿ ಇವರು ಅರಪಟ್ಟು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮದ ತಕ್ಕ ಮುಖ್ಯಸ್ಥರ ಮನೆಗೆ ಚಂಡೆ ವಾದ್ಯದೊಂದಿಗೆ ಹಾಡಿನೊಂದಿಗೆ ಕುಣಿಯುತ್ತಾ ಚಂಡೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ತೆರಳುತ್ತಾರೆ. ಬಳಿಕ ಮನೆ ಮನೆಗೆ ತೆರಳಿ ಅಕ್ಕಿ ಧಾನ್ಯಗಳನ್ನು ಅವರಿಂದ ಪಡೆದು ಊರಿಗೆ ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ.
ಸುಮಾರು ೮ ದಿನಗಳ ಕಾಲ ಈ ಆಚರಣೆ ನಡೆಯುತ್ತಿದೆ. ಮೊದಲ ದಿನ ಅರಪಟ್ಟು ಭಗವತಿ ದೇವಾಲಯ ೨ನೇ ದಿನ ಚೇಲಾವರ ಗ್ರಾಮದ ಪೊನ್ನೋಲ ದೇವಾಲಯ, ೩ನೇ ದಿನ ಕಿರುಂದಾಡು ದೇವಾಲಯಕ್ಕೆ ತೆರಳುವರು. ಎಲ್ಲಾ ಊರುಗಳನ್ನು ಸುತ್ತಿ, ಅವರಿಂದ ಧನ ದವಸ ಧಾನ್ಯಗಳನ್ನು ಸ್ವೀಕರಿಸಿ ೫ ದಿನಗಳ ಕಾಲ ಸಂಭ್ರಮಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ. ಹಿಂದಿನ ಕಾಲದಲ್ಲಿ ಈ ಆಚರಣೆಯನ್ನು ಎಲ್ಲಾ ಗ್ರಾಮಗಳಲ್ಲೂ ಅರಮನೆ ಪಾಲೆ ಜನಾಂಗದವರು ಆಚರಿಸುತ್ತಿದ್ದರು.
ವೇಷಧಾರಿಗಳು ತುಳು ಭಾಷೆ ಯನ್ನು ಮಾತನಾಡುವ ಜನಾಂಗದ ವರಾಗಿದ್ದಾರೆ. ವೇಷಧರಿಸಿದ ನಂತರವು ತುಳು ಭಾಷೆಯಲ್ಲಿಯೇ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಾರೆ. ವೇಶಧಾರಿಗಳ ಜೊತೆಯಲ್ಲಿ ಚಂಡೆಯವರು ಮತ್ತು ಇಬ್ಬರು ಹೆಂಗಸರು ಕುಕ್ಕೆಯನ್ನು ತಲೆಯಲ್ಲಿಟ್ಟು, ಇವರೊಂದಿಗೆ ಊರೂರು ಸುತ್ತಿ, ಜನರಿಂದ ಅಕ್ಕಿಬೆಲ್ಲ, ಮೆಣಸು ಉಪ್ಪು ವಸ್ತುಗಳನ್ನು ದಾನ ವಾಗಿ ಪಡೆಯುತ್ತಾರೆ. ಈ ಆಚರಣೆ ನೇತೃತ್ವವನ್ನು ಅರಮನೆ ಪಾಲೆ ಜನಾಂಗದವರ ಮುಖಂಡ ಗಣೇಶ್ ಅವರ ನೇತೃತ್ವದಲ್ಲಿ ಆರಂಭಗೊAಡಿದೆ.
ತAಡ ತೆರಳುವ ಮಾರ್ಗ
ತಾ.೯ರ (ನಿನ್ನೆ)ಯಿಂದ ಅರಪಟ್ಟು ಭಗವತಿ ದೇವಸ್ಥಾನಕ್ಕೆ ತೆರಳಿ ದೇವತಕ್ಕರಾದ ಮುಕ್ಕಾಟ್ಟಿರ, ಕೋಡಿರ, ಅನ್ನಂಬಿರ, ನಂಬಿಯಪAಡ, ಬಿದ್ದೇರಿಯಂಡ ಐನ್ಮನೆ ಹಾಗೂ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮನೆಗೆ ತೆರಳಿದ್ದಾರೆ. ತಾ. ೧೦ ರಂದು (ಇಂದು) ಚೇಲ್ಮಂಡ, ನೆರಪಂಡ, ಪಾಂಡAಡ, ಐತಿಚಂಡ ಐನ್ಮನೆಗೆ ತೆರಳುತ್ತಾರೆ.
ತಾ. ೧೧ ರಂದು ಚೇಲಾವರ ಪೊನ್ನೋಲ ಪುದಿಯೋದಿ ದೇವಾಲಯಕ್ಕೆ ತೆರಳಿ ನಂತರ ದೇವತಕ್ಕರಾದ ಅಮ್ಮಂಗಡ ನಂದ ಕುಮಾರ್, ಹೊಸೋಕ್ಲು ಐನ್ಮನೆ, ಬಾಚಮಂಡ, ನರಿಯಂದಡ ಭಗವತಿ ದೇವಾಲಯಕ್ಕೆ ತೆರಳಿ ದೇವತಕ್ಕರಾದ ಬೋವ್ವೇರಿಯಂಡ ಐನ್ಮನೆ, ಚೆಯ್ಯಂಡ, ಕೋಲೀರ, ಮಕ್ಕಿಮನೆ, ಮುಂಡಿಯೋಳAಡ ಪಾಪು ಮಾಚಯ್ಯ ಅವರ ಮನೆಗೆ ತೆರಳುತ್ತಾರೆ.
ತಾ. ೧೨ ರಂದು ಕಿರುಂದಾಡು ಭಗವತಿ ದೇವಸ್ಥಾನ, ದೇವತಕ್ಕರಾದ ಮುಕ್ಕಾಟಿರ, ಮುಕ್ಕಾಟಿ, ನಾಳಿಯಂಡ, ನಾಟೋಳಂಡ, ಬೊಟ್ಟೋಳಂಡ ಮನೆಗೆ, ತಾ. ೧೩ ರಂದು ಕೊಕೇರಿ ಭಗವತಿ ದೇವಸ್ಥಾನ,ದೇವತಕ್ಕರಾದ ಮೂಡೆರ, ಚೇನಂಡ, ಕುಮ್ಮಂಡ, ಮಚ್ಚಂಡ, ಬಿದ್ದಂಡ, ಚೇರುವಾಳಂಡ, ಬೆಳಿಯಂಡ್ರ, ತಾ. ೧೪ ರಂದು ಮಂಞಪುರ, ಪೊಕ್ಕುಳಂಡ್ರ, ತಾ:೧೫ ರಂದು ತೊಟಂಬೈಲು, ಪೊಕ್ಕುಳಂಡ್ರ, ತಾ.೧೬ ರಂದು ಬೆಳಿಯಂಡ್ರ ಮನೆಗೆ ತೆರಳಿ ಅಂದು ರಾತ್ರಿ ಕೊನೆಗೊಳ್ಳಲಿದೆ.
-ಅಶ್ರಫ್