ಕುಶಾಲನಗರ, ಆ. ೬: ಕುಶಾಲನಗರ ಗಣಪತಿ ದೇವಾಲಯದ ಮೂಲ ವಿಗ್ರಹಕ್ಕೆ ದಾನಿಗಳು ೧೨ನೇ ಅವತಾರದ ಬೆಳ್ಳಿಯ ಕವಚವನ್ನು ಅರ್ಪಿಸಿದರು.
ಮೂಲತಃ ಬೆಂಗಳೂರಿನ ನಿವಾಸಿಗಳು ಪ್ರಸಕ್ತ ಅಮೇರಿಕದಲ್ಲಿ ಉದ್ಯೋಗದಲ್ಲಿರುವ ವಿದ್ಯಾ ಮಂಜುನಾಥ ದಂಪತಿ ದೇವಾಲಯ ದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ದೇವಾಲಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.
ಶ್ರೀ ಗಣಪತಿಯ ೩೨ ಅವತಾರದಲ್ಲಿ ಈಗಾಗಲೇ ೧೨ನೇ ಅವತಾರದ ಬೆಳ್ಳಿಯ ಕವಚ ದೇವರಿಗೆ ಸಮರ್ಪಣೆಯಾಗಿದೆ ಇನ್ನೂ ೨೦ ಅವತಾರಗಳ ಕವಚಗಳು ಮುಂದಿನ ದಿನಗಳಲ್ಲಿ ದಾನಿಗಳಿಂದ ದೊರೆಯುವ ಆಶಯವನ್ನು ದೇವಾಲಯದ ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರ ಬಾಬು ಅವರು ವ್ಯಕ್ತಪಡಿಸಿದರು. ಈ ಸಂಬAಧ ದೇವಾಲಯದಲ್ಲಿ ವಿಶೇಷ ಹೋಮ ಹವನ ಕಾರ್ಯಕ್ರಮಗಳು ಜರಗಿದವು. ದೇವಾಲಯದ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ವಿ.ಎನ್. ವಸಂತ್ ಕುಮಾರ್, ಅರ್ಚಕರಾದ ರಾಘವೇಂದ್ರ ಭಟ್, ಶ್ರೀನಿವಾಸರಾವ್, ಅಪ್ಪಣ್ಣ ಕೆ.ಎನ್. ದೇವರಾಜ್ ಚಂದ್ರು ಮತ್ತು ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಇದ್ದರು.