ಮಡಿಕೇರಿ, ಆ.೬ : ವೀರಾಜಪೇಟೆ ಪಟ್ಟಣದಲ್ಲಿ ನಡೆಯುವ ಪಂಜಿನ ಮೆರವಣಿಗೆ ಹಾಗೂ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ರ ಕಲಂ ೧೬೩ ಮತ್ತು ಮೋಟಾರು ವಾಹನ ಕಾಯ್ದೆ ೧೯೮೮ರ ಕಲಂ ೧೧೫ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ೧೯೮೯ರ (ತಿದ್ದುಪಡಿ ನಿಯಮಗಳು ೧೯೯೦) ನಿಯಮ ೨೨೧ಎ(೫)ರಲ್ಲಿ ದತ್ತವಾದ ಅಧಿಕಾರದಂತೆ ತಾ. ೭ ರ ಬೆಳಗ್ಗೆ ೮ ಗಂಟೆಯಿAದ ಅದೇ ದಿನ ಮಧ್ಯರಾತ್ರಿ ೧೨ ಗಂಟೆಯವರೆಗೆ ಪಂಜಿನ ಮೆರವಣಿಗೆ ಹಾಗೂ ಶೋಭಾಯಾತ್ರೆ ಸಾಗುವ ವೀರಾಜಪೇಟೆಯ ಮಾರಿಯಮ್ಮ ದೇವಸ್ಥಾನ-ಮುಖ್ಯ ರಸ್ತೆ-ದೊಡ್ಡಟ್ಟಿ ಚೌಕಿ-ಮೂರ್ನಾಡು ಜಂಕ್ಷನ್-ಗಡಿಯಾರ ಕಂಬ-ಬದ್ರಿಯಾ ಜಂಕ್ಷನ್-ಖಾಸಗಿ ಬಸ್ ನಿಲ್ದಾಣ-ಶಿವಾಸ್ ಜಂಕ್ಷನ್-ತಾಲೂಕು ಮೈದಾನಕ್ಕೆ-ಮಹಿಳಾ ಸಮಾಜ ಮಾರ್ಗದ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.