ದಿಸ್ ಇಸ್ ಆಕಾಶ್‌ವಾಣೀ ಹೈ, ಹೇ ಹೈ ಆಕಾಶ್ ವಾಣೀ... ಆಕಾಶವಾಣಿ-ವಾರ್ತಾಪ್ರಸಾರ ಎಂಬಲ್ಲಿನ ದೇಶ-ರಾಜ್ಯ ಕೇಂದ್ರಗಳಿAದ ಹಿಡಿದು, ಪ್ರಸ್ತುತ ಆಕಾಶವಾಣಿ ಮಡಿಕೇರಿ ಎಫ್.ಎಂ ಎಂಬಲ್ಲಿನ ಜಿಲ್ಲಾ ಹಂತಗಳ ಎಫ್.ಎಂ . ಆಕಾಶವಾಣಿ ಕೇಂದ್ರಗಳು ತಮ್ಮದೇ ಆದ ಆಸಕ್ತ ಕೇಳುಗರನ್ನು ಬೆಳೆಸಿಕೊಂಡಿದ್ದು ಇಂದಿನ ಸೋಶಿಯಲ್ ಮೀಡಿಯಾಗಳ ಭರಾಟೆಯಲ್ಲೂ ತನ್ನ ತನವನ್ನು ಉಳಿಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಲಕ್ಷಾಂತರ ಮಂದಿ ಕೇಳುಗರನ್ನು ಹಿಡಿದಿಟ್ಟು ಕೊಂಡಿರುವ ನಿತ್ಯ ನೂತನವಾಗಿ, ಹೊಸ ಹೊಸ ಕರ‍್ಯಕ್ರಮಗಳ ಮೂಲಕ ಮಾಹಿತಿ ಮನೋರಂಜನೆಯ ಕಣಜವನ್ನೇ ಉಣಬಡಿಸುತ್ತಿರುವ ಗೆಳತಿಯಾಗಿ ಉಳಿದಿರುವ ಮಾಧ್ಯಮವೆನಿಸಿರುವುದು ಬಾನುಲಿಯ ಹೆಗ್ಗಳಿಕೆ.

ಮುಂಜಾನೆಯ ಸಿಗ್ನೇಚರ್ ಟ್ಯೂನ್, ನಂತರ ವಂದೇ ಮಾತರಂ ಆನಂತರ ಆಕಾಶವಾಣಿ - ಕೇಂದ್ರ, ಕಂಪನಾAಕ. ಮೆಗಾಹರ್ಟ್ ಗಳಲ್ಲಿ ನಮ್ಮ ನಿಲಯದ ಇಂದಿನ ಪ್ರಸಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ, ರಾಷ್ಟಿçÃಯ ಪಂಚಾAಗದAತೆ ಇಂದು - ನೇ ಶಕವರ್ಷ,...ಮಾಸದ ..ನೇ ದಿನ .ಅಂದರೆ -ತಿಂಗಳ-ತಾರೀಕು - ವಾರ ನಮ್ಮೆಲ್ಲ ಆತ್ಮೀಯ ಅಭಿಮಾನಿ ಕೇಳುಗರಿಗೆ- ಮಾಡುವ ನಮಸ್ಕಾರಗಳು, ಈಗ ಸಮಯ ೫ ಗಂಟೆ, ೫೫ ನಿಮಿಷ, ಸೆಕೆಂಡುಗಳು ಎಂಬ ಉದ್ಘೋಷಕರ ಸುಸ್ಪಷ್ಟವಾದ ಸುಮಧುರ ಧ್ವನಿಯೊಂದಿಗೆ ಆನಂತರದ ಮಂಗಳಧ್ವನಿಯೊAದಿಗೆ ಪ್ರಾರಂಭವಾಗುವ ರೇಡಿಯೋ ಪ್ರಸಾರ ರಾತ್ರಿಯ - ‘ಇಲ್ಲಿಗೆ ಇಂದಿನ ಪ್ರಸಾರ ಮುಕ್ತಾಯವಾಯಿತು,ಸಮಯ ೧೧ ಗಂಟೆ….. ನಿಮಿಷ - ಸೆಕೆಂಡುಗಳು, ನಿಲಯದ ಮುಂದಿನ ಪ್ರಸಾರವನ್ನು ನಾಳೆ ಬೆಳಿಗ್ಗೆ ೫ ಗಂಟೆ ೫೩ ನಿಮಿಷಕ್ಕೆ ಪ್ರಾರಂಭಿಸಲಾಗುವುದು, ನಮ್ಮೆಲ್ಲಾ ಆತ್ಮೀಯ ಆಭಿಮಾನಿ ಕೇಳುಗರಿಗೆ ನಿಮ್ಮ ಪ್ರೀತಿಯ ರೇಡಿಯೋ ಗೆಳತಿ - ಮಾಡುವ ನಮಸ್ಕಾರಗಳು, ಶುಭರಾತ್ರಿ, ಜೈ ಹಿಂದ್’ ಎಂದು ದಿನದ ಪ್ರಸಾರವನ್ನು ಮುಕ್ತಾಯಗೊಳಿಸುವವರೆಗೆ ಶಿಕ್ಷಣ, ಕಲೆ, ಸಾಹಿತ್ಯ, ಕೃಷಿ, ಕೈಗಾರಿಕೆ, ಮಹಿಳೆಯರಿಗಾಗಿ, ಮಕ್ಕಳಿಗಾಗಿ, ಯುವಜನತೆ, ವಯೋವೃದ್ಧರಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಉದ್ಯೋಗ, ಮಾರ್ಗದರ್ಶನ, ಮನೋರಂಜನೆ, ಸ್ಥಳೀಯ ಸುದ್ಧಿ, ಸುದ್ಧಿವಿಶೇಷತೆ ಹೀಗೆ ಹತ್ತು-ಹಲವು ವೈವಿಧ್ಯತೆಗಳ ಕಣಜವನ್ನೇ ತೆರೆದಿಡುವ, ಹಲವಾರು ತುರ್ತು ಸಂದರ್ಭಗಳಲ್ಲಿ, ದೇಶದ ಮೂಲೆ ಮೂಲೆಗಳನ್ನು ತಲುಪಿ. ಮಾಹಿತಿ- ಮನೋರಂಜನೆ ನೀಡುತ್ತಿರುವ ಬಾನುಲಿ ಒಂದರ್ಥದಲ್ಲಿ ಆಪ್ತ ಸಂಗಾತಿ ಎಂದೆನಿಸಿಬಿಡುತ್ತದೆ.

ಇತ್ತಿಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾಗೂ ಖಾಸಗಿ ಟಿ.ವಿ.ಗಳಂತಹ ಜನಪ್ರಿಯ ದೃಶ್ಯ ಮಾಧ್ಯಮಗಳ ಪ್ರಭಾವ ಗಾಢವಾಗುತ್ತಿದ್ದ ಅವಧಿಯಲ್ಲೇ ರೇಡಿಯೋಗಳ ಕಾಲ ಮುಗಿದೇ ಹೋಯಿತು ಎನ್ನುವಂತಹ ಕಾಲಗಟ್ಟದಲ್ಲಿ ನಾನೇನು ಕಡಿಮೆಯಿಲ್ಲ ಎಂಬAತೆ ತಾಂತ್ರಿಕವಾಗಿ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ನವ ನವೀನವಾಗಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಹಿಂದುಳಿಯದೆ ದೊಡ್ಡ ದೊಡ್ಡ ರೇಡಿಯೋಗಳ ಹೊರತಾಗಿಯೂ ಮೊಬೈಲ್-ಟ್ಯಾಬ್‌ಗಳಂತಹ ಸಾಧನಗಳ ಮೂಲಕವೇ ಜನರನ್ನು ಮುಟ್ಟಲು ಯತ್ನಿಸಿದ ಪರಿಣಾಮವಾಗಿಯೇ ಟಿeತಿs oಟಿ ಚಿiಡಿ.ಛಿom ಎಂಬ ಆ್ಯಪ್‌ನ ಸಂಚಲನೆ. ಹೌದು, ಈಗ ಈ ಆಪ್&zw