ದಿಸ್ ಇಸ್ ಆಕಾಶ್‌ವಾಣೀ ಹೈ, ಹೇ ಹೈ ಆಕಾಶ್ ವಾಣೀ... ಆಕಾಶವಾಣಿ-ವಾರ್ತಾಪ್ರಸಾರ ಎಂಬಲ್ಲಿನ ದೇಶ-ರಾಜ್ಯ ಕೇಂದ್ರಗಳಿAದ ಹಿಡಿದು, ಪ್ರಸ್ತುತ ಆಕಾಶವಾಣಿ ಮಡಿಕೇರಿ ಎಫ್.ಎಂ ಎಂಬಲ್ಲಿನ ಜಿಲ್ಲಾ ಹಂತಗಳ ಎಫ್.ಎಂ . ಆಕಾಶವಾಣಿ ಕೇಂದ್ರಗಳು ತಮ್ಮದೇ ಆದ ಆಸಕ್ತ ಕೇಳುಗರನ್ನು ಬೆಳೆಸಿಕೊಂಡಿದ್ದು ಇಂದಿನ ಸೋಶಿಯಲ್ ಮೀಡಿಯಾಗಳ ಭರಾಟೆಯಲ್ಲೂ ತನ್ನ ತನವನ್ನು ಉಳಿಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಲಕ್ಷಾಂತರ ಮಂದಿ ಕೇಳುಗರನ್ನು ಹಿಡಿದಿಟ್ಟು ಕೊಂಡಿರುವ ನಿತ್ಯ ನೂತನವಾಗಿ, ಹೊಸ ಹೊಸ ಕರ‍್ಯಕ್ರಮಗಳ ಮೂಲಕ ಮಾಹಿತಿ ಮನೋರಂಜನೆಯ ಕಣಜವನ್ನೇ ಉಣಬಡಿಸುತ್ತಿರುವ ಗೆಳತಿಯಾಗಿ ಉಳಿದಿರುವ ಮಾಧ್ಯಮವೆನಿಸಿರುವುದು ಬಾನುಲಿಯ ಹೆಗ್ಗಳಿಕೆ.

ಮುಂಜಾನೆಯ ಸಿಗ್ನೇಚರ್ ಟ್ಯೂನ್, ನಂತರ ವಂದೇ ಮಾತರಂ ಆನಂತರ ಆಕಾಶವಾಣಿ - ಕೇಂದ್ರ, ಕಂಪನಾAಕ. ಮೆಗಾಹರ್ಟ್ ಗಳಲ್ಲಿ ನಮ್ಮ ನಿಲಯದ ಇಂದಿನ ಪ್ರಸಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ, ರಾಷ್ಟಿçÃಯ ಪಂಚಾAಗದAತೆ ಇಂದು - ನೇ ಶಕವರ್ಷ,...ಮಾಸದ ..ನೇ ದಿನ .ಅಂದರೆ -ತಿಂಗಳ-ತಾರೀಕು - ವಾರ ನಮ್ಮೆಲ್ಲ ಆತ್ಮೀಯ ಅಭಿಮಾನಿ ಕೇಳುಗರಿಗೆ- ಮಾಡುವ ನಮಸ್ಕಾರಗಳು, ಈಗ ಸಮಯ ೫ ಗಂಟೆ, ೫೫ ನಿಮಿಷ, ಸೆಕೆಂಡುಗಳು ಎಂಬ ಉದ್ಘೋಷಕರ ಸುಸ್ಪಷ್ಟವಾದ ಸುಮಧುರ ಧ್ವನಿಯೊಂದಿಗೆ ಆನಂತರದ ಮಂಗಳಧ್ವನಿಯೊAದಿಗೆ ಪ್ರಾರಂಭವಾಗುವ ರೇಡಿಯೋ ಪ್ರಸಾರ ರಾತ್ರಿಯ - ‘ಇಲ್ಲಿಗೆ ಇಂದಿನ ಪ್ರಸಾರ ಮುಕ್ತಾಯವಾಯಿತು,ಸಮಯ ೧೧ ಗಂಟೆ….. ನಿಮಿಷ - ಸೆಕೆಂಡುಗಳು, ನಿಲಯದ ಮುಂದಿನ ಪ್ರಸಾರವನ್ನು ನಾಳೆ ಬೆಳಿಗ್ಗೆ ೫ ಗಂಟೆ ೫೩ ನಿಮಿಷಕ್ಕೆ ಪ್ರಾರಂಭಿಸಲಾಗುವುದು, ನಮ್ಮೆಲ್ಲಾ ಆತ್ಮೀಯ ಆಭಿಮಾನಿ ಕೇಳುಗರಿಗೆ ನಿಮ್ಮ ಪ್ರೀತಿಯ ರೇಡಿಯೋ ಗೆಳತಿ - ಮಾಡುವ ನಮಸ್ಕಾರಗಳು, ಶುಭರಾತ್ರಿ, ಜೈ ಹಿಂದ್’ ಎಂದು ದಿನದ ಪ್ರಸಾರವನ್ನು ಮುಕ್ತಾಯಗೊಳಿಸುವವರೆಗೆ ಶಿಕ್ಷಣ, ಕಲೆ, ಸಾಹಿತ್ಯ, ಕೃಷಿ, ಕೈಗಾರಿಕೆ, ಮಹಿಳೆಯರಿಗಾಗಿ, ಮಕ್ಕಳಿಗಾಗಿ, ಯುವಜನತೆ, ವಯೋವೃದ್ಧರಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಉದ್ಯೋಗ, ಮಾರ್ಗದರ್ಶನ, ಮನೋರಂಜನೆ, ಸ್ಥಳೀಯ ಸುದ್ಧಿ, ಸುದ್ಧಿವಿಶೇಷತೆ ಹೀಗೆ ಹತ್ತು-ಹಲವು ವೈವಿಧ್ಯತೆಗಳ ಕಣಜವನ್ನೇ ತೆರೆದಿಡುವ, ಹಲವಾರು ತುರ್ತು ಸಂದರ್ಭಗಳಲ್ಲಿ, ದೇಶದ ಮೂಲೆ ಮೂಲೆಗಳನ್ನು ತಲುಪಿ. ಮಾಹಿತಿ- ಮನೋರಂಜನೆ ನೀಡುತ್ತಿರುವ ಬಾನುಲಿ ಒಂದರ್ಥದಲ್ಲಿ ಆಪ್ತ ಸಂಗಾತಿ ಎಂದೆನಿಸಿಬಿಡುತ್ತದೆ.

ಇತ್ತಿಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾಗೂ ಖಾಸಗಿ ಟಿ.ವಿ.ಗಳಂತಹ ಜನಪ್ರಿಯ ದೃಶ್ಯ ಮಾಧ್ಯಮಗಳ ಪ್ರಭಾವ ಗಾಢವಾಗುತ್ತಿದ್ದ ಅವಧಿಯಲ್ಲೇ ರೇಡಿಯೋಗಳ ಕಾಲ ಮುಗಿದೇ ಹೋಯಿತು ಎನ್ನುವಂತಹ ಕಾಲಗಟ್ಟದಲ್ಲಿ ನಾನೇನು ಕಡಿಮೆಯಿಲ್ಲ ಎಂಬAತೆ ತಾಂತ್ರಿಕವಾಗಿ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ನವ ನವೀನವಾಗಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಹಿಂದುಳಿಯದೆ ದೊಡ್ಡ ದೊಡ್ಡ ರೇಡಿಯೋಗಳ ಹೊರತಾಗಿಯೂ ಮೊಬೈಲ್-ಟ್ಯಾಬ್‌ಗಳಂತಹ ಸಾಧನಗಳ ಮೂಲಕವೇ ಜನರನ್ನು ಮುಟ್ಟಲು ಯತ್ನಿಸಿದ ಪರಿಣಾಮವಾಗಿಯೇ ಟಿeತಿs oಟಿ ಚಿiಡಿ.ಛಿom ಎಂಬ ಆ್ಯಪ್‌ನ ಸಂಚಲನೆ. ಹೌದು, ಈಗ ಈ ಆಪ್‌ನ ಮೂಲಕ ದೇಶದ/ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ಮಡಿಕೇರಿಯೂ ಸೇರಿದಂತೆ ಭಾರತದ ಯಾವುದೇ ಪ್ರಾದೇಶಿಕ ಎಫ್.ಎಂ.ಚಾನೆಲ್‌ಗಳು ಪ್ರಪಂಚದ ಮೂಲೆ ಮೂಲೆಯನ್ನು ಮುಟ್ಟಲು ಸಹಕಾರಿಯೆನಿಸಿತು. ಹೀಗಾಗಿ, ಮಡಿಕೇರಿ, ಮೈಸೂರು ಬೆಂಗಳೂರು, ಹಾಸನ ಹೀಗೆ ವಿವಿಧ ಪ್ರದೇಶಗಳ ಜನರು ಇಷ್ಟಪಟ್ಟಲ್ಲಿ ತಾವು ಇದ್ದಲ್ಲಿಯೇ ತಮ್ಮ ಇಷ್ಟದ ಎಫ್.ಎಂ. ಕಾರ್ಯಕ್ರಮಗಳನ್ನು ಕೇಳಲು ಸಹಕಾರಿಯಾಗಿದೆ.

ಇಂದಿಗೂ ಪಾರ್ಕ್ನಲ್ಲಿ, ಸ್ಟೇಡಿಯಂನಲ್ಲಿ,ಅಷ್ಟೇ ಏಕೆ? ಟೈಲರ್ ಶಾಪ್, ಮೆಡಿಕಲ್ ಶಾಪ್ ಮುಂತಾದ ಅಂಗಡಿಗಳಲ್ಲಿ ಕೂಡ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಲೇ ರೇಡಿಯೋ ಕೇಳುವ ಜೊತೆಗೆ ಅದರಲ್ಲಿ ಪ್ರಸಾರವಾಗುವ ವಿವಿಧ ಕಾರ್ಯಕ್ರಮಗಳಿಗೆ ಹರಸಾಹಸ ಪಟ್ಟು ಕರೆಮಾಡಿ ಮಾತನಾಡುವ ಲಕ್ಷಾಂತರ ಮಂದಿ ಅಭಿಮಾನಿ ಕೇಳುಗರಿದ್ದಾರೆ ಎಂದರೆ ನಂಬಲೇ ಬೇಕು. ಸೋಶಿಯಲ್ ಮೀಡಿಯಾಗಳ ಭರಾಟೆಯಲ್ಲಿ ಮೊದಲಿಗೆ ಕುಂಟುತ್ತಾ ಸಾಗಿದ್ದ ಆಕಾಶವಾಣಿಯ ಬೆಳವಣಿಗೆ, ಬದಲಾಗುತ್ತಿರುವ, ಪ್ರಗತಿಹೊಂದುತ್ತಿರುವ ಈ ಜಗತ್ತಿನಲ್ಲಿ ದಿಢೀರನೆ ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಂಡಿತು. ಅದರ ಫಲಸ್ವರೂಪವೇ ಇಂದು ಯೂಟ್ಯೂಬ್, ಫೇಸ್ ಬುಕ್, ಟ್ವಿಟರ್ ಖಾತೆಗಳ ಮೂಲಕ ಕೂಡ ತನ್ನ ಕಾರ್ಯಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿರುವುದು ಶ್ಲಾಘನೀಯವಾದದ್ದು.

ಇತಿಹಾಸ : ಭಾರತದಲ್ಲಿ ೧೯೨೩ ರ ಜೂನ್ ನಲ್ಲಿ ಬಾಂಬೆಯಲ್ಲಿ ಪ್ರಪ್ರಥಮ ಪ್ರಸಾರದೊಂದಿಗೆ ರೇಡಿಯೋ ಕ್ಲಬ್ ಪ್ರಾರಂಭವಾಯಿತಾದರೂ ೧೯೨೭ರ ಜುಲೈ ೨೩ ರಂದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿ (Iಃಅ) ಯು ಸಾಪನೆಗೊಂಡಿತು, ಹೀಗಾಗಿ ಜುಲೈ ೨೩ ರನ್ನು ಪ್ರತಿವರ್ಷ ರಾಷ್ಟಿçÃಯ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತದೆ,

ಟಿ.ವಿ. ಮಾಧ್ಯಮದ ಆರಂಭಕ್ಕೂ ಮೊದಲು ಸ್ಥಾಪಿತವಾದ ಏಕೈಕ ಪ್ರಸಾರ ಮಾಧ್ಯಮವಾದ ರೇಡಿಯೋ ತನ್ನದೇ ಆದ ಫ್ರೀಕ್ವೆನ್ಸಿಗಳ ಮೂಲಕ ಅತ್ಯಂತ ಕನಿಷ್ಟ ಸೌಲಭ್ಯಗಳ್ಳುಳ್ಳ ಹಾಗೆಯೇ ತಲುಪಲು ಅಸಾಧ್ಯವಾದಂತಹ ಗುಡ್ಡಗಾಡು ಪ್ರದೇಶಗಳನ್ನು ತಲುಪಿ ಅಲ್ಲಿನ ಜನಗಳಿಗೆ ತನ್ನ ನುಡಿ ಶ್ರೀಮಂತಿಕೆಯನ್ನು ಪ್ರಸಾರಿಸಿ ಸೈ ಎನಿಸಿಕೊಂಡಿತ್ತು. ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯವನ್ನು ನಿರ್ವಹಿಸಿ, ತನ್ನ ಮಾಧರ‍್ಯತೆ ಹಾಗೂ ವಿಷಯ ವಸ್ತುಗಳಿಂದ ಎಲ್ಲಾ ವಯೋಮಾನದವರಿಗೂ, ಬಹು ಪ್ರಿಯವೆನಿಸಿತ್ತು. ಸ್ವಷ್ಟ ಉಚ್ಚಾರಣೆ, ಸೊಗಸಾದ ದೇಶಿ ನಿರೂಪಣೆ, ಕರೆಂಟ್ ಇಲ್ಲದಿದ್ದರೂ ಸೆಲ್‌ಗಳ ಬಳಕೆಯ ಮೂಲಕ ಪ್ರಸಾರ, ಜತೆಗೆ ಯಾವುದೇ ಕೆಲಸವನ್ನು ಮಾಡುತ್ತಲೇ ಸೊಗಸಾದ ಕಾರ್ಯಕ್ರಮ-ಗೀತೆಗಳ ರಸಸ್ವಾದ ಜನರನ್ನು ಆಕರ್ಷಿಸಿ, ಹಿಡಿದಿಟ್ಟಿಕೊಳ್ಳುವಲ್ಲಿ ಯಶಸ್ವಿ ಎನಿಸಿತು.

ಭಾರತದಲ್ಲಿ ಮೊದಲ ಬಾರಿಗೆ ೧೯೨೭ ರಲ್ಲಿ ಬಾಂಬೆ (ಮುಂಬೈ)ಯಲ್ಲಿ ಸ್ಥಾಪನೆಗೊಂಡ ಭಾರತೀಯ ಬ್ರಾಡ್ ಕಾಸ್ಟಿಂಗ್ ಕಂಪನಿ(ಐಬಿಸಿ)ಯು ೧೯೩೦ ರಲ್ಲಿ ರಾಷ್ಟಿçÃಕರಣಗೊಂಡ ತರುವಾಯ ಆಲ್ ಇಂಡಿಯಾ ರೇಡಿಯೋ (ಂIಖ)ನ್ನು ಸ್ಥಾಪಿಸಲಾಯಿತು. ಇದಾದ ತದನಂತರದಲ್ಲಿ ಅತ್ಯಂತ ಆಪ್ತವಾಗಿ, ರಾಜ್ಯಾವಾರು ತನ್ನದೇ ಭಾಷೆಗಳಲ್ಲಿ ಪ್ರಸಾರವನ್ನು ಕಾಣಲಾರಂಭಿಸಿದ ರೇಡಿಯೋ ಕೇಂದ್ರಗಳು ಜನೋಪಯೋಗಿ -ಜನಪ್ರಿಯ ಮಾಧ್ಯಮವಾಗಿ ತನ್ನದೇ ಅಸ್ತಿತ್ವನ್ನು ಕಾಣುತ್ತಾ ಹೋಗಿ, ಸ್ಥಳೀಯತೆಗೆ ಕೊಡುತ್ತಿದ್ದ ಪ್ರಾಧಾನ್ಯತೆಯಿಂದ ಅಚ್ಚುಮೆಚ್ಚಿನ ಸಂಗಾತಿಯಾಯಿತು. ಇಂದಿಗೂ ರೇಡಿಯೋದಲ್ಲಿ ಬಿತ್ತರವಾಗುವ ಚಿತ್ರಗೀತೆಗಳ ಮಾಧರ‍್ಯಕ್ಕೆ ಸರಿಸಾಟಿಯಾದ ಮಾಧ್ಯಮವಿಲ್ಲ ಎಂದೇ ಹೇಳಬಹುದು.

ತಾಂತ್ರಿಕವಾಗಿಯೂ ಅಭಿವೃದ್ಧಿ ಹೊಂದುತ್ತಾ, ಮೊದಲಿದ್ದ ಗ್ರಾಮೋಫೋನ್, ಸಿ.ಟಿ.ಆರ್. ಸಿ.ಡಿ. ಗಳ ಬಳಕೆಯ ಬದಲಾವಣೆಯ ನಂತರ ಇಂದು ನೇರವಾಗಿ ಸುಲಭವಾಗಿ ಕಂಪ್ಯೂಟರ್ ಗಳ ಮೂಲಕವೇ ಮಾಹಿತಿಯ ಪ್ರಾಸಾರವನ್ನು ಕಾಣುತ್ತಿರುವ ಈ ದಿನಗಳಲ್ಲಿ ಹಿಂದಿನ ಕಠಿಣದ ದಾರಿಯನ್ನು ಮರೆಯಲು ಸಾಧ್ಯವಿಲ್ಲ. ಸ್ವಾತಂತ್ರö್ಯ ಸಂಗ್ರಾಮದ ಸಮಯದಲ್ಲಿ ಹಾಗೆಯೇ ಪ್ರಕೃತಿ ವಿಕೋಪದಂತಹ ತುರ್ತು ಪರಿಸ್ಥಿತಿಯಲ್ಲಿ ರೇಡಿಯೋಗಳು ವಹಿಸಿದ್ದ ಪಾತ್ರವೂ ಅತ್ಯಂತ ಮಹತ್ವದ್ದೇ. ಅಲ್ ಇಂಡಿಯಾ ರೇಡಿಯೋ ಎಂದಾಗಿದ್ದ ಬಾನುಲಿಯನ್ನು ೧೯೫೬ ರಿಂದ ಆಕಾಶವಾಣಿ ಎಂದು ಕರೆಯಲಾಯಿತು.

ಅಬ್ಬರವಿಲ್ಲದೆ ಹೇಳಬೇಕಾದ್ದನ್ನು ಸೌಮ್ಯವಾಗಿ ಹೇಳುತ್ತಲೇ ಸಾಗಿರುವ ಆಕಾಶವಾಣಿಯ ಮಾಹಿತಿ ಮನೋರಂಜನೆಯು ಸದಾ ಕಾಲಕ್ಕೂ ಸರ್ವಪ್ರಿಯವೇ. ಬಾಲ್ಯದಲ್ಲಿ ಪುಟ್ಟ ಪೆಟ್ಟಿಗೆಯಿಂದ ಹೊರ ಬರುತ್ತಿದ್ದ ಧ್ವನಿ ಮಾಧುರ್ಯವನ್ನು ಕೇಳಿದಾಗ ಪುಟ್ಟ ತಲೆಯಲ್ಲಿ ಬಹು ದೊಡ್ಡ ದೊಡ್ಡ ಪ್ರಶ್ನೆಗಳೇಳುತ್ತದ್ದದುಂಟು,,, ಇಷ್ಟು ಚಿಕ್ಕ ಪೆಟ್ಟಿಗೆಯೊಳಗೆ ನನಗಿಂತ ದೊಡ್ಡ-ದೊಡ್ಡವರೆಲ್ಲಾ ನುಸುಳಿದ್ದಾದರೂ ಹೇಗೆ ? ಎಂಬಲ್ಲಿAದ ಹಿಡಿದು, ಅದರೊಳಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಇದ್ದರೆ ಅವರು ಊಟ -ತಿಂಡಿ ಮಾಡುವುದಾದರೂ ಎಂಬಲ್ಲಿನ ಅದೆಷ್ಟೋ ಉತ್ತರ ಸಿಗದ ಬಾಲಿಶ ಪ್ರಶ್ನೆಗಳು ಮೂಡುತ್ತಿದ್ದನ್ನು ಹಾಗೆಯೇ ರೇಡಿಯೋದ ಸುತ್ತಲೂ ತಿರುಗುತ್ತಾ ಅದರೊಳಗಿರುವವರು ನೋಡಲು ಕಾಣಸಿಕ್ಕಾರೇನೋ ಎಂದು ರೇಡಿಯೋದಲ್ಲಿದ್ದ ಸಣ್ಣ ಸಣ್ಣ ರಂಧ್ರದೊಳಗೂ ಇಣುಕಿ ಹಾಕಿ, ಕಾಣದಿದ್ದಾಗ ನಿರಾಸೆಗೊಂಡರೂ ಮತ್ತೆ ಮರುದಿವೂ ಅದೇ ಪತ್ತೆದಾರಿ ಕಾರ್ಯಕ್ಕೆ ಇಳಿಯುತ್ತಿದ್ದದ್ದನ್ನು ನೆನಪಿಸಿಕೊಂಡರೆ ಈಗ ನಗೆ ಉಕ್ಕಿ ಬರುತ್ತದೆ.

ಇಂದು ಪ್ರಸಾರಭಾರತಿಯ ಅಧೀನದಲ್ಲಿರುವ ರೇಡಿಯೋ ಕೇಂದ್ರಗಳ ಹೊರತಾಗಿಯೂ ಎಲ್ಲೆಡೆಯೂ ಹಲವಾರು ಖಾಸಗಿ ಚಾನಲ್ ಗಳು, ಸಮೂದಾಯ ರೇಡಿಯೋ ಕೇಂದ್ರಗಳು ತಲೆ ಎತ್ತಿದ್ದು ಮಾಹಿತಿ ಮನೋರಂಜನೆಯನ್ನು ನೀಡುವ ದಿಸೆಯಲ್ಲಿ ಪೈಪೋಟಿಗಿಳಿದು, ತಮ್ಮದೇ ಆದ ವಿಶಿಷ್ಟತೆಗಳಿಂದ ಅಪಾರವಾದ ಕೇಳುಗರ ಬಳಗವನ್ನೇ ಸೃಷ್ಟಿಸಿಕೊಂಡಿವೆ. ಆದರೂ ಆಕಾಶವಾಣಿಗೆ ಆಕಾಶವಾಣಿಯೇ ಸಮ ಎಂದು ಹೇಳುತ್ತಾ, ಸ್ಥಾಪನಾ ದಿನಕ್ಕೆ ಶುಭಾಶಯವನ್ನು ಹೇಳುತ್ತಾ, ತಾಳ ತಪ್ಪದ, ದೇಶೀಯ ಸಂಸ್ಕೃತಿ ಸೌಂದರ್ಯವನ್ನು ಬಿಂಬಿಸುವ ಮತ್ತಷ್ಟು ಮಗದಷ್ಟು ಕಾರ್ಯಕ್ರಮಗಳ ಆಯೋಜನೆ, ಪ್ರಸಾರದ ಮುಖೇನ ಮತ್ತಷ್ಟು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ತನ್ನ ಪ್ರಸಾರದ ಪಯಣದಲ್ಲಿ ನಿರಂತರವಾಗಿ ಸಾಗಲಿ ಎಂದು ಆಶಿಸುತ್ತಾ, ಪ್ರಸಾರ ದಿನಕ್ಕೆ ಶುಭಾಶಯವನ್ನು ಕೋರೋಣ ಅಲ್ವಾ? ಶುಭದಿನ, ಜೈಹಿಂದ್.

- ಡಿ. ಸುಜಲಾದೇವಿ, ಶನಿವಾರಸಂತೆ