ಐಗೂರು, ಜು. ೨೦: ಇತ್ತೀಚೆಗೆ ಜಿಲ್ಲಾದ್ಯಂತ ಡೆಂಗ್ಯೂ ಕಾಯಿಲೆಯು ಹರಡುತ್ತಿದ್ದು, ಡೆಂಗ್ಯೂ ಕಾಯಿಲೆಗಳ ಬಗ್ಗೆ ನಿಗಾವಹಿಸಲು ವೈದ್ಯಾಧಿಕಾರಿ ಡಾ. ನಿಶಾ ಎಸ್. ಅವರ ಆದೇಶದ ಮೇರೆಗೆ ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಐಗೂರು ಗ್ರಾ.ಪಂ. ವ್ಯಾಪ್ತಿಯ ಐಗೂರು, ಕಬ್ಬಿಣ ಸೇತುವೆ, ಎರಡನೇ ಐಗೂರು, ಎಡವಾರೆ, ಕಾಜೂರು ಭಾಗಗಳಲ್ಲಿ ಮನೆ ಮನೆಗೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಭೇಟಿಕೊಟ್ಟು ಲಾರ್ವ ಉತ್ಪತ್ತಿ ನಿರ್ಮೂಲನದ ಸರ್ವೆಯನ್ನು ಮಾಡಿದರು. ಈ ಸಂದರ್ಭ ಸಾರ್ವಜನಿಕರಿಗೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯ, ಮೆದುಳು ಜ್ವರ, ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ, ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಮತ್ತು ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಸರ್ವೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪೂಪತಿ, ಸ.ಆ. ಅಧಿಕಾರಿ ಸುಶ್ಮಿತ, ಆಶಾ ಕಾರ್ಯ ಕರ್ತೆಯರಾದ ಇಂದಿರಾ, ಅಮುದ, ಜಾನಕ್ಕಿ, ಪುಷ್ಪಾವತಿ ಪಾಲ್ಗೊಂಡಿದ್ದರು.