ಕೊಡ್ಲಿಪೇಟೆ, ಜು. ೨೦: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಣುಕಾ ಮೇದಪ್ಪ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ರೇಣುಕಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆ, ಚುನಾವಣಾಧಿಕಾರಿ, ಸೋಮವಾರಪೇಟೆ ತಹಶೀಲ್ದಾರ್ ನವೀನ್ ಕುಮಾರ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರುಗಳಾದ ಮಹಮ್ಮದ್ ಹನೀಫ್, ಪಾವನ ಗಗನ್, ಲೀನಾ ಪರಮೇಶ್, ವಿನೋದಾ ಆನಂದ್, ದೊಡ್ಡಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಚುನಾವಣಾಧಿಕಾರಿಗಳ ಸಹಾಯಕ ಲೋಹಿತ್, ವಿಖ್ಯಾತ್ ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ರೇಣುಕಾ ಅವರು, ಎಲ್ಲಾ ಸದಸ್ಯರುಗಳು ಮತ್ತು ಶಾಸಕ ಮಂತರ್ ಗೌಡ ಅವರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಹಣಕೋಡು ಸುರೇಶ್, ತಾಲೂಕು ಕೆಡಿಪಿ ಸದಸ್ಯ ಡಿ.ಆರ್. ವೇದ್ಕುಮಾರ್, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜೆ.ಕೆ. ತೇಜ್ಕುಮಾರ್, ಎಸ್.ಎಲ್. ಮೇದಪ್ಪ, ವೆಂಕಟೇಶ್, ಶಿರಹ ಪುಟ್ಟರಾಜು, ಎಂ.ಎA. ಮಹಮ್ಮದ್, ಗಗನ್, ಆನಂದ್, ಚಂದ್ರಶೇಖರ್ ಮತ್ತು ಮಲ್ಲೇಶ್ ಹಾರೋಹಳ್ಳಿ, ಚಂದ್ರಶೇಖರ್ ಶಿವರಳ್ಳಿ, ಬಿ.ಯು. ಹನೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.