ಸಿದ್ದಾಪುರ. ಜು. ೨೧: ಧಾರಾಕಾರ ಮಳೆಯಿಂದಾಗಿ ಕರಡಿಗೋಡು ಗ್ರಾಮವು ಜಲಾವೃತಗೊಂಡು, ನಿವಾಸಿಗಳು ಸಿದ್ದಾಪುರದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದರು. ಅಲ್ಲದೆ ಪರಿಹಾರ ಕೇಂದ್ರದಲ್ಲಿ ತೆರೆಯಲಾಗಿರುವ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿAದ ಸಂತ್ರಸ್ತರ ಆರೋಗ್ಯ ತಪಾಸಣೆ ಮಾಡಿಸಲಾಯಿತು. ನಂತರ ಸಂತ್ರಸ್ತರಿಗೆ ಬೇಕಾದಂತಹ ಆಹಾರ ಪದಾರ್ಥಗಳನ್ನು ಕೇಂದ್ರದಲ್ಲಿ ನೀಡಲಾಯಿತು. ಇದಾದ ಬಳಿಕ ಪ್ರವಾಹ ಪೀಡಿತ ಕರಡಿಗೋಡಿನ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಹೋಮಪ್ಪ ಬಣಕರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.