ಕೂಡಿಗೆ, ಜು. ೨೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಗ್ರಾಮದ ಹುಚ್ಚಪ್ಪಶೆಟ್ಟ ಮತ್ತು ಪ್ರಕಾಶ್ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡಿದೆ.

ಸ್ಥಳಕ್ಕೆ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನಿರೀಕ್ಷಕ ಹೆಚ್.ಹೆಚ್. ಸಂತೋಷ್, ಲೆಕ್ಕಾಧಿಕಾರಿ ಫೀರ್ ಮಹಮ್ಮದ್ ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವ ಭರವಸೆ ನೀಡಿದರು.