ಕೂಡಿಗೆ, ಜು. ೨೧: ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಗೊಂಡು ನದಿಗೆ ನೀರು ಬಿಡುಗಡೆಗೊಳ್ಳುತ್ತಿದ್ದು, ಧುಮುಕ್ಕುವ ಜಲಾಧಾರೆಯ ದೃಶ್ಯವನ್ನು ಕಣ್ಣು ತುಂಬಿಸಿಕೊಳ್ಳಲು ಸಾವಿರಾರು ಪ್ರವಾಸಿಗರ ದಂಡು ಹಾರಂಗಿಗೆ ಅಗಮಿಸುತ್ತಿದೆ.

ವಿವಿಧೆಡೆಗಳಿಂದ ಸಾವಿರಾರು ಪ್ರವಾಸಿಗರು ಹಾರಂಗಿಗೆ ಅಗಮಿಸಿ, ಹಾರಂಗಿ ಅಣೆಕಟ್ಟೆಯ ವೀಕ್ಷಣೆ, ನಂತರ ಸಮೀಪದಲ್ಲಿರುವ ಸಾಕಾನೆ ಶಿಬಿರಕ್ಕೆ ತೆರಳಿ ಸಾಕಾನೆಗಳ ವೀಕ್ಷಣೆ, ಹಾರಂಗಿ ಹಿನ್ನೀರಿನಲ್ಲಿ ನಡೆಯುತ್ತಿರುವ ಸಾಹಸ ಜಲಕ್ರೀಡೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.