ಮಡಿಕೇರಿ, ಜು. ೧೯: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿತಿಮತಿ ಗ್ರಾಮದ ರಾವತ್ ಹೊಟೇಲ್ ಸಮೀಪ ಗಾಂಜಾ ಮಾರಾಟ ಆಗುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಧಾಳಿ ನಡೆಸಿದ ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ರವಿ ಹಾಗೂ ಸಿಬ್ಬಂದಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಪಿರಿಯಾಪಟ್ಟಣ ತಾಲೂಕು, ಪಂಚವಳ್ಳಿ ಗ್ರಾಮ ನಿವಾಸಿ ಮುಜಾಮಿಲ್ (೨೬) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿAದ ೬೩೩ ಗ್ರಾಂ. ಗಾಂಜಾ ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.