*ಗೋಣಿಕೊಪ್ಪ, ಜು. ೧೯: ಪೊನ್ನಂಪೇಟೆ ತಾಲೂಕಿನ ಮಾಯಮಾಡಿ ಗ್ರಾಮದ ಎ.ಎನ್. ಬಿದ್ದಪ್ಪ (ಗಣೇಶ್) ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಜುಲೈ ೫ ರಂದು ಗೋಣಿಕೊಪ್ಪ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ನಂತರ ಹಿಂದಿರುಗಿಲ್ಲ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.

೬೭ ವರ್ಷದ ಬಿದ್ದಪ್ಪ ೫.೬ ಅಡಿ ಎತ್ತರ ಗೋಧಿ ಮೈಬಣ್ಣ ಕೋಲು ಮುಖ ತೆಳ್ಳಗಿನ ಶರೀರವನ್ನು ಹೊಂದಿದ್ದು, ಕೊಡವ, ಕನ್ನಡ, ಮಲಯಾಳಂ ತಮಿಳು ಭಾಷೆಗಳನ್ನ ಮಾತನಾಡುತ್ತಾರೆ. ಹಸಿರು ಬಣ್ಣದ ಶರಟು ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಎಡ ಮೊಣಕೈ ಹಣೆಯ ಮೇಲೆ ಹಳೆಯ ಗಾಯದ ಗುರುತುಗಳಿವೆ. ಈ ಚಹರೆಯ ವ್ಯಕ್ತಿ ಪತ್ತೆಯಾದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯ ಮೊ. ೯೪೮೦೮೦೪೯೫೭ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮಾನವಿ ಮಾಡಿದ್ದಾರೆ.