ಮುಳ್ಳೂರು, ಜು. ೧೯: ಸಮಿಪದ ಕೊಡ್ಲಿಪೇಟೆ ಶ್ರೀ ರುಕ್ಮಿಣಿ ಪಾಂಡುರAಗ ದೇವಸ್ಥಾನದಲ್ಲಿ ಕೊಡ್ಲಿಪೇಟೆಯ ನಾಮದೇವ ಸಿಂಪಿ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ನಡೆಸುವ ಆಷಾಢ ಏಕಾದಶಿ ವಿಶೇಷ ಪೂಜೆ ನೆರವೇರಿಸಲಾಯಿತು.

ಆಷಾಢ ಏಕಾದಶಿ ಪ್ರಯುಕ್ತ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಮಹೋತ್ಸವದಲ್ಲಿ ನೂರಾರು ಭಕ್ತರು, ಸಿಂಪಿ ಸಮಾಜದ ಪದಾಧಿಕಾರಿ ಗಳು, ಸದಸ್ಯರು ಪಾಲ್ಗೊಂಡಿದ್ದರು.