ಮಡಿಕೇರಿ, ಜು. ೧೯: ನಿನ್ನೆ ದಿನ ಸಂಜೆ ಏಕಾಏಕಿಯಾಗಿ ಜಿಲ್ಲಾಧಿಕಾರಿಯವರು, ಮಡಿಕೇರಿ - ಮಂಗಳೂರು ರಸ್ತೆಯ ಕರ್ತೋಜಿ ಬಳಿ ಕುಸಿಯುವ ಭೀತಿ ಇರುವುದರಿಂದ ರಾತ್ರಿ ೮ ರಿಂದ ಬೆಳಿಗ್ಗೆ ೬ ರವರೆಗೆ ಬಂದ್ ಮಾಡಲು ಆದೇಶಿಸಿದ್ದರು.

ಇದರಿಂದ ಹೊರ ಜಿಲ್ಲೆಗಳಿಗೆ ಹೋಗಿದ್ದ ಹಲವಾರು ವಾಹನ ಸವಾರರು ಹಾಗೂ ಕುಟುಂಬ ಜಿಲ್ಲೆಯ ಮದೆನಾಡು ಗ್ರಾಮದ ನಡುರಸ್ತೆಯಲ್ಲಿ ರಾತ್ರಿ ಸುಮಾರು ೮ ಗಂಟೆಯಿAದ ೧.೩೦ ರವರೆಗೆ ಪರದಾಡಬೇಕಾಯಿತು. ಈ ಸಂದರ್ಭದಲ್ಲಿ

(ಮೊದಲ ಪುಟದಿಂದ) ಶಾಸಕ ಡಾ. ಮಂತರ್‌ಗೌಡ ಅವರನ್ನು ಸಂಪರ್ಕಿಸಿದ್ದು, ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾರ್ಗಮಧ್ಯೆ ಸಿಲುಕಿದವರನ್ನು ತಮ್ಮ ಮನೆಗಳಿಗೆ ಕಳುಹಿಸಿಕೊಡಲು ಮನವಿ ಮಾಡಿದರು.

ನಂತರ ಪೊಲೀಸ್ ಇಲಾಖೆಯ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಸಂಪಾಜೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಶಾಸಕ ಡಾ. ಮಂತರ್‌ಗೌಡ ಪ್ರಶಂಸೆಗೆ ಒಳಗಾದರು.

-ಇಬ್ರಾಹಿಂ ಜಿ.ಎ.ಪ್ರಯಾಣಿಕರ ಪ್ರಯಾಸ-ಶಾಸಕರ ಮುತುವರ್ಜಿ