ಮುಳ್ಳೂರು, ಜು. ೫ : ಪ್ರಪಂಚದಲ್ಲಿ ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯಿಂದ ಸಮಾಜಸೇವೆ ಮಾಡುತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಪದಗ್ರಹಣ ಅಧಿಕಾರಿ ಸತೀಶ್ ಬೋಳೊರ್ ಅಭಿಪ್ರಾಯಪಟ್ಟರು.
ಅವರು ಸಮೀಪದ ಚಿನ್ನಳ್ಳಿ ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಶನಿವಾರಸಂತೆ ರೋಟರಿ ಕ್ಲಬ್ನ ೨೦೨೪-೨೫ನೇ ಸಾಲಿನ ಪ್ರದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಸಂಸ್ಥೆಯು ಸರಕಾರದ ಜೊತೆಗೆ ಕೈಜೋಡಿಸುತ್ತಿದೆ. ಸಮಾಜ ಸೇವೆಯ ಜೊತೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ಸಹಾಯಕ ರಾಜ್ಯಪಾಲ ಡಾ. ಹರಿ ಎ. ಶೆಟ್ಟಿ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಸೇವೆಯ ಮೂಲಕ ಜನಮನ್ನಣೆಗಳಿಸಿದೆ. ರೋಟರಿ ಸದಸ್ಯರು ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಶನಿವಾರಸಂತೆ, ಆಲೂರು-ಸಿದ್ದಾಪುರ, ಕೊಡ್ಲಿಪೇಟೆ ಮುಂತಾದ ಕಡೆಯಲ್ಲಿರುವ ರೋಟರಿ ಸಂಸ್ಥೆಯು ಸಮಾಜಸೇವೆಯ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶನಿವಾರಸಂತೆ ರೋಟರಿ ಸಂಸ್ಥೆಯ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಎಲ್. ವರ್ಷಿತ್ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶ್ವೇತಾ ವಸಂತ್ ಅವರುಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಂಸ್ಥೆಯ ವಲಯ ಸೇನಾನಿ ಕೆ.ಪಿ. ಜಯಕುಮಾರ್, ರೋಟರಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಎ.ಹೆಚ್. ಚಂದ್ರಕಾAತ್, ನಿಕಟಪೂರ್ವ ಕಾರ್ಯದರ್ಶಿ ಎ.ಆರ್. ಸೋಮಶೇಖರ್, ವಿವಿಧ ರೋಟರಿ ಸಂಸ್ಥೆಯ ಮುಖ್ಯಸ್ಥರು, ರೋಟರಿ ಸದಸ್ಯರು, ಶನಿವಾರಸಂತೆ ರೋಟರಿ ಕ್ಲಬ್ ಸದಸ್ಯರು, ರೋಟರಿ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.