ಮಡಿಕೇರಿ, ಜು. ೫: ಮಡಿಕೇರಿ ನಿವಾಸಿ ಶಿವು ಮತ್ತು ಗೀತಾ ದಂಪತಿಯ ಮಗು ಜೂನ್ ೨೨ ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜನನ ಹೊಂದಿದ್ದು, ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದೆ.
ಮಗುವನ್ನು ಐ.ಸಿ.ಯುನಲ್ಲಿ ದಾಖಲಿಸಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಯಿತು. ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಅಲ್ಲಿನ ವೈದ್ಯರು ತಿಳಿಸಿದ ಮೇರೆಗೆ ಮೈಸೂರಿನಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಶೂನ್ಯ ಟ್ರಾಫಿಕ್ ನಲ್ಲಿ ಕರೆದೊಯ್ಯಲಾಗಿದೆ.
ಮೊದಲ ಹಂತದ ಶಸ್ತ್ರಚಿಕಿತ್ಸೆಗೆ ಸುಮಾರು ರೂ.೩ ಲಕ್ಷ ಹಣದ ಅವಶ್ಯಕತೆ ಇರುವುದಾಗಿ ಒಟ್ಟಾರೆಯಾಗಿ ಮಗುವನ್ನು ಗುಣಪಡಿಸಲು ಅಂದಾಜು ರೂ.೧೨ ರಿಂದ ೧೫ ಲಕ್ಷದ ಹಣದ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಡುಬಡತನದ ಈ ದಂಪತಿ, ಮಗುವಿನ ಪುಟ್ಟ ಹೃದಯವನ್ನುಳಿಸಲು ಸಮಾಜದ ದಾನಿಗಳಲ್ಲಿ ಪತ್ರಿಕೆಯ ಮೂಲಕ ಧನಸಹಾಯ ಕೋರಿದ್ದಾರೆ.
ಧನಸಹಾಯ ಮಾಡಲು ಖಾತೆಯ ವಿವರ
ಗೂಗಲ್ ಪೇ/ ಫೋನ್ ಪೇ ಸಂಖ್ಯೆ: ೯೯೦೨೮೪೦೮೨೧/ ೯೧೧೩೯೩೨೦೧೭
ಖಾತೆ ಹೆಸರು: ಸವಿತಾ ಬಿ.ಎಂ
ಖಾತೆ ಸಂಖ್ಯೆ: ೩೪೧೬೯೭೦೪೫೧೫
ಐ.ಎಫ್.ಎಸ್.ಸಿ ಕೋಡ್: SಃIಓ೦೦೦೦೮೭೬
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಡಿಕೇರಿ ಶಾಖೆ