*ಗೋಣಿಕೊಪ್ಪ, ಜು. ೫ : ರಾಜ್ಯ ಸರ್ಕಾರದ ಇಂಧನ ದರ ಏರಿಕೆ ವಿರೋಧಿಸಿ ವೀರಾಜಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಲಾಗಿದ್ದ, ಸುಮೊಟೊ ಮೊಕದ್ದಮೆಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ತಿಳಿಸಿದ್ದಾರೆ.
೨೯ ಮತ್ತು ಇತರರು ಎಂದು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯ ನಿವೃತ್ತ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ಕೌನ್ಸಿಲರ್ ಅರುಣ್ ಶ್ಯಾಂ ಅವರ ಮೂಲಕ ತಡೆಯಾಜ್ಞೆ ತರಲಾಗಿದೆ. ವಕೀಲರಾದ ಶಾಂತೆಯAಡ ನಿಶಾಂತ್ ಕುಶಾಲಪ್ಪ, ಕನ್ನಂಡ ಅರುಣ್ ನಾಚಪ್ಪ, ಸುಯೋಗ್ ಹೇರಳೆ, ರಿತಿಕ್ ಅವರ ಪ್ರಯತ್ನದಿಂದ ಗೆಲುವು ದೊರಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಕೀಯ ಪ್ರೇರಿತವಾಗಿ ಇದೊಂದು ಸುಳ್ಳು ಮೊಕದ್ದಮೆಯಾಗಿದ್ದು, ಈ ಬಗ್ಗೆ ಡಿವೈಎಸ್ಪಿಗೆ ಅನುಮತಿಗೆ ಅರ್ಜಿ ನೀಡಲಾಗಿತ್ತು. ಆದರೆ, ಪಕ್ಷ ಇದೆಲ್ಲವನ್ನೂ ಮೆಟ್ಟಿನಿಂತು ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಪಕ್ಷದ ಹೋರಾಟವನ್ನು ಹತ್ತಿಕ್ಕಲು ಮೊಕದ್ದಮೆ ದಾಖಲಿಸಲಾಗಿತ್ತು. ಇದಕ್ಕೆ ತಡೆಯಾಜ್ಞೆ ಮೂಲಕ ನಾವು ನಮ್ಮ ಕಾರ್ಯಕರ್ತರ ಬೆಂಬಲವಾಗಿ ನಿಂತಿದ್ದೇವೆ. ಪಕ್ಷ ಇಂತಹ ಯಾವ ಬೆದರಿಕೆಗೂ ಬಗ್ಗುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಮಾತನಾಡಿ, ಅಧಿಕಾರಿಗಳು ಕಾನೂನಿಗೆ ಗೌರವ ನೀಡಬೇಕಿದೆ. ಒತ್ತಡಕ್ಕೆ ಮಣಿದು ಮೊಕದ್ದಮೆ ದಾಖಲಿಸುವುದರಿಂದ ನ್ಯಾಯಾಲಯಕ್ಕೆ ಗೌರವ ನೀಡಿದಂತಾಗುವುದಿಲ್ಲ. ನಮ್ಮ ಕಾರ್ಯಕರ್ತರ ಗೆಲುವು ಇದಾಗಿದೆ. ಇಂಧನ ದರ ಏರಿಕೆ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದರು.
ಮAಡಲ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ, ಮುಖಂಡ ಪಟ್ರಪಂಡ ರಘು ನಾಣಯ್ಯ, ಹಾಪ್ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ ಇದ್ದರು.