ಮಡಿಕೇರಿ, ಜು. ೪: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿ ತೆರಿಗೆ ಶೇ. ೫ ರಿಯಾಯಿತಿಯನ್ನು ಜುಲೈ ೩೧ ರವರಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಆರ್ಥಿಕ ವರ್ಷದ ಮೊದಲ ೩೦ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದಲ್ಲಿ ಈ ರಿಯಾಯಿತಿ ಪಡೆಯಲು ಅವಕಾಶವಿತ್ತು. ಇದೀಗ ರಿಯಾಯಿತಿಯನ್ನು ಇದೀಗ ಜುಲೈ ೩೧ ರವರಗೆ ವಿಸ್ತರಿಸಲಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿ ತೆರಿಗೆ ರಿಯಾಯಿತಿ ದೊರೆಯಲಿದೆ. ಸದ್ಯಕ್ಕೆ ಕೊಡಗು ಜಿಲ್ಲೆಯ ಅಧಿಕಾರಿಗಳಿಗೆ ಈ ಆದೇಶ ಕೈ ಸೇರಿಲ್ಲ. ‘ಆದೇಶ ಅಧಿಕೃತವಾಗಿ ಬಂದ ನಂತರ ರಿಯಾಯಿತಿಗೆ ಕ್ರಮವಹಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ವಿಜಯ ‘ಶಕ್ತಿ’ಗೆ ತಿಳಿಸಿದ್ದಾರೆ.