ಮಡಿಕೇರಿ, ಜು. ೪: ವಿಪತ್ತು ತಡೆಗೆ ಜಿಲ್ಲೆಯಾದ್ಯಂತ ನದಿ, ಕೆರೆ, ಜಲಪಾತಗಳಲ್ಲಿ ಈಜುವುದು ಹಾಗೂ ಸಾಹಸ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಲಪ್ರದೇಶಗಳಲ್ಲಿ ಈಜಲು ತೆರಳಿ ಮೃತಪಡುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಜಲಪಾತ, ನದಿ, ತೊರೆ, ಸಾರ್ವಜನಿಕ ಕೆರೆ, ಅಣೆಕಟ್ಟು, ಜಲಾನಯನ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ನೀರಿಗೆ ಇಳಿಯುವುದು, ಈಜುವುದನ್ನು, ಸಾಹಸ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸಿದ್ದು, ಆದೇಶ ಉಲ್ಲಂಘಿಸಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.