ಮಡಿಕೇರಿ, ಜು. ೪: ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಜನ್ಮ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ನಗರ ಯುವ ಮೋರ್ಚಾ ಅಧ್ಯಕ್ಷ ಪಾಂಡೀರ ಪೂಣಚ್ಚ, ಓಬಿಸಿ ಮೋರ್ಚಾ ಅಧ್ಯಕ್ಷ ಕುಶಕುಮಾರ್ ನಗರ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸೌಮ್ಯ, ಪ್ರಧಾನ ಕಾರ್ಯದರ್ಶಿ ಸಂಗೀತ, ಕಾರ್ಯದರ್ಶಿಗಳಾದ ವೈಭವಿ ಹಾಗೂ ಕೀರ್ತಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ವಿಘ್ನೇಶ್, ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ಮಂಜುಳಾ ಮತ್ತು ಇತರ ಕಾರ್ಯಕರ್ತರು ಇದ್ದರು.

ಸೋಮವಾರಪೇಟೆಯಲ್ಲಿ : ಪಕ್ಷದ ಕಾರ್ಯಕರ್ತರು, ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.

ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ನಂತರ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಬಿಸ್ಕೆಟ್, ಹಣ್ಣು ಹಂಪಲು ವಿತರಿಸಿ, ಶೀಘ್ರ ಚೇತರಿಕೆಗೆ ಆಶಿಸಿದರು. ಈ ಸಂದರ್ಭ ಪಕ್ಷದ ಮುಖಂಡರುಗಳಾದ ಎಸ್.ಆರ್. ಸೋಮೇಶ್, ಪಿ.ಕೆ. ಚಂದ್ರು, ಕಿಬ್ಬೆಟ್ಟ ಮಧು, ಶರತ್‌ಚಂದ್ರ, ನೇಗಳ್ಳೆ ಜೀವನ್, ಬಿ.ಎ. ಧರ್ಮಪ್ಪ, ನೇಗಳ್ಳೆ ಸಂದೀಪ್, ಕಿಬ್ಬೆಟ್ಟ ಆನಂದ್, ಪ್ರದಿ, ಬಬಿತ್ ಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಕುಶಾಲನಗರ : ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಕುಶಾಲನಗರ ಭಾರತೀಯ ಜನತಾ ಪಾರ್ಟಿ ಪ್ರಮುಖರು, ಕಾರ್ಯಕರ್ತರು ಹಮ್ಮಿಕೊಂಡರು.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ಎಂ ಎಂ ಚರಣ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಪಕ್ಷದ ಪ್ರಮುಖರಾದ ವರದ, ಯುವ ಮೋರ್ಚಾ ರಾಮನಾಥನ್, ಸಚಿನ್, ನಿರ್ಮಲ, ಅನಿತಾ ಉತ್ತಪ್ಪ ಗೀತಾಂಜಲಿ, ಶಿವಶಂಕರ್, ವೈಶಾಕ್, ಮತ್ತು ಪ್ರವೀಣ್ ಇತರರಿದ್ದರು.

ಶಕ್ತಿ ವೃದ್ಧಾಶ್ರಮದಲ್ಲಿ ಆಚರಣೆ

ಕೂಡಿಗೆ : ಕೂಡುಮಂಗಳೂರು ಮತ್ತು ಕೂಡಿಗೆ ಶಕ್ತಿ ಕೇಂದ್ರದ ವತಿಯಿಂದ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಕೂಡುಮಂಗಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷ ಬಿ.ವಿ. ಪ್ರವೀಣ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್, ಕೂಡಿಗೆ ಶಕ್ತಿ ಕೇಂದ್ರದ ಪ್ರಬಾರಿ ಹೆಚ್.ಎಂ. ರವಿ, ಉದ್ಯಮಿ ಕಿಶೋರ್ ಕುಮಾರ್, ಕೆ.ವರದ, ಬಿಜೆಪಿ ಪಕ್ಷದ ಪ್ರಮುಖರಾದ ಗಣೇಶ್, ಕುಮಾರ್ ಸ್ವಾಮಿ, ಕೆ.ಕನಕ, ಕೆ.ಬಿ.ಪ್ರಕಾಶ್, ಕೆ.ಡಿ.ಲೋಕೇಶ್, ಕೇಶವ ರೈ, ಸುಬ್ಬಯ್ಯ, ಅರ್.ಕೆ. ಜಯಂತ್, ರಾಜು ಸೇರಿದಂತೆ ಕೂಡಿಗೆ, ಕೂಡುಮಂಗಳೂರು ಬಿಜೆಪಿ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.