ಮಡಿಕೇರಿ, ಜು. ೪: ಜಿಲ್ಲೆಯ ಆಕರ್ಷಣಿಯ ಪ್ರವಾಸಿ ತಾಣವಾದ ಮಾಂದಲಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಚಾಲಕರು ಇದೀಗ ಅಪವಾದದ ಬೇಗೆಯಲ್ಲಿ ಸಿಲುಕಿ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಚಾಲಕರು ತಮ್ಮ ಕೆಲಸ ಸ್ಥಗಿತಗೊಳಿಸದೆ ಚಾಲನೆ ಮುಂದುವರೆಸಿದ್ದಾರೆ.
ಮಾಂದಲಪಟ್ಟಿ ಹಾಗೂ ಅಬ್ಬಿ ಜಲಪಾತಗಳ ರಸ್ತೆ ನಡುವಿನ ನಂದಿಮೊಟ್ಟೆ ಜಂಕ್ಷನ್ನಲ್ಲಿ ಜೀಪ್ ನಿಲುಗಡೆಯನ್ನು ನಿರ್ಬಂಧಿಸಿ ಸ್ಥಳೀಯ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಆದೇಶ ನೀಡಿದೆ. ಈ ಸಂಬAಧ ಜಿಲ್ಲಾಧಿಕಾರಿಗೂ ಪತ್ರ ಬರೆದು ತಿಳಿಸಲಾಗಿದೆ. ಈ ಹಿನ್ನೆಲೆ ಜಂಕ್ಷನ್ನಲ್ಲಿ ‘ನಂದಿಮೊಟ್ಟೆಯಿAದ ಮಾಂದಲಪಟ್ಟಿಗೆ ಜೀಪ್ ಟ್ರಿಪ್ ಹೋಗುವುದು ಮತ್ತು ಜೀಪ್ ನಿಲ್ಲಿಸುವುದನ್ನು ನಿರ್ಬಂಧಿಸಲಾಗಿದೆ’ ಎಂಬ ಪ್ರಕಟಣೆಯ ಬ್ಯಾನರ್ ಅನ್ನು ಪಂಚಾಯಿತಿಯಿAದ ಅಳವಡಿಸಲಾಗಿದೆ. ಇದರೊಂದಿಗೆ ಚಾಲಕರು ಅಳವಡಿಸಿದ್ದ ಫಲಕವನ್ನು ತೆರವು ಮಾಡಲಾಗಿದೆ. ಇದಕ್ಕೆ ಒಪ್ಪದ ಚಾಲಕರು ತಮ್ಮ ಚಾಲನೆ ವೃತ್ತಿಯನ್ನು ಎಂದಿನAತೆ ಮುಂದುವರೆಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಪವಾದಕ್ಕೆ ಚಾಲಕರಿಂದ ಪ್ರತಿರೋಧ
ತಾ. ೧ ರಂದು ಕೆ. ನಿಡುಗಣೆ ಗ್ರಾ.ಪಂ. ತುರ್ತು ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡು ವಾಹನ ಚಾಲನೆ ಹಾಗೂ ನಿಲುಗಡೆ ನಿರ್ಬಂಧಕ್ಕೆ ನಿರ್ಧರಿಸಿ ಕ್ರಮಕೈಗೊಳಲಾಗಿತ್ತು. ಇದಕ್ಕೆ ನೀಡಿರುವ ಅಂಶಗಳು ಚಾಲಕ ವಲಯ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿಂದೆ ಸಣ್ಣಪುಟ್ಟ ಘರ್ಷಣೆಗಳು ನಡೆದಿವೆ. ಆ ತಪ್ಪುಗಳು ಪುನರಾರ್ವತನೆ ಆಗದ ರೀತಿ ಎಚ್ಚರವಹಿಸಿ ಕಾನೂನು, ಸುವ್ಯವಸ್ಥೆ ಕಾಪಾಡಲು ಚಾಲಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಇದೀಗ ಪಂಚಾಯಿತಿ ಅಪವಾದ ಹೊರಿಸಿ ಚಾಲಕರ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಚಾಲಕರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
‘ಪ್ರವಾಸಿಗರಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ. ಗ್ರಾಮಸ್ಥರಿಗೆ ಕಿರುಕುಳ ನೀಡಲಾಗುತ್ತಿದೆ. ಪ್ರಯಾಣಿಕರ ತಂಗುದಾಣದÀಲ್ಲಿ ಕುಳಿತು ಅನುಚಿತ ವರ್ತನೆಯಿಂದಾಗಿ ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗುತ್ತಿದೆ. ಮದ್ಯಪಾನ ಮಾಡಿ ಜೂಜಾಡಲಾಗುತ್ತಿದೆ’ ಎಂಬೆಲ್ಲ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿರುವ ಚಾಲಕರು ಈ ಕುರಿತು ಸಾಕ್ಷö್ಯಗಳಿದ್ದರೆ ಬಹಿರಂಗಪಡಿಸಲಿ ಎಂಬ ಸವಾಲನ್ನು ಹಾಕಿದ್ದಾರೆ.
(ಮೊದಲ ಪುಟದಿಂದ)
ಜೀವನದ ಮೇಲೆ ಪೆಟ್ಟು
ಗ್ರಾ.ಪಂ. ಕೈಗೊಂಡ ನಿರ್ಣಯ ಚಾಲಕರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದಂತಾಗಿದೆ. ಚಾಲನೆಯನ್ನು ನಂಬಿ ಸುಮಾರು ೧೨೦ ಚಾಲಕರು ಜೀವನ ಕಟ್ಟಿಕೊಂಡಿದ್ದಾರೆ. ಯಾವುದೇ ಸಭೆ ನಡೆಸದೆ, ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ನಿರ್ಧಾರದಿಂದ ಚಾಲಕರ ಬದುಕು ‘ಬಾಣಲೆಯಿಂದ ಬೆಂಕಿಗೆ’ ಬಿದ್ದಂತಾಗಿದೆ ಎಂದು ಚಾಲಕರು ತಮ್ಮ ನೋವನ್ನು ಹಂಚಿಕೊAಡಿದ್ದಾರೆ.
ಮೊದಲು ವೈಟ್ ಬೋರ್ಡ್ ವಾಹನಗಳನ್ನು ಬಳಸಿಕೊಂಡ ಜೀಪ್ ಚಾಲನೆ ಮಾಡುವ ಆರೋಪವಿತ್ತು. ಇದೀಗ ಚಾಲಕರೆಲ್ಲ ವೈಟ್ ಬೋರ್ಡ್ನಿಂದ ಹಳದಿ ಬೋರ್ಡ್ಗೆ ವಾಹನವನ್ನು ಪರಿವರ್ತಿಸಿದ್ದಾರೆ. ಇದಕ್ಕಾಗಿ ೧೫ ರಿಂದ ೨೦ ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಅದಲ್ಲದೆ ತೆರಿಗೆ, ಎಫ್.ಸಿ. ಸೇರಿದಂತೆ ಇನ್ನಿತರ ಸರಕಾರಿ ಕೆಲಸಕ್ಕೆ ವರ್ಷಕ್ಕೆ ೩೫ ರಿಂದ ೬೦ ಸಾವಿರ ಖರ್ಚು ತಗಲುತ್ತದೆ. ಜೊತೆಗೆ ವಾಹನದ ಮೇಲಿನ ಬ್ಯಾಂಕ್ ಸಾಲವನ್ನು ತೀರಿಸಬೇಕು. ವಾಹನ ನಿರ್ವಹಣೆಯೂ ಹೆಚ್ಚಿದೆ. ಇಂತಹ ಸಮಯದಲ್ಲಿ ಸ್ಥಳೀಯಾಡಳಿತ ಮಾಡಿದ ನಿರ್ಧಾರದ ಬಗ್ಗೆ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘೧೪ ವರ್ಷದಿಂದಲ್ಲದ ಆರೋಪ’
ನಂದಿಮೊಟ್ಟೆ ಜಂಕ್ಷನ್ನಲ್ಲಿ ಕಳೆದ ೧೪-೧೫ ವರ್ಷಗಳಿಂದ ಜೀಪ್ ಚಾಲಕರು ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ವರ್ಷ ಮಹಿಳೆಯರ ಮೇಲೆ ಅನುಚಿತ ವರ್ತನೆ ತೋರಿದ ಆರೋಪವಿರಲಿಲ್ಲ. ದಿಢೀರನೆ ಈ ಆರೋಪದ ಹಿಂದಿನ ಕಾರಣವೇನು? ಎಂದು ಚಾಲಕರು ಪ್ರಶ್ನಿಸುತ್ತಿದ್ದಾರೆ.
ಇಲ್ಲಿರುವ ಎಲ್ಲಾ ಚಾಲಕರು ಸ್ಥಳೀಯರೇ ಆಗಿದ್ದಾರೆ. ಇದುವರೆಗೂ ಈ ಕುರಿತು ಯಾವುದೇ ದೂರುಗಳಿರಲಿಲ್ಲ. ಕೆಲವರ ಕೈವಾಡದಿಂದ ಈ ರೀತಿ ಆರೋಪವನ್ನು ನಮ್ಮ ಮೇಲೆ ಹೊರಿಸಲಾಗುತ್ತಿದೆ ಎಂದು ಚಾಲಕರು ಹೇಳುತ್ತಿದ್ದಾರೆ. ಇತ್ತೀಚೆಗೆ ವೇಗವಾಗಿ ಹೋಗಿ ವಾಹನ ಒಂದು ಮಗುಚಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಈ ವಾಹನ ನಮ್ಮ ನಿಲ್ದಾಣಕ್ಕೆ ಸೇರಿದ್ದಲ್ಲ. ಬೇರೆ ಕಡೆಯಿಂದ ಬಂದ ವಾಹನ ಅಪಘಾತವಾಗಿದೆ. ಈ ಆರೋಪವನ್ನು ನಂದಿಮೊಟ್ಟೆ ಚಾಲಕರ ಮೇಲೆ ಹೊರಿಸಲಾಗಿದೆ. ಸಂಚಾರ ಸಮಸ್ಯೆ ಏರ್ಪಟ್ಟರೆ ನಾವೇ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಜೀಪ್ಗಳ ದಟ್ಟಣೆಯಾಗಬಾರದೆಂದು ಒಂದು ವಾಹನ ತೆರಳಿದ ನಂತರ ಮತ್ತೊಂದು ವಾಹನ ಬಂದು ನಿಲ್ಲಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದೇವೆ ಎಂದು ಚಾಲಕರು ತಿಳಿಸಿದ್ದಾರೆ.
ಟಿ ಹೆಚ್.ಜೆ. ರಾಕೇಶ್