ತಿತಿಮತಿ: ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲೆಯಲ್ಲಿ ಮತದಾನದ ಮೂಲಕ ಶಾಲಾ ಸಂಸತ್ತು ರಚನೆ ಮಾಡಲಾಯಿತು. ಶಾಲಾ ಸಂಸತ್ ಚುನಾವಣೆಯು ಚುನಾವಣಾ ಆಯೋಗದ ನೀತಿ ನಿಯಮಗಳ ಪ್ರಕಾರ ನಡೆಸಲಾಯಿತು.

ಶಾಲಾ ನಾಯಕನಾಗಿ ಹರ್ಷನ್‌ಕುಮಾರ್ ಹಾಗೂ ಶಾಲಾ ನಾಯಕಿಯಾಗಿ ಎಂ.ಎA. ಶ್ರದ್ಧಾ ಆಯ್ಕೆಯಾದರು. ಅದೇ ರೀತಿ ಕ್ರೀಡಾ ಮಂತ್ರಿ, ಸಾಂಸ್ಕೃತಿಕ ಮಂತ್ರಿ ಮತ್ತು ಆರೋಗ್ಯ ಮಂತ್ರಿ ಖಾತೆಗಳಿಗೆ ಚುನಾವಣೆ ನಡೆಯಿತು.

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೊ ವಿಶ್ವ ವಿದ್ಯಾನಿಲಯದ ಮಾರ್ಕೆಟಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ಡಾ. ವಿನುಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಬರೀಶ್, ರೇಷ್ಮಾ ಶಬರೀಶ್, ಕಾರ್ಯದರ್ಶಿ ಸುಮನ್ ಮೂಡಗದ್ದೆ, ಪ್ರಾಂಶುಪಾಲ ಲತೀಶ್ ಶಂಕರ್ ಹಾಗೂ ಮುಖ್ಯೋಪಾಧ್ಯಾಯಿನಿ ಅಫೋಲಿನ್ ಡಿಸೋಜ ಉಪಸ್ಥಿತರಿದ್ದರು.

ಶಿಕ್ಷಕರ ಸಹಕಾರದಿಂದ ಮತದಾನ ಹಾಗೂ ಶಾಲಾ ಸಂಸತ್ ರಚನೆ ಸುಗಮವಾಗಿ ನಡೆಯಿತು.

ಚೆಟ್ಟಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯ ಕಾವು ಕಂಡು ಬಂತು. ಚುನಾವಣೆಯ ಪ್ರಕಿಯೆಯಂತೆ ಮೊದಲಿಗೆ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಯಿತು. ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದು ಅಭ್ಯರ್ಥಿಗಳಿಗೆಲ್ಲ ಚಿಹ್ನೆ ನೀಡಲಾಯಿತು. ಮತ ನೀಡಿ ಗೆಲ್ಲಿಸಿದರೆ ಶಾಲಾ ಅಭಿವೃದ್ಧಿಗೆ ಶ್ರಮವಹಿಸುವ ಭರವಸೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಂಡ ಅಭ್ಯರ್ಥಿಗಳು ಮತದಾರರ ಮನ ಒಲಿಸುವ ದೃಶ್ಯ ಕಂಡು ಬಂದಿತು.

ಚುನಾವಣಾ ದಿನದಂದು ಸರದಿ ಸಾಲಿನಲ್ಲಿ ನಿಂತ ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಮತದಾನದ ಚೀಟಿ ಪಡೆದು ಅಭ್ಯರ್ಥಿಗಳಿಗೆ ಮತಚಲಾಯಿಸಿದರು. ಮತ ಎಣಿಕೆಯ ಸಂದರ್ಭ ಅತಿ ಹೆಚ್ಚಿನ ಮತಪಡೆದ ಅಭ್ಯರ್ಥಿಯನ್ನು ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿಯೂ ಕ್ರಮವಾಗಿ ಉಪಮುಖ್ಯಮಂತ್ರಿ, ಗೃಹ, ಆರೋಗ್ಯ, ಕ್ರೀಡಾ, ತೋಟಗಾರಿಕಾ, ವಾರ್ತಾ, ನೀರಾವರಿ ಮಂತ್ರಿಗಳ ೧೧ ಖಾತೆಗಳನ್ನು ನೀಡಲಾಯಿತು.

ಚುನಾವಣಾ ಮೇಲ್ವಿಚಾರಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ರಮಾ ಪಿ.ಕೆ. ಕಾರ್ಯನಿರ್ವಸಿದರು. ಸಿಆರ್‌ಪಿ ಅಶೋಕ್ ಸೇರಿದಂತೆ ಸಹಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಾಲಾ ಸಂಸತ್‌ಗೆ ಆಯ್ಕೆಗೊಂಡ ಮಂತ್ರಿಗಳೆಲ್ಲ ಶಾಲಾ ಶಿಕ್ಷಕರ, ಎಸ್ ಡಿಎಂಸಿ ಹಾಗೂ ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ ರಚನೆ ಮಾಡಲಾಯಿತು. ಕಾಲೇಜಿನ ನಾಯಕನಾಗಿ ಅರ್ವಿನ್, ನಾಯಕಿಯಾಗಿ ಅನುಶ್ರೀ, ಪ್ರೌಢಶಾಲಾ ನಾಯಕನಾಗಿ ಅರ್ಜುನ್ ಮಹೇಂದ್ರ, ನಾಯಕಿಯಾಗಿ ಆಂಚಲ್ ಆಯ್ಕೆಯಾಗಿದ್ದಾರೆ.

ಶಾಲಾ ಸಂಚಾಲಕ ಡೇವಿಡ್ ಸಗಯಾ ರಾಜ್ ವಿದ್ಯಾರ್ಥಿಗಳ ಮಂತ್ರಿ ಮಂಡಲಕ್ಕೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ವಿದ್ಯಾಸಂಸ್ಥೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸುಂಟಿಕೊಪ್ಪ: ಪ್ರಜಾಪ್ರಭುತ್ವ ಯಶಸ್ವಿಯಾಗಿ ನಿರಂತರವಾಗಿ ಮುಂದುವರಿಯಲು ಮತದಾನ ಪ್ರಕ್ರಿಯೆ ಬಹಳ ಅಗತ್ಯ ಎಂದು ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಅಭಿಪ್ರಾಯಪಟ್ಟರು.

ಸ್ಥಳೀಯ ಸರಕಾರಿ ಪ್ರೌಢಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಹಿನ್ನೆಲೆ ಶಾಲಾವರಣದಲ್ಲಿ ಬಾಳೆ ಹಾಗೂ ತಳಿರುತೋರಣ ಹಾಗೂ ಚುನಾವಣಾ ಪ್ರಚಾರದ ಮಾಹಿತಿ ಭಿತ್ತಿಪತ್ರಗಳನ್ನು ಅಳವಡಿಸುವ ಮೂಲಕ ಮಕ್ಕಳಿಗೆ ಚುನಾವಣೆಯ ವಾತಾವರಣವನ್ನು ಸೃಷ್ಟಿಸಲಾಗಿತ್ತು.

ಶಾಲಾ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅದರ ಬೆನ್ನಲುಬು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿ ಮತದಾನದ ಮಹತ್ವವನ್ನು ಸಾರುವ ಶಾಲಾ ಸಂಸತ್ ಚುನಾವಣೆ ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪಿ.ಎಫ್. ಸಬಾಸ್ಟಿನ್ ಮಾತನಾಡಿ ಪ್ರತಿನಿಧಿಗಳಾಗಿ ಆಯ್ಕೆಗೊಂಡವರು ಶಾಲೆಯ ಅಭಿವೃದ್ದಿ, ಶಾಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಹಾಗೂ ಸಮಸ್ಯೆ ಪರಿಹಾರಕ್ಕೆ ಮುನ್ನುಡಿಯಾಗಿ ಸೇವೆ ಸಲ್ಲಿಸಬೇಕು. ಅಲ್ಲದೆ ಪ್ರಶ್ನಿಸುವ ಮನೋಭಾವನೆಯನ್ನು ರೂಢಿಸಿಕೊಂಡರೆ ಶಾಲೆಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ಅವರು ಚುನಾವಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಶಾಲೆಯ ಸಹಶಿಕ್ಷರು ಪ್ರಾಥಮಿಕ ಶಾಲೆಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಮಾದರಿ ಚುನಾವಣಾ ನೀತಿ ನಿಯಮಗಳಂತೆ ವಿವಿಧ ಚುನಾವಣಾ ಅಧಿಕಾರಿ,