ಸೋಮವಾರಪೇಟೆ, ಜೂ.೨೯: ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ರೂ. ೯.೯೯ ಕೋಟಿ ಅನುದಾನ ಬಿಡುಗಡೆಯಾಗಿದೆ. ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆ, ಸೋಮವಾರಪೇಟೆಯಲ್ಲಿ ಹೃದಯ ಸಂಬAಧಿ ರೋಗಗಳ ತಪಾಸಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ತಿಳಿಸಿದರು.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ಸೋಮವಾರಪೇಟೆ ಪಟ್ಟಣದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ಸ್ಥಾಪನೆ ಹಾಗೂ ಹೃದಯ ಸಂಬAಧಿ ಕಾಯಿಲೆಗಳ ತಪಾಸಣಾ ಘಟಕ ನಿರ್ಮಾಣ ಮಾಡಲಾಗುವುದು. ಇದಕ್ಕೆ ಈಗಾಗಲೇ ಸಂಘದಿAದ ೯ ಕೋಟಿ ೯೯ ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
ಸೋಮವಾರಪೇಟೆಯ ಬಸವೇಶ್ವರ ರಸ್ತೆಯಲ್ಲಿ ಈಗಾಗಲೇ ಜಾಗ ಖರೀದಿಸಲಾಗಿದ್ದು, ಮುಂದಿನ ತಿಂಗಳು ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಹಾಗೂ ಹೃದ್ರೋಗ ಸಂಬAಧಿತ ತಪಾಸಣಾ ಘಟಕ ಸ್ಥಾಪಿಸಲಾಗುವುದು. ಎಕೋ, ಇಸಿಜಿ, ಥ್ರೆಡ್ಮಿಲ್ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಲಾಗುವುದು ಎಂದು ರವೀಂದ್ರ ಮಾಹಿತಿ ನೀಡಿದರು.
ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆದು ಈಗಾಗಲೇ ೩೦ ತಿಂಗಳು ಕಳೆದಿವೆ. ಈ ಅವಧಿಯಲ್ಲಿ ವಾರ್ಷಿಕ ೧೫ ಮಂದಿ ವಿದ್ಯಾರ್ಥಿಗಳಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ತನ್ನ ಕೋಟಾವನ್ನು ಸಂಪೂರ್ಣವಾಗಿ ಕೊಡಗಿನ ಸಮುದಾಯ ಬಾಂಧವರಿಗೆ ಬಳಸಲಾಗಿದೆ ಎಂದರು.
ಕಳೆದ ೨೫ ವರ್ಷಗಳಿಂದ ಒಕ್ಕಲಿಗರ ಸಂಘವನ್ನು ಕೊಡಗು ಜಿಲ್ಲೆಯ ಮೂಲಕ ಪ್ರತಿನಿಧಿಸುತ್ತಿದ್ದವರು ಯಾವುದೇ ಸೌಕರ್ಯ ಕಲ್ಪಿಸಿರಲಿಲ್ಲ. ಈ ಕೊರತೆಯನ್ನು ಇದೀಗ ನೀಗಿಸಲಾಗಿದೆ. ಸೋಮವಾರಪೇಟೆಯಲ್ಲಿ ೧೦೦ ಬೆಡ್ ಸಾಮರ್ಥ್ಯದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಕುಶಾಲನಗದರಲ್ಲಿ ವಸತಿ ನಿಲಯ ಸ್ಥಾಪನೆಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ.
ಜು. ೪ರಂದು ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಬಾಲಕೃಷ್ಣ ಅವರು ಅಧ್ಯಕ್ಷರಾದರೆ ಆಗಸ್ಟ್ ತಿಂಗಳಿನಲ್ಲಿಯೇ ಕುಶಾಲನಗರದಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿಯಿತ್ತರು.
ಇದರೊಂದಿಗೆ ಸೋಮವಾರಪೇಟೆ ಭಾಗದಲ್ಲಿ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಬೇಡಿಕೆಯಿರಿಸಲಾಗಿದೆ. ಒಕ್ಕಲಿಗರ ಸಂಘದಿAದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹರಪಳ್ಳಿ ರವೀಂದ್ರ ತಿಳಿಸಿದರು.