ಮಡಿಕೇರಿ, ಜೂ. ೨೮: ಮೇಕೇರಿ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿ ೨ ಕಾರುಗಳು ಜಖಂಗೊAಡಿವೆ.
ಮಡಿಕೇರಿಯಿAದ ತೆರಳುತ್ತಿದ್ದ, ಮೂರ್ನಾಡು ಕಡೆಯಿಂದ ಬರುತ್ತಿದ್ದ ಕಾರುಗಳ ನಡುವೆ ಮುಖಾಮುಖಿ ಅಪಘಾತವಾಗಿದೆ. ಇದರಿಂದ ಮೂರ್ನಾಡುವಿನಿಂದ ಬರುತ್ತಿದ್ದ ಕಾರಿನ ಹಿಂಭಾಗವಿದ್ದ ಬಸ್ಗೂ ಹಾನಿಯಾಗಿದೆ. ಅಪಘಾತದ ಹಿನ್ನೆಲೆ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಪೊಲೀಸರು ತೆರಳಿ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.