ಗೋಣಿಕೊಪ್ಪಲು,ಜೂ.೨೮: ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಗಾಂಜಾವಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗೋಣಿಕೊಪ್ಪದ ಕಾವೇರಿ ಹಿಲ್ಸ್ ಬಡಾವಣೆಯ ಅಬ್ದುಲ್ ಸಾಹಿಲ್ (೨೨) ಬಂಧಿತ ಆರೋಪಿ.

ಖಚಿತ ಮಾಹಿತಿಯ ಮೇರೆ ಆರೋಪಿಯ ಮನೆ ಮೇಲೆ ದಾಳಿ ನಡೆಸಿದ ಗೋಣಿಕೊಪ್ಪ ಪೊಲೀಸರು ಆರೋಪಿ ಸಹಿತ ೬೦೦ ಗ್ರಾಂ. ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಆರೋಪಿಯ ಮೊಬೈಲ್ ಹಾಗೂ ಟ್ಯಾಬ್ ಅನ್ನು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನ, ಸಿಪಿಐ ಶಿವರಾಜ್ ಆರ್. ಮುದೋಳ್ ನಿರ್ದೇಶನ, ಎಸ್. ರೂಪಾದೇವಿ ಬಿರಾದರ್, ಕ್ರೆöÊಂ ವಿಭಾಗದ ಎಸ್‌ಐ ಟಿ.ಎಂ. ಕಾವೇರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಚಂದ್ರಶೇಖರ್, ಅನೀಫ್, ರಾಘವೇಂದ್ರ, ದರ್ಶನ್, ವೀರೇಶ್, ಲೋಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಆರೋಪಿಯನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.