ಮಡಿಕೇರಿ, ಜೂ. ೨೦: ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿ (ವೆಹಿಕಲ್ ಲೋಕೇಶನ್ ಟ್ರಾö್ಯಕಿಂಗ್) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮಹಿಳೆಯರು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದನ್ನು ಪಾಲಿಸದಿದ್ದಲ್ಲಿ ಅಂತಹ ವಾಹನಗಳ ದೃಢತಾ ಸರ್ಟಿಫಿಕೇಟ್ (ಎಫ್‌ಸಿ)ನ್ನು ನವೀಕರಣ ಸಂದರ್ಭ ತಡೆಹಿಡಿಯಲು ಸಂಬಧಿಸಿದ ಇಲಾಖೆಗೆ ಸೂಚನೆ ನೀಡಿದೆ.

ಸಾರ್ವಜನಿಕ ಸೇವಾ ವಾಹನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ದರೋಡೆ ಕೃತ್ಯಗಳು ನಡೆಯುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಎಲ್‌ಟಿ ಹಾಗೂ ತುರ್ತು ಪ್ಯಾನಿಕ್ ಬಟನ್‌ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಪ್ರಯೋಜನವೇನು ?

ವಿಎಲ್‌ಟಿ ತುರ್ತು ಪ್ಯಾನಿಕ್ ಬಟನ್‌ಗಳನ್ನು ಸಾರ್ವಜನಿಕ ಸೇವಾ ವಾಹನಗಳಲ್ಲಿ ಅಳವಡಿಸುವುದರಿಂದ ಪ್ರಯಾಣದ ಸಂದರ್ಭ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರು ಉಂಟಾದರೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ದರೋಡೆ ಕೃತ್ಯಗಳು ನಡೆದರೆ ಮತ್ತು ಯಾವುದೇ ತುರ್ತು ಅವಘಡದ ಸಂದರ್ಭಗಳಲ್ಲಿ ವಾಹನಗಳಲ್ಲಿರುವ ಪ್ಯಾನಿಕ್ ಬಟನ್ ಒತ್ತಿದರೆ ಕ್ಷಣಾರ್ಧದಲ್ಲಿ ಕಮಾಂಡ್ ಸೆಂಟರ್‌ಗೆ ಸಂದೇಶ ರವಾನೆ ಯಾಗುತ್ತದೆ. ಕಮಾಂಡ್ ಸೆಂಟರ್ ವಾಹನ ಲೊಕೇಶನ್ ಸಹಿತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಆ ಮೂಲಕ ಸಂಭವಿಸಬಹುದಾದ ಅವಘಡವನ್ನು ತಡೆಯುವುದಕ್ಕಾಗಿ ಈ ನಿಯಮ ಜಾರಿ ಮಾಡಲಾಗಿದೆ.

ಯಾವ್ಯಾವ ವಾಹನಗಳಿಗೆ ಅನ್ವಯ?

ಸಾರ್ವಜನಿಕ ಸೇವಾ ವಾಹನ ಗಳಾದ ಹಳದಿ ಸಂಖ್ಯಾ ಫಲಕದ ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್, ಜೀಪು, ರಾಷ್ಟಿçÃಯ ಪರವಾನಗಿ ಪಡೆದ ಸರಕು ಸಾಗಾಟ ವಾಹನಗಳಿಗೆ ವಿಎಲ್‌ಟಿ ಉಪಕರಣ ಮತ್ತು ಪ್ಯಾನಿಕ್ ಬಟನ್ ಅವಳವಡಿಕೆ ಆದೇಶ ಅನ್ವಯ ವಾಗುತ್ತದೆ. ನವೆಂಬರ್ ೩೦ ರೊಳಗೆ ಇವುಗಳನ್ನು ಅಳವಡಿಸಲು ಅಂತಿಮ ಗಡುವು ನೀಡಲಾಗಿದೆ.

ಕೊಡಗಿನಲ್ಲೂ ಇದು ಜಾರಿ ಯಾಗಲಿದೆ. ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಒದಗಿಸಿ ಅಳವಡಿಸುವ ನಿಟ್ಟಿನಲ್ಲಿ ಕೆಲ ಅಧಿಕೃತ ಏಜೆನ್ಸಿ ಸದ್ಯದಲ್ಲಿಯೆ ಕಾರ್ಯಾರಂಭ ಮಾಡಲಿವೆ. ಈ ನಿಯಮ ಜಾರಿಗೆ ಸಂಬAಧಿಸಿದAತೆ ಸಾರಿಗೆ ಇಲಾಖೆ ಯಿಂದ ಅಧಿಕಾರಿಗಳಿಗೆ ಒಂದು ಹಂತದ ತರಬೇತಿ ನೀಡಲಾಗಿದ್ದು, ಮತ್ತೊಂದು ಹಂತದ ತರಬೇತಿ ಸದ್ಯದಲ್ಲೇ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾಚಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.