ಗೋಣಿಕೊಪ್ಪ, ಜೂ. ೨೦: ಸುಮಾರು ೭೨ ವರ್ಷಕ್ಕೂ ಹಳೆಯದಾದ ಕಟ್ಟಡ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಅದರೊಳಗಿದ್ದ ಏಳು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವಾಣಿಜ್ಯ ನಗರಿ ಎಂದೇ ಖ್ಯಾತಿವೆತ್ತಿರುವ ದಕ್ಷಿಣ ಕೊಡಗಿನ ಗೋಣಿಕೊಪ್ಪ ನಗರದಲ್ಲಿ ಸಂಭವಿಸಿದೆ.
ನಗರದ ಮುಖ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದ ಅಂಬೂರು ಬಿರಿಯಾನಿ ಹೊಟೇಲ್ ಮಾಲೀಕರ ಕುಟುಂಬದ ನಾಲ್ಕು ಸದಸ್ಯರು ಮತ್ತು ಬಿರಿಯಾನಿ ಸೇವಿಸಲು ಬಂದಿದ್ದ ಗ್ರಾಹಕರು, ಸಮೀಪದಲ್ಲೇ ಇದ್ದ ಮಾಂಸದ ಮಳಿಗೆಯ ಇಬ್ಬರು ಕಾರ್ಮಿಕರು ಸೇರಿ ಏಳು ಮಂದಿ ಪಾರಾಗಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯಕ್ಕೆ ಈ ದುರ್ಘಟನೆ ಸಂಭವಿಸಿದೆ.
ಕಟ್ಟಡ ಕುಸಿಯುವ ಸಂದರ್ಭ ಉಂಟಾದ ಶಬ್ದದಿಂದಾಗಿ ನಾಲ್ವರು ಅಪಾಯದಿಂದ ಪಾರಾಗಲು ಸಾಧ್ಯವಾಗಿದೆ. ಬಿರಿಯಾನಿ ಸೇವಿಸಲು ಬಂದ ಮಧು ಎಂಬಾತ ಮಾತ್ರ ಕಟ್ಟಡದ ಅವಶೇಷಗಳಡಿ ಸಿಲುಕಿ ೨ ಗಂಟೆಗಳ ಕಾರ್ಯಾಚರಣೆಯ ನಂತರ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮೂಲತಃ ತಮಿಳುನಾಡಿನ ಧರ್ಮಪುರಿಯ ಮರಡನಹಳ್ಳಿ ಗ್ರಾಮದ ನಿವಾಸಿಗಳಾದ ತಿರುಮುರುಗನ್ (೮೩), ಪತ್ನಿ ಅಲಮೇಲು (೪೬), ಮಗ ನಾರಾಯಣ (೨೩), ಸಿಬ್ಬಂದಿ ಮಹಾಲಿಂಗ (೩೦) ಹಾಗೂ ಗ್ರಾಹಕರಾಗಿ ಬಂದಿದ್ದ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಕಾಡು ಪೈಸಾರಿ ನಿವಾಸಿ ಮಧು ಹಾಗೂ ಅದೇ ಕಟ್ಟಡದ ಮತ್ತೊಂದು ಕೊಠಡಿಯಲ್ಲಿ ಸಮೀರ್ ಎಂಬವರು ನಡೆಸುತ್ತಿದ್ದ ಬ್ಲೂ ಲೈನ್ ಮಾಂಸದ ಮಳಿಗೆಯಲ್ಲಿದ್ದ ಮುಸ್ತಾಫ, ಬಿಲ್ಲು ಪ್ರಾಣಾಪಾಯದಿಂದ ಪಾರಾದವರು.
ಕಟ್ಟಡ ಕುಸಿತಗೊಂಡ ಮಾಹಿತಿ ಲಭ್ಯವಾಗುತ್ತಿದ್ದಂತೆ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರೂಪಾದೇವಿ ಬೀರಾದಾರ್ ತಮ್ಮ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ದೌಡಾಯಿಸಿ ಜನರ ದಟ್ಟಣೆಯನ್ನು ತಡೆಯುವುದರೊಂದಿಗೆ ಮುಖ್ಯ ರಸ್ತೆಯಲ್ಲಿ ಸಂಚಾರ ಬದಲಾವಣೆ ಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸ್ಥಳಕ್ಕೆ ಗೋಣಿಕೊಪ್ಪ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕರೆಸುವುದ ರೊಂದಿಗೆ ಯಂತ್ರಗಳ ಸಹಾಯದಿಂದ ಕಟ್ಟಡದ ಕೆಲವು ಭಾಗಗಳನ್ನು ತೆರವುಗೊಳಿಸಿ ಕಟ್ಟಡದಲ್ಲಿ ಸಿಲುಕಿದ್ದವರನ್ನು ಬಚಾವ್ ಮಾಡುವ ಕ್ರಮ ಕೈಗೊಂಡರು. ಸುದ್ದಿ ತಿಳಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಆರ್ಐ ಸುಧೀಂದ್ರ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ಪೊಲೀಸರೊಂದಿಗೆ ಕೈ ಜೋಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಸದಸ್ಯರಾದ ಶರತ್ಕಾಂತ್, ರಾಜೇಶ್, ಸ್ಥಳೀಯರಾದ ಅಕ್ಷಯ್, ಮಂಜು,
(ಮೊದಲ ಪುಟದಿಂದ) ಸೇರಿದಂತೆ ಹಲವು ಯುವಕರು ತಾವೇ ಮುಂದೆ ತೆರಳಿ ಕಟ್ಟಡದಡಿಯಲ್ಲಿ ಸಿಲುಕಿರುವ ನಾಗರಿಕರನ್ನು ಹೊರತರುವ ಪ್ರಯತ್ನ ನಡೆಸಿದರು.
ಮುಖ್ಯರಸ್ತೆಯಲ್ಲಿ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯ ನಾಗರಿಕರು ಸ್ಥಳದಲ್ಲಿ ಜಮಾವಣೆಗೊಂಡಿದ್ದು ಇವರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿ ೨ ಜೆಸಿಬಿಗಳು ಹಾಗೂ ೧ ಹಿಟಾಚಿ ಯಂತ್ರಗಳು ಕಾರ್ಯನಿರ್ವಹಿಸಿದವು.
ಸ್ಥಳೀಯ ವಾಹನ ಚಾಲಕರ ಸಂಘದ ಸದಸ್ಯರು ಕಟ್ಟಡದ ಅಡಿಯಲ್ಲಿ ಸಿಲುಕಿರುವ ನಾಗರಿಕರನ್ನು ಹೊರತರುವ ಪ್ರಯತ್ನದಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ತರುವ ಮೂಲಕ ಸಹಕರಿಸಿದರು. ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಗುಮ್ಮಟ್ಟಿರ ದರ್ಶನ್, ಬಿಜೆಪಿ ಪ್ರಮುಖ ನೆಲ್ಲಿರ ಚಲನ್ ಕುಮಾರ್, ಆರ್.ಎಂ.ಸಿ. ನಿರ್ದೇಶಕ ಗುಮ್ಮಟ್ಟಿರ ಕಿಲನ್ ಗಣಪತಿ, ಹಲವು ಪ್ರಮುಖರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಸಹಕರಿಸಿ ರಾಶಿರಾಶಿಯಾಗಿ ಬಿದ್ದಿದ್ದ ಕಟ್ಟಡದ ಮರದ ತುಂಡುಗಳು, ಇಟ್ಟಿಗೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಲಾರಿಯ ಮೂಲಕ ಸಾಗಿಸುವ ಪ್ರಯತ್ನಕ್ಕೆ ಕೈ ಜೋಡಿಸಿದರು. ಮುಖ್ಯ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು.
ಅಟ್ಟದಿಂದ ಜೀವ ಉಳಿಯಿತು..!
ಅಂಬೂರು ಬಿರಿಯಾನಿ ಸೆಂಟರ್ನಲ್ಲಿ ಪತ್ನಿ ಅಲುಮೇಲು, ಮಗ ನಾರಾಯಣ, ಸಂಬAಧಿ ಮಹಾಲಿಂಗ ಮಧ್ಯಾಹ್ನ ವೇಳೆ ಊಟಕ್ಕೆ ಬಂದಿದ್ದ ಗ್ರಾಹಕರಿಗೆ ಊಟ ನೀಡುತ್ತಿದ್ದರು.
ಮಧ್ಯಾಹ್ನ ಎರಡು ಗಂಟೆಯ ವೇಳೆ ಇದ್ದಕ್ಕಿದ್ದಂತೆಯೇ ಕಟ್ಟಡವು ಸಂಪೂರ್ಣವಾಗಿ ಕುಸಿದು ನೆಲಸಮವಾಗಿದೆ.
ಕಟ್ಟಡದ ಮೇಲ್ಭಾಗದಲ್ಲಿ ಹಳೆಯ ಕಾಲದ ಮಚ್ಚು (ಸಿಲಿಂಗ್ ಮರದ ಹಲಗೆಗಳು) ಅಳವಡಿಸಿದ ಹಿನ್ನೆಲೆಯಲ್ಲಿ ಮೇಲ್ಬಾಗದ ಮಣ್ಣು, ಇಟ್ಟಿಗೆ ಅದರ ಮೇಲೆಯೇ ಕುಸಿದು ಬಿದ್ದಿದೆ.
ಹಾಗಾಗಿ ಅದರ ಕೆಳಗೆ ಹೊಟೇಲ್ನಲ್ಲಿದ್ದ ಗ್ರಾಹಕರು ಸೇರಿದಂತೆ ಎಲ್ಲರ ಜೀವ ಉಳಿದಿದೆ.
ಅದರೂ ಮರದ ತುಂಡುಗಳು ಬಿದ್ದ ಪರಿಣಾಮವಾಗಿ ಬಿರಿಯಾನಿ ಸೆಂಟರ್ ಮಾಲೀಕ ತಿರುಮುರುಗನ್ ಬಲಗಾಲು ಮುರಿತಕ್ಕೊಳಗಾಗಿದೆ. ಊಟ ಮಾಡುತ್ತಿದ್ದ ಗ್ರಾಹಕ ದೇವರಕಾಡು ಪೈಸಾರಿ ನಿವಾಸಿ ಮಧುವಿನ ಎರಡು ಕಾಲುಗಳು ಮುರಿದು ಹೋಗಿವೆ.
ಉಳಿದಂತೆ ಸೆಂಟರ್ನಲ್ಲಿದ್ದ ಮಾಲೀಕರ ಪತ್ನಿ ಅಲುಮೇಲು ಪ್ರಜ್ಞೆ ತಪ್ಪಿದ್ದಾರೆ, ಮಗ ನಾರಾಯಣನಿಗೆ ಸಣ್ಣಪುಟ್ಟ ಗಾಯ ಸೇರಿದಂತೆ ನಾಲ್ಕು ಮಂದಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದೆ ಅಲ್ಲಿಯೇ ಕುಳಿತಿದ್ದರು.
ನಾಗರಿಕರು, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ ನಂತರ ಜಾಗರೂಕತೆ ವಹಿಸಿ ಮಣ್ಣಿನ ಕೆಳಗೆ ಇದ್ದ ಅಷ್ಟು ಮಂದಿಯನ್ನು ಹೊರ ತರುವಲ್ಲಿ ಯಶಸ್ವಿಯಾದರು.
ಜಿಲ್ಲಾಧಿಕಾರಿ ಭೇಟಿ
ಸುದ್ದಿ ತಿಳಿದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್.ಪಿ. ರಾಮರಾಜನ್, ಸಿಇಒ ವರ್ಣಿತ್ ನೇಗಿ, ಎನ್ಡಿಆರ್ಎಫ್ನ ಅಧಿಕಾರಿ ಅನನ್ಯ ವಾಸುದೇವ್ ತಮ್ಮ ತಂಡದೊAದಿಗೆ ಗೋಣಿಕೊಪ್ಪಕ್ಕೆ ಆಗಮಿಸಿದರು.
ನಂತರ ಎನ್ಡಿಆರ್ಎಫ್ ತಂಡದ ಸಿಬ್ಬಂದಿಗಳು ನೆಲಸಮವಾಗಿದ್ದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಮಂದಿಯನ್ನು ಹೊರ ತರುವಲ್ಲಿ ಯಶಸ್ವಿಯಾದರು.
ಜಿಲ್ಲಾಧಿಕಾರಿ ಭೇಟಿ
ಸುದ್ದಿ ತಿಳಿದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್.ಪಿ. ರಾಮರಾಜನ್, ಸಿಇಒ ವರ್ಣಿತ್ ನೇಗಿ, ಎನ್ಡಿಆರ್ಎಫ್ನ ಅಧಿಕಾರಿ ಅನನ್ಯ ವಾಸುದೇವ್ ತಮ್ಮ ತಂಡದೊAದಿಗೆ ಗೋಣಿಕೊಪ್ಪಕ್ಕೆ ಆಗಮಿಸಿದರು.
ನಂತರ ಎನ್ಡಿಆರ್ಎಫ್ ತಂಡದ ಸಿಬ್ಬಂದಿಗಳು ನೆಲಸಮವಾಗಿದ್ದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಖುದ್ದಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಘಟನೆ ಬಗ್ಗೆ ಮಾಹಿತಿ ಪಡೆದರು.
ಸುಜಾ ಕುಶಾಲಪ್ಪ ಭೇಟಿ
ಮಾಹಿತಿ ತಿಳಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸಂಜೆಯ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿ, ಡಿವೈಎಸ್ಪಿ ಮೋಹನ್ ಕುಮಾರ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ, ಬಿಜೆಪಿ ಪಕ್ಷದ ಪ್ರಮುಖರಾದ ಕೆ. ರಾಜೇಶ್, ಶಾಜಿ, ಮುಂತಾದವರು ಹಾಜರಿದ್ದರು.
ಉಮಾಮಹೇಶ್ವರಿ ಪೆಟ್ರೋಲಿಯಂನ ಮಾಲೀಕ ಕೊಲ್ಲಿರ ಗಯ ತಮ್ಮ ಲಾರಿಯ ಮೂಲಕ ಅವಶೇಷಗಳನ್ನು ತೆರವು ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ರಾತ್ರಿಯ ತನಕವೂ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.
- ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್