ಪ್ರಜ್ವಲ್ ರೇವಣ್ಣಗೆ ತಾ. ೨೪ ರವರೆಗೆ ನ್ಯಾಯಾಂಗ ಬಂಧನ

ಬೆAಗಳೂರು, ಜೂ. ೧೮: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸಿಎಂಎA ವಿಶೇಷ ನ್ಯಾಯಾಲಯ ತಾ. ೨೪ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ೪೨ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೆçÃಟ್ ನ್ಯಾಯಾಲಯವು ತಾ. ೧೨ ರಂದು ಆತನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತಾ. ೧೮ ರವರೆಗೆ ಅವರನ್ನು ವಶಕ್ಕೆ ನೀಡಿತ್ತು. ೩೩ ವರ್ಷದ ಪ್ರಜ್ವಲ್ ರೇವಣ್ಣ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಮೇ ೩೧ ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಹಾಸನ ಚುನಾವಣೆ ನಡೆದ ಒಂದು ದಿನದ ನಂತರ ಅವರು ಏಪ್ರಿಲ್ ೨೭ ರಂದು ಜರ್ಮನಿಗೆ ತೆರಳಿದ್ದರು. ಕೇಂದ್ರೀಯ ತನಿಖಾ ದಳದ ಮೂಲಕ ಎಸ್‌ಐಟಿ ಕೋರಿಕೆಯ ಮೇರೆಗೆ ಇಂಟರ್‌ಪೋಲ್‌ನಿAದ ಈ ಹಿಂದೆ ಆತನ ಇರುವಿಕೆಯ ಬಗ್ಗೆ ಮಾಹಿತಿ ಕೋರಿ ‘ಬ್ಲೂ ಕಾರ್ನರ್ ನೋಟೀಸ್' ನೀಡಲಾಗಿತ್ತು.

ನಟ ದರ್ಶನ್ ಫಾರ್ಮ್ಹೌಸ್‌ನ ಮ್ಯಾನೇಜರ್ ಸಾವಿಗೆ ಶರಣು

ಆನೇಕಲ್, ಜೂ. ೧೮: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಖಾಕಿ ಪಡೆ ಫುಲ್‌ಡ್ರಿಲ್ ಮಾಡುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಸ್ಥಳ ಮಹಜರು ನಡೆಸಿರುವ ಪೊಲೀಸರು ಇದೀಗ ಮೈಸೂರಲ್ಲಿ ಸ್ಥಳ ಮಹಜರು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್‌ರನ್ನ ಕರೆದೊಯ್ದು ಸ್ಥಳ ಮಹಜರು ನಡೆಸಿವ ಸಾಧ್ಯತೆ ಇದೆ. ಕೊಲೆ ಬಳಿಕ ಆರೋಪಿಗಳು ತಂಗಿದ್ದ ಖಾಸಗಿ ಹೊಟೇಲ್ ಹಾಗೂ ಹಲವು ಸ್ಥಳಗಳಲ್ಲಿ ಪೊಲೀಸರು ಪಂಚನಾಮೆ ನಡೆಸಲಿದ್ದಾರೆ. ಇದರ ನಡುವೆ ನಟ ದರ್ಶನ್ ಫಾರ್ಮ್ಹೌಸ್‌ನಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆ ಫಾರ್ಮ್ ಹೌಸ್ ಮ್ಯಾನೇಜರ್ ೩೫ ವರ್ಷದ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದನಂತೆ. ಏಪ್ರಿಲ್ ೧೭ನೇ ತಾರೀಖು ಘಟನೆ ನಡೆದಿದೆ ಎನ್ನಲಾಗಿದೆ. ಮೃತನ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನನ್ನ ವೈಯಕ್ತಿಕ ಕಾರಣದಿಂದ ಅಂದರೆ ಒಂಟಿತನದಿAದ ಬೇಸತ್ತು ನಾನು ಇವತ್ತು ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ. ಮನೆಯವರು ಪೊಲೀಸರಿಗೆ ದೂರು ನೀಡಿದರೂ ಕೂಡ ಯಾರಿಗೂ ತೊಂದರೆ ಕೊಡಬೇಡಿ. ಅವರ ಜೊತೆ ಹೋಗಿದ್ದ, ಇವರ ಜೊತೆ ಹೋಗಿದ್ದ, ಕೊನೆಯ ಬಾರಿಗೆ ಅವರಿಗೆ ಕಾಲ್ ಮಾಡಿದ್ದ ಅಂತ ಎಲ್ಲಾ ತನಿಖೆ ಮಾಡೋದು ಬೇಡ. ಮನೆಯವರಿಗೆ, ನನ್ನ ಸ್ನೇಹಿತರಿಗೂ ಹೇಳ್ತಿದ್ದೀನಿ, ಬಹಳ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸೆಲ್ಫಿ ವೀಡಿಯೋದಲ್ಲಿ ಮೃತ ಶ್ರೀಧರ್ ಹೇಳಿದ್ದಾರೆ. ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿದೆ. ಶ್ರೀಧರ್ ಮೃತ ದೇಹ ಕಂಡು ಮ್ಯಾನೇಜರ್ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ. ಫಾರ್ಮ್ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದನಂತೆ. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಶ್ರೀಧರ್ ಮೃತದೇಹ ಕಲ್ಲು ಬಂಡೆ ಮೇಲೆ ಪತ್ತೆಯಾಗಿತ್ತು. ಅಂದಹಾಗೇ ದುರ್ಗ ಫಾರ್ಮ್ ಹೌಸ್ ಸುಮಾರು ೨ ಎಕರೆ ೩೬ ಗುಂಟೆ ಪ್ರದೇಶದಲ್ಲಿದ್ದು, ನನ್ನ ಸಾವಿಗೆ ನಾನೇ ಕಾರಣ. ಒಂಟಿತನ ಕಾಡುತ್ತಿದೆ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾನೆ ಎನ್ನಲಾದ ಪತ್ರದಲ್ಲಿ ಪತ್ತೆಯಾಗಿದೆ. ಘಟನೆ ಸಂಬAಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ವಾರಣಾಸಿಗೆ ಪ್ರಧಾನಿ ಮೋದಿ - ರೈತರಿಗೆ ರೂ. ೨೦,೦೦೦ ಕೋಟಿ ಬಿಡುಗಡೆ

ವಾರಣಾಸಿ, ಜೂ. ೧೮: ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಮಂಗಳವಾರ ಭೇಟಿ ನೀಡಿದ ನರೇಂದ್ರ ಮೋದಿ, ತಾವು ಗಂಗಾಮಾತೆಯ ದತ್ತು ಪುತ್ರ ಎಂದು ಹೇಳಿದ್ದಾರೆ. ಇಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಒಟ್ಟು ೯.೨೬ ಕೋಟಿ ರೈತರಿಗೆ ಒಟ್ಟು ರೂ. ೨೦ ಸಾವಿರ ಕೋಟಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಮೋದಿ, ವಾರಾಣಸಿಯ ಜನರು ನನ್ನನ್ನು ಮೂರನೇ ಬಾರಿಗೆ ಸಂಸದರಾಗಿ ಮಾತ್ರವಲ್ಲದೆ ದೇಶದ ಪ್ರಧಾನಿಯಾಗಿಯೂ ಆಯ್ಕೆ ಮಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ನಿಜವಾಗಿಯೂ ಅಭೂತಪೂರ್ವ ಮತ್ತು ಇತಿಹಾಸವನ್ನು ಸೃಷ್ಟಿಸಿದೆ ಎಂದರು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ೧೭ನೇ ಕಂತನ್ನು ಬಿಡುಗಡೆ ಮಾಡಲಾಗಿದ್ದು, ಇದು ರೈತರು ಮತ್ತು ಬಡವರಿಗೆ ಸಂಬAಧಿಸಿದ ಹೊಸ ಸರ್ಕಾರದ ಮೊದಲ ನಿರ್ಧಾರ ಎಂದು ಪ್ರಧಾನಿ ಹೇಳಿದರು. "ನಾನು ರೈತರು, ಮಹಿಳೆಯರು, ಯುವಕರು ಮತ್ತು ಬಡವರನ್ನು ‘ವೀಕ್ಷಿತ್ ಭಾರತ್'ನ ಬಲವಾದ ಸ್ತಂಭಗಳಾಗಿ ಪರಿಗಣಿಸುತ್ತೇನೆ. ಬಾಬಾ ವಿಶ್ವನಾಥ್ ಮತ್ತು ಮಾ ಗಂಗಾ ಅವರ ಆಶೀರ್ವಾದ ಮತ್ತು ಕಾಶಿಯ ಜನರ ಅಪಾರ ಪ್ರೀತಿಯಿಂದ ನಾನು ದೇಶದ 'ಪ್ರಧಾನ ಸೇವಕ' ಆಗುವ ಭಾಗ್ಯವನ್ನು ಪಡೆದಿದ್ದೇನೆ. ಮೂರನೇ ಬಾರಿ ಕಾಶಿಯ ಜನರು ತಮ್ಮ ಪ್ರತಿನಿಧಿಯಾಗಿ ನನ್ನನ್ನು ಆಯ್ಕೆ ಮಾಡುವ ಮೂಲಕ ಆಶೀರ್ವದಿಸಿದ್ದಾರೆ ಎಂದು ಹೇಳಿದರು. ಗಂಗಾ ಮಾತೆಯೂ ನನ್ನನ್ನು ದತ್ತು ತೆಗೆದುಕೊಂಡAತೆ ಭಾಸವಾಗುತ್ತಿದೆ. ಗಂಗಾ ಮಾತೆಯು ನನ್ನನ್ನು ಆಕೆಯ ಮಡಿಲಲ್ಲಿ ಇರಿಸಿಕೊಂಡಿದ್ದಾಳೆ. ನಾನು ವಾರಣಾಸಿಯ ಭಾಗವೇ ಆಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.