ಪೆರಾಜೆ, ಜೂ. ೧೮: ಸುಳ್ಯ ತಾಲೂಕಿನ ಕಾಂತಮAಗಲದಲ್ಲಿ ತಲೆಯನ್ನು ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವರನ್ನು ಕೊಲೆ ಮಾಡಿರುವ ಘಟನೆಯ ತನಿಖೆ ಕೈಗೊಂಡ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಆರೋಪಿಯನ್ನು ಸುಳ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ಉದಯ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ನಿವಾಸಿ ವಸಂತ (೪೫) ಎಂಬ ವ್ಯಕ್ತಿಯನ್ನು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆಗೈದ ಸ್ಥಿತಿಯಲ್ಲಿ ಸುಳ್ಯ ತಾಲೂಕಿನ ಕಾಂತಮAಗಲ ಶಾಲಾ ಜಗುಲಿಯಲ್ಲಿ ಮೃತದೇಹ ಪತ್ತೆ ಯಾಗಿತ್ತು. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ದ.ಕ ಜಿಲ್ಲಾ ಪೊಲೀಸರು ೨೪ ಗಂಟೆಯಲ್ಲಿ ಆರೋಪಿಯನ್ನು ಸುಳ್ಯದಲ್ಲೇ ಬಂಧಿಸಿದ್ದಾರೆ.

ತನಿಖೆಯ ಮಜಲು

ಪ್ರಕರಣದ ತನಿಖೆಗೆ ಪೊಲೀಸ್ ಇಲಾಖೆ ತಂಡವನ್ನು ರಚಿಸಿತ್ತು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ

(ಮೊದಲ ಪುಟದಿಂದ) ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಪುತ್ತೂರು ಟೌನ್ ವೃತ್ತ ನಿರೀಕ್ಷಕ ಸತೀಶ್, ಸುಳ್ಯ ಠಾಣಾಧಿಕಾರಿ ಮಹೇಶ್, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತನಿಖೆ ಕೈಗೊಂಡರು.

ಸಿಮ್‌ನಿAದ ಪತ್ತೆ

ಕೊಲೆಯಾದ ಸ್ಥಳದಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ ಪಂಜದ ವ್ಯಕ್ತಿಯ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮತ್ತಷ್ಟು ವಿಚಾರಿಸಿದಾಗ ಅದು ಕೊಲೆಗಾರ ನೆಂಬ ಬಗ್ಗೆ ಮಾಹಿತಿ ಲಭಿಸಿದೆ.

ಬಾರ್‌ನಲ್ಲಿ ಪರಿಚಯ

ಘಟನಾ ಸ್ಥಳದಲ್ಲಿ ಎರಡು ಮದ್ಯದ ಪ್ಯಾಕೆಟ್ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ಮದ್ಯದ ಸ್ಯಾಚೆಟ್ ಯಾವ ಬಾರಿನಲ್ಲಿ ಮಾರಾಟ ಆಗಿದೆ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು. ಸುಳ್ಯದ ಬಾರ್ ಒಂದಕ್ಕೆ ತೆರಳಿ ಇವರಿಬ್ಬರು ಒಟ್ಟಿಗೆ ಮದ್ಯ ಸೇವಿಸುವ ಸಿಸಿ ಟಿವಿ ದೃಶ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದರ ಆಧಾರದಲ್ಲಿ ಪ್ರಕರಣದ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂದಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಘಟನೆ

ಸುಳ್ಯ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ ಕೊಲೆಯಾದ ವಸಂತ ಹಾಗೂ ಆರೋಪಿ ಉದಯ ಅವರುಗಳ ನಡುವೆ ಪರಿಚಯವಾಗಿದೆ. ಬಳಿಕ ಇವರು ಒಟ್ಟಾಗಿ ಸುಳ್ಯದ ಬಾರ್ ಒಂದರಿAದ ಮದ್ಯ ಸೇವಿಸಿ ಒಟ್ಟಾಗಿ ಕಾಂತಮAಗಲ ಶಾಲೆಗೆ ತೆರಳಿದ್ದಾರೆ. ರಾತ್ರಿ ಇವರ ಮಧ್ಯೆ ಕಲಹ ಉಂಟಾಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವದಾಗಿ ಆರೋಪಿ ಹೇಳಿದ್ದಾನೆ ಎಂದು ತಿಳಿಸಿದ್ದಾರೆ.

೮೦೦ ರೂಪಾಯಿಗಾಗಿ ಕೊಲೆ..!

ಕೊಲೆಯಾದ ವಸಂತ ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದವನಾಗಿದ್ದು ಎರಡು ಮದುವೆ ಆಗಿದ್ದಾನೆ. ಆತನ ಮೊದಲ ಹೆಂಡತಿಯ ಮಗಳು ಕಾಂತಮAಗಲ ವಿದ್ಯಾರ್ಥಿ ನಿಲಯದಲ್ಲಿ ಇದ್ದು ಕೊಂಡು ಶಿಕ್ಷಣ ಪಡೆಯುತ್ತಿದ್ದಳು. ತನ್ನ ಪುತ್ರಿಯನ್ನು ನೋಡಲು ಆಗಾಗ್ಗೆ ಕಾಂತಮAಗಲಕ್ಕೆ ಬಂದು ಹೋಗುತ್ತಿದ್ದ. ಹಲವು ಬಾರಿ ಕಾಂತಮAಗಲ ಶಾಲೆಯಲ್ಲೇ ರಾತ್ರಿ ಕಳೆಯುತ್ತಿದ್ದ. ಕೊಲೆ ನಡೆದ ರಾತ್ರಿ ಆತನಿಗೆ ಪರಿಚಯವಾದ ಹೊಸ ಗೆಳೆಯನನ್ನು ಕೂಡ ಕರೆದುಕೊಂಡು ಬಂದಿದ್ದ. ರಾತ್ರಿ ಇಬ್ಬರೂ ಮದ್ಯ ಸೇವಿಸಿ ಮಲಗಿದ್ದಾರೆ. ಮಲಗಿದ್ದಾಗ ವಸಂತ ಅವರಲ್ಲಿದ್ದ ೮೦೦ ರೂಪಾಯಿ ಉದಯನ ಕಣ್ಣಿಗೆ ಬಿದ್ದಿದೆ. ಇದನ್ನು ಕದಿಯಲು ಹಲವು ಸಲ ಪ್ರಯತ್ನ ಮಾಡಿದಾಗ ವಸಂತನಿಗೆ ತಿಳಿದು ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ತಲೆದಿಂಬಿಗಾಗಿ ಇಡಲು ತಂದಿದ್ದ ಕಲ್ಲಿನಿಂದಲೇ ಆತನ ತಲೆಯನ್ನು ಜಜ್ಜಿ ಹಾಕಿ ಕೊಲೆ ಮಾಡಿ ೮೦೦ ರೂಪಾಯಿ ಮತ್ತು ಮೊಬೈಲ್‌ನ್ನು ತೆಗೆದುಕೊಂಡು ಉದಯ ಪರಾರಿಯಾಗಿದ್ದ..!

ತನಿಖೆಯ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳ ಗೈರು-ಎಸ್.ಡಿ.ಎಂ.ಸಿ ಸಭೆ

ಕೊಲೆ ನಡೆದ ಕಾಂತಮAಗಲದ ಸರಕಾರಿ ಶಾಲೆಯಲ್ಲಿ ೯೬ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಲೆಯಾದ ವಿಚಾರ ತಿಳಿದ ಮಕ್ಕಳು ಮಂಗಳವಾರ ಕೇವಲ ೩೪ ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಇದರಿಂದ ಶಾಲೆಯಲ್ಲಿ ಗೊಂದಲ ಉಂಟಾಗಿತ್ತು. ಎಸ್.ಡಿ. ಎಂ.ಸಿ ಯವರು ಶಿಕ್ಷಣಾಧಿಕಾರಿ ಯವರಲ್ಲಿ ರಜೆ ಕೇಳಿದ್ದರು. ಆದರೆ ರಜೆ ನೀಡುವಂತಿಲ್ಲ ಎಂದು ಬಿ.ಇ.ಒ ತಿಳಿಸಿದರು. ಈ ಹಿನ್ನೆಲೆಯಲ್ಲಿ ತುರ್ತು ಎಸ್.ಡಿ.ಎಂ.ಸಿ ಸಭೆ ನಡೆಯಿತು. ಸಭೆಯಲ್ಲಿ ಬಿ.ಇ.ಒ ಕೂಡಾ ಭಾಗವಹಿಸಿದ್ದರು. ಸಭೆಯಲ್ಲಿ ಶಾಲೆಯಲ್ಲಿನ ಭದ್ರತೆಯ ದೃಷ್ಟಿಯಿಂದ ದಾನಿಗಳ ನೆರವಿನಿಂದ ಸಿಸಿ ಟಿವಿ ಅಳವಡಿಕೆ ಮತ್ತು ಶಾಲೆಯ ಜಮೀನಿನ ಸುತ್ತ ತಡೆ ಬೇಲಿ ಅಳವಡಿಸಲು ನಿರ್ಧರಿಸಲಾಯಿತು.

ವರದಿ- ಗಿರೀಶ್ ಪೆರಾಜೆ, ಕುಡೆಕಲ್ ಸಂತೋಷ್